ಹಾಸನ ಮಹಿಳೆ ಅಪಹರಣ ಪ್ರಕರಣದಲ್ಲಿ ಹೊಳೆನರಸೀಪುರ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡುತ್ತಿದ್ದಂತೆ ಇತ್ತ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು
ಹಾಸನ (ಮೇ.13): ಹಾಸನ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದ ಹೊಳೆನರಸೀಪುರದ ಶಾಸಕ, ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೆಚ್‌ಡಿ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು ಆಗುತ್ತಿದ್ದಂತೆ ಇತ್ತ ಹೊಳೆನರಸೀಪುರದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಪಟಾಕಿ ಸಿಡಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಕೈ ತಪ್ಪಿಸಿ ಪಟಾಕಿ ಹೊಡೆಯಲು ಯತ್ನಿಸಿದ ಯುವಕ. ಇನ್ನು ಪಟಾಕಿ ಸದ್ದಿಗೆ ಜಮಾಯಿಸಿದ ಜನರು. ಕೆಲಕಾಲ ರೇವಣ್ಣ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
undefined
Breaking: ಎಚ್‌ಡಿ ರೇವಣ್ಣಗೆ ಜಾಮೀನು ಮಂಜೂರು
ರೇವಣ್ಣ ಪರ ಘೋಷಣೆ ಕೂಗಿದ ಅಭಿಮಾನಿಗಳು:
ನಮ್ಮ ನಾಯಕರು ಮಾಡದ ತಪ್ಪಿಗೆ ಜೈಲಿಗೆ ಕಳಿಸಲಾಗಿತ್ತು. ಈಗ ಅವರಿಗೆ ಜಾಮೀನು ಸಿಕ್ಕಿದೆ. ನಮ್ಮ ನಾಯಕರು ಬಿಡುಗಡೆಯಿಂದ ನಮಗೆ ಖುಷಿಯಾಗಿದೆ. ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತೇವೆ. ಅವರು ಹೊಳೆನರಸೀಪುರಕ್ಕೆ ಬರ್ತಾರೆ. ಇಡೀ ಕ್ಷೇತ್ರ ಮತ್ತೆ ಹೆಚ್ಚಿನ ಅಭಿವೃದ್ಧಿ ಆಗಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಆದರೆ ತಪ್ಪೇ ಮಾಡದ ನಮ್ಮ ನಾಯಕರನ್ನು ಸಿಲುಕಿಸಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಬೆಂಬಲಿಗರು.
ಅಶ್ಲೀಲ ವಿಡಿಯೋ ವೈರಲ್.."ಅಖಿಲ ಕರ್ನಾಟಕಕ್ಕೆ ಹಂಚಿಕೆದಾರ" ಯಾರು..? ಪೆನ್‌ಡ್ರೈವ್ ಪುರಾಣಕ್ಕೆ ಹೊಸ ಟ್ವಿಸ್ಟ್..!
ಈ ರೀತಿ ಮಾಡಿದವರಿಗೆ ಭಗವಂತ ಶಿಕ್ಷೆ ಕೊಡ್ತಾನೆ. ಇಷ್ಟೊಂದು ಅಭಿವೃದ್ಧಿ ಮಾಡಿ ಕೆಲಸ ಮಾಡಿದವರನ್ನ ಜೈಲಿಗೆ ಕಳಿಸಿದ್ದಾರೆ. ಇದು ರಾಜಕೀಯ ಪಿತೂರಿ. ರೇವಣ್ಣನವರು ಯಾವುದೇ ತಪ್ಪು ಮಾಡಿಲ್ಲ. ಯಾರೋ ಮಾಡಿದ ತಪ್ಪಿಗೆ ರೇವಣ್ಣ ಶಿಕ್ಷೆ ಅನುಭವಿಸುವಂತಾಗಿದೆ. ಅವರು ಬಿಡುಗಡೆ ಆಗಿದ್ದು ನಮಗೆಲ್ಲಾ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.