Karnataka Updates: ಮಂಗಳೂರು ಹತ್ಯೆ ಬಗ್ಗೆ ಮಾಹಿತಿ ಪಡೆದ ಶಾ, ವಿಶೇಷ ವಿಮಾನದ ಮೂಲಕ ದೆಹಲಿಗೆ ನಿರ್ಗಮನ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರವಾದ ಮಾಹಿತಿ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಆರಗ ಜ್ಞಾನೇಂದ್ರ ಅವರು, ಶಾ ಅವರು ಮಂಗಳೂರು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಅನೇಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಎಲ್ಲ ವಿವರವನ್ನು ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ. ಎನ್‌ಐಎ ತನಿಖೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು

ಗುರುವಾರ ಬೆಳಗ್ಗೆ 11ಗಂಟೆಗೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂಕಲ್ಪದಿಂದ ಸಿದ್ಧಿ’ಯ 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಪಾಲ್ಗೊಂಡರು. ಬಳಿಕ ಮಧ್ಯಾಹ್ನ ಭೋಜನ ನಂತರ ಯಲಹಂಕದ ಮದರ್‌ ಡೈರಿ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿಂದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ನಿರ್ಗಮಿಸಿದರು. 

9:35 PM

ಮಂಗಳೂರು ಹತ್ಯೆ ಬಗ್ಗೆ ಮಾಹಿತಿ ಪಡೆದ ಶಾ, ವಿಶೇಷ ವಿಮಾನದ ಮೂಲಕ ದೆಹಲಿಗೆ ನಿರ್ಗಮನ

ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರು ಅಧಿಕೃತ ಕಾರ್ಯಕ್ರಮದ ನಿಮಿತ್ತ ಬುಧವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಅಮಿತ್‌ ಶಾ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ವಿವಿಧ ಸಚಿವರು ಹಾಗೂ ಪಕ್ಷದ ನಾಯಕರು ಬರಮಾಡಿಕೊಂಡರು.

ಗುರುವಾರ ಬೆಳಗ್ಗೆ 11ಗಂಟೆಗೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂಕಲ್ಪದಿಂದ ಸಿದ್ಧಿ’ಯ 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಪಾಲ್ಗೊಂಡರು. ಬಳಿಕ ಮಧ್ಯಾಹ್ನ ಭೋಜನ ನಂತರ ಯಲಹಂಕದ ಮದರ್‌ ಡೈರಿ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿಂದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ನಿರ್ಗಮಿಸಿದರು. 

ಮಂಗಳೂರು ಹತ್ಯೆ ಕೇಸ್‌ ಬಗ್ಗೆ ಅಮಿತ್‌ ಶಾಗೆ ಮಾಹಿತಿ: ಆರಗ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರವಾದ ಮಾಹಿತಿ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಆರಗ ಜ್ಞಾನೇಂದ್ರ ಅವರು, ಶಾ ಅವರು ಮಂಗಳೂರು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಅನೇಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಎಲ್ಲ ವಿವರವನ್ನು ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ. ಎನ್‌ಐಎ ತನಿಖೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು

9:21 PM

ಮಂಗಳೂರು ಸರಣಿ ಹತ್ಯೆ: ಅಧಿಕಾರಿಗಳಿಂದ ಖುದ್ದು ಮಾಹಿತಿ ಪಡೆದ ಅಮಿತ್ ಶಾ

ಮಂಗಳೂರು: ಮಂಗಳೂರು ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಗೃಹ ಸಚಿವ ಅಮಿತ್‌ ಶಾ ಖುದ್ದು ಮಾಹಿತಿ ಪಡೆದರು. ಡಿಜಿ - ಐಜಿಪಿ ಪ್ರವೀಣ್ ಸೂದ್ ಮತ್ತು ಇಂಟಲಿಜೆನ್ಸ್ ಎಡಿಜಿಪಿ ದಯಾನಂದ್‌ರಿಂದ ಅಮಿತ್ ಶಾ ಮಾಹಿತಿ ಪಡೆದರು.ಇಂದು ಬೆಳಗ್ಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ತಾಜ್ ಹೋಟೆಲ್ ಕರೆಸಿಕೊಂಡು ಮಂಗಳೂರು ಹತ್ಯೆ ಪ್ರಕರಣದ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದರು. 

ಎರಡು ಪ್ರಕರಣಗಳಲ್ಲಿ ಇಲ್ಲಿಯವರೆಗೆ ಎಷ್ಟು ಜನರ ಬಂಧನವಾಗಿದೆ ಘಟನೆಗೆ ಕಾರಣವೇನು ಎಂಬುದನ್ನ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಮಂಗಳೂರು ಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಭಾರಿ ಚರ್ಚೆಯಾಗಿತ್ತು. ಪ್ರವೀಣ್ ಹತ್ಯೆಯಿಂದ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಸಹ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಹತ್ಯೆ ಪ್ರಕರಣದ ಬಗ್ಗೆ ಖುದ್ದು ಪೊಲೀಸ್ ಅಧಿಕಾರಿಗಳನ್ನ ಕರೆಸಿಕೊಂಡು ಅಮಿತ್‌ ಶಾ ಮಾಹಿತಿ ಪಡೆದರು. 

5:08 PM

ದಕ್ಷಿಣ ಕನ್ನಡದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ: ಆದೇಶ ವಾಪಸ್

ಬೈಕ್‌ನಲ್ಲಿ ಹಿಂಬದಿ ಸವಾರರ ನಿರ್ಬಂಧ ಆದೇಶ ವಾಪಾಸ್ ಪಡೆದ ಪೊಲೀಸ್ ಇಲಾಖೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಆದೇಶ ವಾಪಾಸ್. ತಕ್ಷಣದಿಂದ ಆದೇಶ ವಾಪಾಸ್ ಪಡೆದ ಪೊಲೀಸ್ ಇಲಾಖೆ. ಸಂಜೆ 6 ಗಂಟೆಯಿಂದ ಬೆ.6 ಗಂಟೆಯವೆರೆಗೆ ಬೈಕ್ ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ವಿಧಿಸಿದ್ದ ಪೊಲೀಸ್ ಇಲಾಖೆ. ಭಾರೀ ವಿರೋಧದ ಬೆನ್ನಲ್ಲೇ ಆದೇಶ ವಾಪಾಸ್. ಪರಿಷ್ಕೃತ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಕಮಿಷನರ್ ಮಾಹಿತಿ.

4:58 PM

ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆ

ಹವಾಮಾನ ಇಲಾಖೆಯಿಂದ  ಮಾಹಿತಿ, ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಸಾಧ್ಯತೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್, ನಾಳೆ ರೆಡ್ ಅಲರ್ಟ್, 6ನೇ ತಾರೀಖು ಆರೆಂಜ್ ಅಲರ್ಟ್. ಕೊನೆಯ ಎರಡು ದಿನ ಯಲ್ಲೋ ಅಲರ್ಟ್. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.

4:41 PM

ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ

ತುಮಕೂರು: ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ. ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಹಿಂದೂಪರ ಮಾರ್ಗ ಮಧ್ಯೆ ಘಟನೆ. ಪಾವಗಡ ತಾಲೂಕಿನ ವೆಂಕಟಾಪುರ ಬಳಿ ಸೇತುವೆ ಮೇಲೆ ನಿಂತ ಖಾಸಗಿ ಬಸ್. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿದ್ದ ಬಸ್. ಸತತವಾಗಿ ಸುರಿದ ಬಾರಿ ಮಳೆಗೆ ಹಿಂದೂಪುರ ಮಾರ್ಗದ ಸೇತುವೆ ಮೇಲೆ ಹರಿದ ನೀರು. ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬರುತ್ತಿದ್ದ ಬಸ್. ಸೇತುವೆ ಮೇಲೆ ಹೆಚ್ಚಿದ ನೀರಿನ ರಭಸಕ್ಕೆ ಮುಂದೆ ಸಾಗದೆ ನಿಂತ ಬಸ್.ಹಗ್ಗದ ಸಹಾಯದಿಂದ ಸೇತುವೆ ಮೇಲೆ ನಿಂತ ಬಸ್‌ನಿಂದ ಪ್ರಯಾಣಿಕರ ರಕ್ಷಣೆ. ವೆಂಕಟಾಪುರ ಗ್ರಾಮಸ್ಥರಿಂದ ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪ್ರಯಾಣಿಕರ ರಕ್ಷಣೆ. ಮತ್ತೊಂದು ಖಾಸಗಿ ಬಸ್ ಸಹಾಯದಿಂದ ಸೇತುವೆ ಮೇಲಿದ್ದ ಬಸ್‌ ಹೊರಕ್ಕೆ ತೆಗೆದ ಸ್ಥಳೀಯರು.

4:20 PM

ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ FIR

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಎಫ್ಐಆರ್. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು. ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಶುಭಕೋರಿ ಫೈಕ್ಸ್ ಹಾಕಿದ್ದ ಸಿದ್ದರಾಮಯ್ಯ ಬೆಂಬಲಿಗರು. ರಮೇಶ್ ಬಾಬು, ಜಯಬಾಲ ವಿರುದ್ದ ಎಫ್ಐಆರ್. ಮಲ್ಲೇಶ್ವರಂನ ಕಾಂಗ್ರೆಸ್ ಮುಖಂಡರಾಗಿರುವ ರಮೇಶ್ ಬಾಬು ಮತ್ತು ಜಯಬಾಲ. ಹೋಟೆಲ್ ಚಾಲುಕ್ಯ ಜಂಕ್ಷನ್‌ನಲ್ಲಿ ಫೈಕ್ಸ್ ಹಾಕಲಾಗಿತ್ತು. ಬಿಬಿಎಂಪಿ ಅಧಿಕಾರಿ ವೀಣಾ ದೂರಿನ ಅನ್ವಯ ಎಫ್‌ಐಆರ್ ದಾಖಲು.

3:51 PM

Udupi:  ಮೂರು ಮಂದಿ ಅಂತರಾಜ್ಯ ಕಳ್ಳರ ಬಂಧನ

ಉಡುಪಿ:  ಮೂರು ಮಂದಿ ಅಂತರಾಜ್ಯ ಕಳ್ಳರ ಬಂಧನ.  ಬೆಂಗಳೂರಿನ ದಿಲೀಪ್ ಶೆಟ್ಟಿ, ತಮಿಳುನಾಡಿನ ರಾಜನ್ ಮತ್ತು ಷಣ್ಮುಗಂ ಬಂಧಿತರು. ಬ್ರಹ್ಮಾವರದಲ್ಲಿ 2 ವಾಹನಗಳ ಸಹಿತ ಬಂಧನ.   13 ಲಕ್ಷ ರು. ಚಿನ್ನಾಭರಣ, 20 ಸಾವಿರ ರು. ಬೆಳ್ಳಿಯ ಪರಿಕರ ವಶ.  ಉಡುಪಿ, ದಕ, ಹಾಸನ, ತುಮಕೂರಿನ 5 ಕಳ್ಳತನದ ಪ್ರಕರಣಗಳು ಪತ್ತೆ.

3:15 PM

ಕೆಎಂಎಫ್ ಮದರ್ ಡೈರಿಯಿಂದ ತೆರಳಿದ ಅಮಿತ್ ಶಾ

ಕೆಎಂಎಫ್ ಮದರ್ ಡೈರಿಯಿಂದ ತೆರಳಿದ ಅಮಿತ್ ಶಾ. ಯಲಹಂಕ ಏರ್ ಪೋರ್ಸ್ ಗೆ ತೆರಳಿದ ಅಮಿತ್ ಷಾ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಅಮಿತ್ ಷಾ. ಅಮಿತ್ ಷಾ ಅವರನ್ನು ಬೀಳ್ಕೊಡಲು  ತೆರಳಿದ ಸಿಎಂ ಬೊಮ್ಮಾಯಿ . ಅಮಿತ್ ಷಾ ಜೊತೆಯಲ್ಲೇ ದೆಹಲಿಗೆ ತೆರಳಲಿರುವ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್.

2:16 PM

ನಂಗೂ ಕೈ ಹಿಡಿದುಕೊಂಡೇ ಕೈ ಎತ್ತಿದ್ದರು: ಡಿಕೆಶಿ, ಸಿದ್ದುಗೆ ಎಚ್ಡಿಕೆ ಟಾಂಗ್

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಎತ್ತಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿರುವ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಒಳ್ಳೇದು ಅಲ್ಲವೇ‌ ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ನಡೀತಾ ಇರುತ್ತವೆ. ನನಗೂ ಮಾಡಿಲ್ಲವೇ ಮೈತ್ರಿ ಸರ್ಕಾರ ಇದ್ದ ವೇಳೆ ನಾನು ನೋಡಿಲ್ಲವೇ? ಅದಕ್ಕೆ ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ ಅವರನ್ನು ನಂಬಿ. ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರ್ಯಾರು ಬೆನ್ನಿಗೆ ಚೂರಿ ಹಾಕಿಸಿಕೊಳ್ಳುತ್ತಾರೆ ನೋಡೊಣ ಬನ್ನಿ.

2:14 PM

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಡಿ ಮುಂದೆ ಹಾಜರು

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಡಿ ಯಿಂದ ಮತ್ತೆ ಸಮನ್ಸ್. ಮಧ್ಯಾಹ್ನ 1 ಗಂಟೆ ವೇಳೆ ಇಡಿ ಮುಂದೆ ಹಾಜರಾದ ಖರ್ಗೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಖರ್ಗೆಗೆ ಸಮನ್ಸ್ ನೀಡಿದ ಇಡಿ. ಖರ್ಗೆಗೆ ಮತ್ತೆ ಸಮನ್ಸ್ ನೀಡಿದ್ದಕ್ಕೆ ತೀವ್ರ ವಾಗಿ ಖಂಡಿಸಿದ ಕಾಂಗ್ರೆಸ್.

1:24 PM

ಪ್ರ​​​​​​​ಧಾನಿ ಮೋದಿ‌ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೊಗಳಿದ ಸಿಎಂ

ಸಂಕಲ್ಪ ಸಿದ್ಧಿ‌ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಷಣ. ಪ್ರಧಾನಿ ಮೋದಿ‌ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೊಗಳಿದ ಸಿಎಂ. ಯಾವುದೇ ದೇಶ ಅಭಿವೃದ್ಧಿ ಆಗಲು ದೂರದೃಷ್ಟಿಯುಳ್ಳ, ದಕ್ಷತೆ, ಗಟ್ಟಿ ನಾಯಕತ್ವ ಬೇಕು. ನಮ್ಮ‌ದೇಶಕ್ಕೆ ದೂರದೃಷ್ಟಿಯುಳ್ಳ ನಾಯಕ ಪ್ರಧಾನಿ ರೂಪದಲ್ಲಿ ಸಿಕ್ಕಿದ್ದಾರೆ. ದಕ್ಷ ನಾಯಕ ಅಮಿತ್ ಶಾ ರೂಪದಲ್ಲಿ ಸಿಕ್ಕಿದ್ದಾರೆ ಅಂದ ಸಿಎಂ. ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೇಳಿದ ಸಿಎಂ. ಉದ್ಯೋಗ ನೀತಿ, ಆರ್ ಅಂಡ್ ಡಿ ನೀತಿ, ವಿದ್ಯುತ್‌ಚಾಲಿತ ವಾಹನಗಳ ನೀತಿ, ಕೈಗಾರಿಕಾ ನೀತಿ, ಸೆಮಿ ಕಂಡಕ್ಟರ್ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಿಎಂ. ಮೋದಿಯವರ ಐದು ಟ್ರಿಲಿಯನ್ ಆರ್ಥಿಕತೆ ಸೃಷ್ಟಿಯ ಕನಸಿಗೆ ರಾಜ್ಯದಿಂದಲೂ ಬೆಂಬಲ. ರಾಜ್ಯದಿಂದ 1 ಟ್ರಿಲಿಯನ್ ಆರ್ಥಿಕತೆ ಸೃಷ್ಟಿ ಬಗ್ಗೆ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

1:21 PM

Chikkodi: ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಸಾರಿಗೆ ಬಸ್

ಚಿಕ್ಕೋಡಿ: ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಸಾರಿಗೆ ಬಸ್. ಸ್ವಲ್ಪದರಲ್ಲೆ ತಪ್ಪಿದ  ಅನಾಹುತ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಘಟನೆ. ಅಥಣಿ ಘಟಕಕ್ಕೆ ಸೇರಿದ ಸಾರಿಗೆ ಬಸ್. ಅಥಣಿಯಿಂದ ಸಾವಳಗಿ ಗ್ರಾಮಕ್ಕೆ ಹೋಗುತ್ತಿದ್ದ ಬಸ್. 35ಕ್ಕೂ ಹೆಚ್ಚು ಜನ ಬಸ್ಸಿನಲ್ಲಿ ಪ್ರಯಾಣ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ.ಸ್ಥಳಿಯ ಗ್ರಾಮಸ್ಥರಿಂದ ಪ್ರಯಾಣಿಕರ ರಕ್ಷಣೆ, ಗಾಯಾಳುಗಳಿಗ್ರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.. ಐಗಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ.

1:08 PM

ಸಂಕಲ್ಪ ಸಿದ್ದಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ

ಸಂಕಲ್ಪ ಸಿದ್ಧಿ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿಕೆ. ಭಾರತ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದರ ಹಿಂದೆ ಮೂರು ಉದ್ದೇಶವಿದೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮನವರಿಕೆ ಮಾಡುವುದು. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯ. 75 ವರ್ಷದ ದೇಶದ‌ ಸಾಧನೆಗಳನ್ನು ಜನತೆಗೆ ತಲುಪಿಸುವುದು ಉದ್ದೇಶ. ಈಗ  ಸ್ವಾತಂತ್ರ್ಯದ  ಅಮೃತಮಹೋತ್ಸವ ಮಾಡ್ತಿದ್ದೇವೆ. ಮುಂದೆ ಶತಮಾನೋತ್ಸವವನ್ನು ಕೂಡ ಆಚರಿಸುತ್ತೇವೆ. ಈ ಮುಂದಿನ ಅವಧಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷದಲ್ಲಿ ಶ್ರಮಿಸಬೇಕು. ವಿಕಾಸದಲ್ಲಿ ಭಾರತ ಎಲ್ಲಾ ದೇಶಗಳಿಗೆ ಮಾದರಿಯಾಗಬೇಕು. ಎಲ್ಲಾರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಈಗಾಗಲೇ ತನ್ನ ಛಾಪು ಮೂಡಿಸಿದೆ. ಈ ವಿಕಾಸದ ಹಾದಿಯಲ್ಲಿ ಜನವರ್ಗವನ್ನೂ ಒಳಗೊಳ್ಳುವಂತೆ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರಗಳು ಇದ್ದಾಗ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ನಿತ್ಯ ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರದ ಹೆಡ್‌ಲೈನ್‌ಗಳೆ ರಾರಾಜಿಸುತ್ತಿತ್ತು. ಎಲ್ಲಾ ದೇಶಗಳು ಭಾರತವನ್ನು ಬೇರೆ ದೃಷ್ಟಿಯಲ್ಲಿ ನೋಡ್ತಿತ್ತು. ಬಹಳ ಕಾಲದ ನಂತರ ಪೂರ್ಣಬಹುಮತದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನರೇ ಆಯ್ಕೆ ಮಾಡಿರುವ ಪೂರ್ಣಬಹುಮತದ ಸರ್ಕಾರಕ್ಕೆ ಈಗ ಎಂಟು ವರ್ಷ ತುಂಬಿದೆ. ಒಮ್ಮೆ ಈಗ ತಿರುಗಿ ಹಿಂದೆ ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ದೇಶದಲ್ಲಿ ನಾವು ನಿರ್ಮಾಣ ಮಾಡಿದ್ದೇವೆ. ಜಿಎಸ್‌ಟಿಯ ಜಾರಿ ಸಫಲತೆ ಕಂಡಿದೆ, ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ. 

12:16 PM

ದೇಶ ಸೇವೆಮಾಡುವ ಸಂಕಲ್ಪ ಮಾಡೋಣ: ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ. ನಾವೆಲ್ಲಾ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು. ಅನೇಕ ಘಟನಾವಳಿ ನಮಗೆ ಗೊತ್ತಿಲ್ಲ. ಸ್ವಾತಂತ್ರ್ಯ ಬಂದ ನಂತರ ನಾವು ಅವರನ್ನ ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು. ಏನೆಲ್ಲಾ ಘಟನೆಗಳು ನಡೆಯಿತು ಅನ್ನೋದು ನಮಗೆ ಅರಿವಿರಬೇಕು. ಆ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡಬೇಕು ಅನ್ನೋ ಆಲೋಚನೆ ಇರಬೇಕು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನ, ಸ್ವಾತಂತ್ರ್ಯಕ್ಕಾಗಿ ಬಲಿದಾನವಾದವರ ಸ್ಮರಣೆ ಮಾಡಬೇಕು. ವಿಶೇಷವಾಗಿ ನಮ್ಮ ಪೊಲೀಸ್ ವಿಭಾಗ ಜನರ ಪ್ರಾಣ, ಮಾನ ಉಳಿಸಲು ಸಂಕಲ್ಪ ಮಾಡಿದ್ದಾರೆ. ಕರ್ನಾಟಕ ಜನರ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ. ದೇಶ ಸೇವೆಮಾಡುವ ಸಂಕಲ್ಪ ಮಾಡೋಣ.

11:29 AM

Raichuru: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ರೈತ

ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ರೈತ. ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಘಟನೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ. ವೆಂಕಟೇಶ (36) ಕೊಚ್ಚಿ ಹೋದ ರೈತ. ಜಮೀನು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಾಗ ನಡೆದ ಘಟನೆ. ಘಟನಾ ಸ್ಥಳಕ್ಕೆ ಮಾನ್ವಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭೇಟಿ. ಶೋಧ ಕಾರ್ಯ ಮುಂದುವರಿದಿದೆ.

11:08 AM

​​​​​​​ಬೆಂಗಳೂರು ಸಿಸಿಬಿ ಪೊಲೀಸರಿಂದ ಉಗ್ರರ ಬಂಧನ ಪ್ರಕರಣ

ಬೆಂಗಳೂರು ಸಿಸಿಬಿ ಪೊಲೀಸರಿಂದ ಉಗ್ರರ ಬಂಧನ ಪ್ರಕರಣ. ಶಂಕಿತ ಉಗ್ರ ಜುಭಾ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮತ್ತೊಬ್ಬ ಸಿಸಿಬಿ ವಶಕ್ಕೆ. ಕೋಲ್ಕತ್ತಾದಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು. ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಕೋಲ್ಕತ್ತಾದಲ್ಲಿ ವಶಕ್ಕೆ. ಅಬು ಸಯ್ಯದ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ. ಈಗಾಗಲೇ ಅಖ್ತರ್ ಹುಸೇನ್‌ ಹಾಗೂ ಜುಭಾ ಇಬ್ಬರು ಆಲ್ ಖೈದ ನೇಮಕಾತಿ ಆಗಿದ್ದರು. ನೇಮಕಾತಿ ಆಗೋ ಗ್ರೂಪ್ ನ ಲೀಸ್ಟ್‌ನಲ್ಲಿ ಇದ್ದ ಅಬು ಸಯ್ಯದ್. ಕೋಲ್ಕತ್ತಾ ಮೂಲಕ ಅಬು ಸಯ್ಯದ್ ನ ನೇಮಕಾತಿ ಮಾಡಲು ತಯಾರಿ ನಡೆದಿತ್ತು. ಆದ್ರೆ ಅಬು ಸಯ್ಯದ್‌ಗೆ ವಿಧ್ಯಾಭ್ಯಾಸ ಇಲ್ಲದ ಕಾರಣಕ್ಕೆ ಹ್ಯಾಂಡ್ಲರ್ಸ್ ತಡ ಮಾಡಿದ್ರು. ಆದ್ರೂ ಅಬು ಸೈಯದ್ ವಿದ್ಯಾಭ್ಯಾಸ ಇಲ್ಲದಿದ್ರೂ ಟೆಕ್ನಿಕಲಿ ಸ್ಟ್ರಾಂಗ್ ಮಾಡಲು ಮುಂದಾಗಿದ್ರು. ಟೆಲಿಗ್ರಾಂ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದ ಶಂಕಿತರು. ನೇಮಕಾತಿ ವಿಚಾರಗಳನ್ನ ಇದೇ ಗ್ರೂಪಿನಲ್ಲಿ ಚರ್ಚೆಯೂ ಆಗಿತ್ತು. ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪೊಲೀಸ್ ಮೂಲಗಳ ಎಕ್ಸ್ ಕ್ಲೂಸೀವ್ ಮಾಹಿತಿ.

10:54 AM

Kodagu: ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಸ್ಫೋಟ

ಕೊಡಗು: ಪದೇ ಭೂಕಂಪನವಾಗಿದ್ದ ಚೆಂಬು ಗ್ರಾಮದ ಸ್ಥಿತಿ ಏನಾಗಿದೆ ಗೊತ್ತಾ? ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಪಂಚಾಯಿತಿ ವ್ಯಾಪ್ತಿಯ ದಬ್ಬಡ್ಕದಲ್ಲಿ ಭೀಕರ ಜಲಸ್ಫೋಟ.
ರಾಜೇಶ್ವರಿ ಎಂಬುವರ ರಬ್ಬರ್ ತೋಟದಲ್ಲಿ ಜಲಸ್ಫೋಟ. ಭಾರೀ ಶಬ್ಧದೊಂದಿಗೆ ಆಗಿರುವ ಜಲಸ್ಫೋಟ. ತಡರಾತ್ರಿ 12 ಗಂಟೆ ವೇಳೆಗೆ ಆಗಿರುವ ಜಲಸ್ಫೋಟ. ಜಲಸ್ಫೋಟದ ಶಬ್ಧಕೇಳಿ ಮನೆಯಿಂದ ಹೊರಬಂದಿದ್ದ ಬಾಲಕೃಷ್ಣ ಎಂಬುವರ ಕುಟುಂಬ. ಹೊರ ಬರುವಷ್ಟರಲ್ಲಿ ಸಮುದ್ರದ ಅಲೆಯಂತೆ ನುಗ್ಗುತ್ತಿದೆ ನೀರು. ಕೂಡಲೇ ಎತ್ತರದ ಪ್ರದೇಶದ ಕಡೆಗೆ ಓಡಿದ ಮನೆಯ ಜನರು. ಎತ್ತರದ ಜಾಗಕ್ಕೆ ಓಡಿ ಪ್ರಾಣ ಉಳಿಸಿಕೊಂಡಿರುವ ಬಾಲಕೃಷ್ಣ ಮನೆಯವರು. ಬಾಲಕೃಷ್ಣ ಅವರ ಮನೆಗೆ ನೀರು ಕೆಸರು ನುಗ್ಗಿ ಮನೆಯ ವಸ್ತುಗಳೆಲ್ಲಾ ಹಾಳು. ಕುಸಿದು ಬಿದ್ದಿರುವ ದನದ ಕೊಟ್ಟಿಗೆ. ಜಲಸ್ಫೋಟದ ಜೊತೆಗೆ ಭಾರಿ ಭೂಕುಸಿತ. ಅರ್ಧ ಎಕರೆ ಭೂ ಪ್ರದೇಶ ಕುಸಿತ. ಕೆಸರಿನಂತಾಗಿ ಹರಿದು ಹೋಗಿರುವ ಭೂಮಿ. ಜಲಸ್ಫೋಟದಿಂದ ಕೊಚ್ಚಿಹೋದ 150 ರಬ್ಬರ್ ಮರಗಳು. 
150 ಕಾಫಿ ಗಿಡ, 40 ಅಡಿಕೆ ಮರಗಳು ನಾಶ. ರಾಜೇಶ್ವರಿ ಎಂಬುವರ ತೋಟ ಸರ್ವ ನಾಶ. ಆತಂಕದಲ್ಲಿರುವ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು. ಜೂನ್ ತಿಂಗಳ ಅಂತ್ಯದಲ್ಲಿ 10ಕ್ಕೂ ಹೆಚ್ಚು ಬಾರಿ ಭೂಕಂಪನವಾಗಿತ್ತು. 

10:48 AM

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅವಾಂತರ

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅವಾಂತರ. ನಿನ್ನೆ ಸುರಿದ ಭಾರಿ ಮಳೆಯಿಂದ ಕಂಗಾಲಾದ ರೈತಾಪಿ ಸಮೂಹ. ಮಳೆಯಿಂದ ಹಲವು ಸೇತುವೆ ಜಲಾವೃತ. ಭೀಮಳ್ಳಿ ಬಳಿಯ ಸೇತುವೆ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತ. ಸೋಮನಾಥಹಳ್ಳಿ, ಭೀಮಳ್ಳಿ, ಕಡಣಿ ಇತರೆ ಗ್ರಾಮಗಳಲ್ಲಿ ಮನೆಗಳಿಗೆ ನುಗ್ಗಿದ ನೀರು. ಮನೆಯಲ್ಲಿನ ಧವಸ ಧಾನ್ಯ ನೀರು ಪಾಲು ಜ‌ನ ಕಂಗಾಲು.

10:46 AM

Mandya: ಪಶ್ಚಿಮ ವಾಹಿನ ಮುಳುಗಡೆ

ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಪಶ್ಚಿಮ ವಾಹಿನಿ ಮುಳುಗಡೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ. ಪ್ರತಿದಿನ ಸಾವಿರಾರು ಜನರು ಇಲ್ಲಿ ಅಸ್ತಿ ವಿಸರ್ಜನೆ ಮಾಡುತ್ತಾರೆ. ಆದ್ರೆ‌ ಅಸ್ತಿ ವಿಸರ್ಜನೆ ಮಾಡಬಾರದು, ನದಿಗೆ ಇಳಿಯಬಾರದು ಎಂದು ನಿಷೇಧ ಹೇರಿರುವ ಮಂಡ್ಯ ಜಿಲ್ಲಾಡಳಿತ. ಆದ್ರೆ‌ ಜಿಲ್ಲಾಡಳಿತ ಆದೇಶವನ್ನು ಲೆಕ್ಕಿಸದೆ ಅಸ್ತಿ ವಿಸರ್ಜನೆಗೆ ಮುಂದಾದ ಜನರು. ಸದ್ಯ ಪಶ್ಚಿಮ ವಾಹಿನಿಯಲ್ಲಿರುವ ದೇವಾಲಯಗಳು ಮುಳುಗಡೆ. ಮುಳೆಗಡೆಯಾಗಿರುವುದರಿಂದ ಪ್ರವೇಶ ನಿಷೇಧ ಮಾಡಿ ಆದೇಶ.

10:24 AM

Yadgiri: ಜಿಲ್ಲೆಯಲ್ಲಿ ನಿಲ್ಲದ ಮಳೆ, ಮನೆ ಕುಸಿತ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ. ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಅವಾಂತರ. ನಿನ್ನೆ ಸುರಿದ ಭಾರಿ ಮಳೆಗೆ ಮನೆ ಕುಸಿತ. ಮನೆ ಗೊಡೆ ಕುಸಿತದಿಂದ ಗುಂಡಪ್ಪ ಕುಂಬಾರ ಕುಟುಂಬಸ್ಥರ ಸಂಕಷ್ಟ. ಮನೆ ಕುಸಿತದಿಂದ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿ. ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದ ಗುಂಡಪ್ಪ ಎಂಬುವವರ ಮನೆ ಕುಸಿತ. ವಾಸಕ್ಕೆ ಮನೆಯಿಲ್ಲದೇ ಗುಂಡಪ್ಪ ಕಂಗಾಲು. ಸಹೋದರ ಅವರ ಮನೆಯಲ್ಲಿ ಗುಂಡಪ್ಪ ಕುಟುಂಬಸ್ಥರ ವಾಸ. ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹ. ಮಳೆ ಅಬ್ಬರಕ್ಕೆ ಭರ್ತಿಯಾದ ಕೆರೆ. ಅಲ್ಲಿಪೂರ ಕೆರೆ ಭರ್ತಿ ಹಾರಿದ ಕೆರೆ ಕೋಡಿ. ಕೆರೆ ಕೋಡಿ ಮೇಲಿನಿಂದ ಹರಿಯುತ್ತಿರುವ ನೀರು. ಅಲ್ಲಿಪೂರ ಗ್ರಾಮದೊಳಗಿನ ರಸ್ತೆ ಜಲಾವೃತ. ಶಾಲೆ ಹಾಗೂ ಪಂಚಾಯತ್‌ದೆ ತೆರಳುವ ರಸ್ತೆ ಜಲಾವೃತ. ಮಕ್ಕಳು, ವೃದ್ಧರು ತೆರಳಲು ಪರದಾಡುತ್ತಿದ್ದಾರೆ.

10:19 AM

ಬೂದಿ ಮುಚ್ಚಿದ ಕೆಂಡದಂತಾಗಿದೆ ಮಂಗಳೂರು: ಬಜ್ಪೆ, ಸುರತ್ಕಲ್‌ಗೆ ಎಡಿಜಿಪಿ ಭೇಟಿ

ಮಂಗಳೂರು: ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಎದುರಾಗಿದೆ. ಮಂಗಳೂರು ನಗರ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಕನ್ನಡ ಸೇರಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರು ಭೇಟಿ. ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಅಲೋಕ್ ಕುಮಾರ್. ಮಂಗಳೂರು ಕಮಿಷನರೇಟ್, ಉಡುಪಿ ಜಿಲ್ಲೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ. ಮಂಗಳೂರು ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರತೆ ಕುರಿತು ಪರಿಶೀಲನಾ ಸಭೆ ನಡೆಸಲಿರುವ ಎಡಿಜಿಪಿ  ಅಲೋಕ್ ಕುಮಾರ್. ಪ್ರವೀಣ್ ನೆಟ್ಟಾರು ಹಾಗು ಫಾಝಿಲ್ ಹತ್ಯೆ ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆದಲಿರುವ ಅಲೋಕ್ ಕುಮಾರ್. ಮಂಗಳೂರು ಹೊರವಲಯದ ಬಜಪೆ , ಸುರತ್ಕಲ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 

10:11 AM

ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ದ

ಹೊಸೂರು (ತಮಿಳುನಾಡು): ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ದ. ಮಳೆಯಾರ್ಭಟಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧರನ್ನು ಸ್ಥಳೀಯರು ಸಮಯ ಪ್ರಜ್ಞೆಯಿಂದ ಬಚಾವ್ ಮಾಡಿದ್ದಾರೆ. ರಾಜ್ಯದ ಗಡಿ ತಮಿಳುನಾಡಿನ ಹೊಸೂರಿನಲ್ಲಿ ಘಟನೆ. ಹೊಸೂರಿನ ಜಿಆರ್‌ಟಿ ವೃತ್ತದ ಬಳಿ ಚರಂಡಿಗೆ ಬಿದ್ದಿದ್ದ ವೃದ್ದ. ಬಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆ ಬದಿಯ ಚರಂಡಿಯನ್ನ ಮುಚ್ಚದೇ ಹಾಗೆ ಬಿಡಲಾಗಿತ್ತು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ವೃದ್ದ. ಹರಿವ ಮಳೆ ನೀರಿನ ಜೊತೆಗೆ ಚರಂಡಿಯೊಳಗೆ ಬಿದ್ದಿದ್ದ. ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ದನನ್ನು ರಕ್ಷಿಸಿದ ಸಾರ್ವಜನಿಕರು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದ ವೃದ್ದ. ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬರುತ್ತಿತ್ತು. ಗಾಯಗೊಂಡಿದ್ದರೂ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿಯೇ ಕಿರಿಕ್. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ. ಸ್ಥಳಕ್ಕೆ ಬಂದ ಹೊಸೂರು ಪೋಲೀಸರ ಮೇಲೆಯೇ ವೃದ್ದ ಜಟಾಪಟಿ. ಆಸ್ಪತ್ರೆಗೆ ಹೋಗೋದಿಲ್ಲ ಎಂದು ಪೋಲೀಸರ ಜೊತೆ ಕಿರಿಕ್ ಸಹ ಮಾಡಿದ್ದರು. ತದ ನಂತರ ವೃದ್ದನ ಮನವೊಲಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ.

10:08 AM

Mysore: ಶಿಕ್ಷಕಿ ಕೊಲೆ ಪ್ರಕರಣ‌. ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ

ಅದು 6 ತಿಂಗಳ‌ ಹಿಂದೆ ನಡೆದಿದ್ದ ಅನುಮಾನಾಸ್ಪದ ಸಾವು. ಶಾಲಾ ಶಿಕ್ಷಕಿಯ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದು ನಿಂತಿತ್ತು. ಕಡೆಗೆ 6 ತಿಂಗಳ ನಂತರ ಆರೋಪಿಗಳು ಅಂದರ್ ಆಗಿದ್ದಾರೆ. ಕೊಲೆಗೆ ಅಕ್ರಮ ಸಂಭಂಧ ಕಾರಣವಾಗಿದ್ದು, ಟೀಚರ್ ಬಲಿಯಾಗಿದ್ದಾರೆ. ಇಂದು ನಂಜನಗೂಡಿನ ಹಿಂದಿ ಶಿಕ್ಷಕಿ ಕೊಲೆ ರಹಸ್ಯ. ಶಿಕ್ಷಕಿ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ. ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಯೊಂದಿಗೆ ತನ್ನ ಪತಿ ಹೊಂದಿದ್ದ ಅಕ್ರಮ ಸಂಭಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸುದ್ದಿಗಾಗಿ ಇಲ್ಲಿ ಓದಿ

10:07 AM

ಬತ್ ರೂಮ್‌ ನಲ್ಲಿ‌ ಜಾರಿ ಬಿದ್ದ ಕೈ ಶಾಸಕ.

ಹುಬ್ಬಳ್ಳಿ: ಬತ್ ರೂಮ್‌ ನಲ್ಲಿ‌ ಜಾರಿ ಬಿದ್ದ ಕೈ ಶಾಸಕ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲಿನ ಮೂಳೆ ಮುರಿತ. ರೂಮಿನಲ್ಲಿ ಕಾಲು ಜಾರಿ ಬಿದ್ದು ಕಾಲು ಮುರಿದಿದೆ. ತಕ್ಷಣವೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ.ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ನಡೆದ ಘಟನೆ. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರಾವನಿಸಿದ ಆಪ್ತರು.ಸಿದ್ಧರಾಮೋತ್ಸದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಾಸಕರು.

9:48 AM

ತಂದೆ ನೆನೆದು ಮತ್ತೆ ಗೊಳೋ ಎಂದು ಅತ್ತ ಮಾಜಿ ಸಿಎಂ ಕುಮಾರಸ್ವಾಮಿ

ಮಾಜಿ ಪ್ರಧಾನಿ, ತಂದೆ ಎಚ್.ಡಿ. ದೇವೇಗೌಡ ನೆನದು ಕಣ್ಣೀರಿಟ್ಟಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಜೆಡಿಎಸ್ ಸಾಂಸ್ಥಿಕ ಚುನಾವಣೆ ಸಮಯದಲ್ಲಿ ಭಾಷಣ ಮಾಡುವಾಗ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ತಂದೆ ದೇವೇಗೌಡರ ಆರೋಗ್ಯ ನೆನದು ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ ಕುಮಾರಸ್ವಾಮಿ. ಪ್ರತಿ ದಿನ ನನ್ನೆಲ್ಲ ಕೆಲಸ ಮುಗಿಸಿಕೊಂಡು, ತಂದೆಯವರಲ್ಲಿಗೆ ಓಡುತ್ತೇನೆ. ಅವರ ಆರೋಗ್ಯವೇ ನನಗೆ ಮುಖ್ಯ. ನನಗೆ ಅಧಿಕಾರಕ್ಕಿಂತ ನಮ್ಮ ತಂದೆಯವರ ಆರೋಗ್ಯ ಮುಖ್ಯ. ತಂದೆಗಿಂತ ಸಿಎಂ ಪದವಿ ದೊಡ್ಡದಲ್ಲ ಅಂತ ಕಣ್ಣೀರಿಟ್ಟ ಕುಮಾರಸ್ವಾಮಿರನ್ನ ಸಂತೈಸಿದ ವೇದಿಕೆ ಮೇಲಿದ್ದ ನಾಯಕರು. 

9:35 PM IST:

ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಅವರು ಅಧಿಕೃತ ಕಾರ್ಯಕ್ರಮದ ನಿಮಿತ್ತ ಬುಧವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಅಮಿತ್‌ ಶಾ ಅವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ವಿವಿಧ ಸಚಿವರು ಹಾಗೂ ಪಕ್ಷದ ನಾಯಕರು ಬರಮಾಡಿಕೊಂಡರು.

ಗುರುವಾರ ಬೆಳಗ್ಗೆ 11ಗಂಟೆಗೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಸಂಕಲ್ಪದಿಂದ ಸಿದ್ಧಿ’ಯ 3ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಪಾಲ್ಗೊಂಡರು. ಬಳಿಕ ಮಧ್ಯಾಹ್ನ ಭೋಜನ ನಂತರ ಯಲಹಂಕದ ಮದರ್‌ ಡೈರಿ ಘಟಕಕ್ಕೆ ಭೇಟಿ ನೀಡಿದರು. ಅಲ್ಲಿಂದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ನಿರ್ಗಮಿಸಿದರು. 

ಮಂಗಳೂರು ಹತ್ಯೆ ಕೇಸ್‌ ಬಗ್ಗೆ ಅಮಿತ್‌ ಶಾಗೆ ಮಾಹಿತಿ: ಆರಗ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರವಾದ ಮಾಹಿತಿ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಆರಗ ಜ್ಞಾನೇಂದ್ರ ಅವರು, ಶಾ ಅವರು ಮಂಗಳೂರು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಅನೇಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಎಲ್ಲ ವಿವರವನ್ನು ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ. ಎನ್‌ಐಎ ತನಿಖೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು

9:21 PM IST:

ಮಂಗಳೂರು: ಮಂಗಳೂರು ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಗೃಹ ಸಚಿವ ಅಮಿತ್‌ ಶಾ ಖುದ್ದು ಮಾಹಿತಿ ಪಡೆದರು. ಡಿಜಿ - ಐಜಿಪಿ ಪ್ರವೀಣ್ ಸೂದ್ ಮತ್ತು ಇಂಟಲಿಜೆನ್ಸ್ ಎಡಿಜಿಪಿ ದಯಾನಂದ್‌ರಿಂದ ಅಮಿತ್ ಶಾ ಮಾಹಿತಿ ಪಡೆದರು.ಇಂದು ಬೆಳಗ್ಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ತಾಜ್ ಹೋಟೆಲ್ ಕರೆಸಿಕೊಂಡು ಮಂಗಳೂರು ಹತ್ಯೆ ಪ್ರಕರಣದ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದರು. 

ಎರಡು ಪ್ರಕರಣಗಳಲ್ಲಿ ಇಲ್ಲಿಯವರೆಗೆ ಎಷ್ಟು ಜನರ ಬಂಧನವಾಗಿದೆ ಘಟನೆಗೆ ಕಾರಣವೇನು ಎಂಬುದನ್ನ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಮಂಗಳೂರು ಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಭಾರಿ ಚರ್ಚೆಯಾಗಿತ್ತು. ಪ್ರವೀಣ್ ಹತ್ಯೆಯಿಂದ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಸಹ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಹತ್ಯೆ ಪ್ರಕರಣದ ಬಗ್ಗೆ ಖುದ್ದು ಪೊಲೀಸ್ ಅಧಿಕಾರಿಗಳನ್ನ ಕರೆಸಿಕೊಂಡು ಅಮಿತ್‌ ಶಾ ಮಾಹಿತಿ ಪಡೆದರು. 

5:08 PM IST:

ಬೈಕ್‌ನಲ್ಲಿ ಹಿಂಬದಿ ಸವಾರರ ನಿರ್ಬಂಧ ಆದೇಶ ವಾಪಾಸ್ ಪಡೆದ ಪೊಲೀಸ್ ಇಲಾಖೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ಆದೇಶ ವಾಪಾಸ್. ತಕ್ಷಣದಿಂದ ಆದೇಶ ವಾಪಾಸ್ ಪಡೆದ ಪೊಲೀಸ್ ಇಲಾಖೆ. ಸಂಜೆ 6 ಗಂಟೆಯಿಂದ ಬೆ.6 ಗಂಟೆಯವೆರೆಗೆ ಬೈಕ್ ನಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ವಿಧಿಸಿದ್ದ ಪೊಲೀಸ್ ಇಲಾಖೆ. ಭಾರೀ ವಿರೋಧದ ಬೆನ್ನಲ್ಲೇ ಆದೇಶ ವಾಪಾಸ್. ಪರಿಷ್ಕೃತ ಅಧಿಕೃತ ಆದೇಶ ಹೊರಡಿಸುವ ಬಗ್ಗೆ ಕಮಿಷನರ್ ಮಾಹಿತಿ.

4:58 PM IST:

ಹವಾಮಾನ ಇಲಾಖೆಯಿಂದ  ಮಾಹಿತಿ, ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಸಾಧ್ಯತೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್, ನಾಳೆ ರೆಡ್ ಅಲರ್ಟ್, 6ನೇ ತಾರೀಖು ಆರೆಂಜ್ ಅಲರ್ಟ್. ಕೊನೆಯ ಎರಡು ದಿನ ಯಲ್ಲೋ ಅಲರ್ಟ್. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್.ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.

4:41 PM IST:

ತುಮಕೂರು: ಪಾವಗಡದಲ್ಲಿ ತಪ್ಪಿದ ಮತ್ತೊಂದು ಬಸ್ ದುರಂತ. ರಭಸವಾಗಿ ಹರಿಯುವ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಹಿಂದೂಪರ ಮಾರ್ಗ ಮಧ್ಯೆ ಘಟನೆ. ಪಾವಗಡ ತಾಲೂಕಿನ ವೆಂಕಟಾಪುರ ಬಳಿ ಸೇತುವೆ ಮೇಲೆ ನಿಂತ ಖಾಸಗಿ ಬಸ್. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿದ್ದ ಬಸ್. ಸತತವಾಗಿ ಸುರಿದ ಬಾರಿ ಮಳೆಗೆ ಹಿಂದೂಪುರ ಮಾರ್ಗದ ಸೇತುವೆ ಮೇಲೆ ಹರಿದ ನೀರು. ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬರುತ್ತಿದ್ದ ಬಸ್. ಸೇತುವೆ ಮೇಲೆ ಹೆಚ್ಚಿದ ನೀರಿನ ರಭಸಕ್ಕೆ ಮುಂದೆ ಸಾಗದೆ ನಿಂತ ಬಸ್.ಹಗ್ಗದ ಸಹಾಯದಿಂದ ಸೇತುವೆ ಮೇಲೆ ನಿಂತ ಬಸ್‌ನಿಂದ ಪ್ರಯಾಣಿಕರ ರಕ್ಷಣೆ. ವೆಂಕಟಾಪುರ ಗ್ರಾಮಸ್ಥರಿಂದ ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪ್ರಯಾಣಿಕರ ರಕ್ಷಣೆ. ಮತ್ತೊಂದು ಖಾಸಗಿ ಬಸ್ ಸಹಾಯದಿಂದ ಸೇತುವೆ ಮೇಲಿದ್ದ ಬಸ್‌ ಹೊರಕ್ಕೆ ತೆಗೆದ ಸ್ಥಳೀಯರು.

4:20 PM IST:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಎಫ್ಐಆರ್. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು. ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಶುಭಕೋರಿ ಫೈಕ್ಸ್ ಹಾಕಿದ್ದ ಸಿದ್ದರಾಮಯ್ಯ ಬೆಂಬಲಿಗರು. ರಮೇಶ್ ಬಾಬು, ಜಯಬಾಲ ವಿರುದ್ದ ಎಫ್ಐಆರ್. ಮಲ್ಲೇಶ್ವರಂನ ಕಾಂಗ್ರೆಸ್ ಮುಖಂಡರಾಗಿರುವ ರಮೇಶ್ ಬಾಬು ಮತ್ತು ಜಯಬಾಲ. ಹೋಟೆಲ್ ಚಾಲುಕ್ಯ ಜಂಕ್ಷನ್‌ನಲ್ಲಿ ಫೈಕ್ಸ್ ಹಾಕಲಾಗಿತ್ತು. ಬಿಬಿಎಂಪಿ ಅಧಿಕಾರಿ ವೀಣಾ ದೂರಿನ ಅನ್ವಯ ಎಫ್‌ಐಆರ್ ದಾಖಲು.

3:51 PM IST:

ಉಡುಪಿ:  ಮೂರು ಮಂದಿ ಅಂತರಾಜ್ಯ ಕಳ್ಳರ ಬಂಧನ.  ಬೆಂಗಳೂರಿನ ದಿಲೀಪ್ ಶೆಟ್ಟಿ, ತಮಿಳುನಾಡಿನ ರಾಜನ್ ಮತ್ತು ಷಣ್ಮುಗಂ ಬಂಧಿತರು. ಬ್ರಹ್ಮಾವರದಲ್ಲಿ 2 ವಾಹನಗಳ ಸಹಿತ ಬಂಧನ.   13 ಲಕ್ಷ ರು. ಚಿನ್ನಾಭರಣ, 20 ಸಾವಿರ ರು. ಬೆಳ್ಳಿಯ ಪರಿಕರ ವಶ.  ಉಡುಪಿ, ದಕ, ಹಾಸನ, ತುಮಕೂರಿನ 5 ಕಳ್ಳತನದ ಪ್ರಕರಣಗಳು ಪತ್ತೆ.

3:15 PM IST:

ಕೆಎಂಎಫ್ ಮದರ್ ಡೈರಿಯಿಂದ ತೆರಳಿದ ಅಮಿತ್ ಶಾ. ಯಲಹಂಕ ಏರ್ ಪೋರ್ಸ್ ಗೆ ತೆರಳಿದ ಅಮಿತ್ ಷಾ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಅಮಿತ್ ಷಾ. ಅಮಿತ್ ಷಾ ಅವರನ್ನು ಬೀಳ್ಕೊಡಲು  ತೆರಳಿದ ಸಿಎಂ ಬೊಮ್ಮಾಯಿ . ಅಮಿತ್ ಷಾ ಜೊತೆಯಲ್ಲೇ ದೆಹಲಿಗೆ ತೆರಳಲಿರುವ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್.

2:16 PM IST:

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಎತ್ತಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿರುವ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಒಳ್ಳೇದು ಅಲ್ಲವೇ‌ ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ನಡೀತಾ ಇರುತ್ತವೆ. ನನಗೂ ಮಾಡಿಲ್ಲವೇ ಮೈತ್ರಿ ಸರ್ಕಾರ ಇದ್ದ ವೇಳೆ ನಾನು ನೋಡಿಲ್ಲವೇ? ಅದಕ್ಕೆ ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ ಅವರನ್ನು ನಂಬಿ. ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರ್ಯಾರು ಬೆನ್ನಿಗೆ ಚೂರಿ ಹಾಕಿಸಿಕೊಳ್ಳುತ್ತಾರೆ ನೋಡೊಣ ಬನ್ನಿ.

2:14 PM IST:

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಡಿ ಯಿಂದ ಮತ್ತೆ ಸಮನ್ಸ್. ಮಧ್ಯಾಹ್ನ 1 ಗಂಟೆ ವೇಳೆ ಇಡಿ ಮುಂದೆ ಹಾಜರಾದ ಖರ್ಗೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಖರ್ಗೆಗೆ ಸಮನ್ಸ್ ನೀಡಿದ ಇಡಿ. ಖರ್ಗೆಗೆ ಮತ್ತೆ ಸಮನ್ಸ್ ನೀಡಿದ್ದಕ್ಕೆ ತೀವ್ರ ವಾಗಿ ಖಂಡಿಸಿದ ಕಾಂಗ್ರೆಸ್.

1:24 PM IST:

ಸಂಕಲ್ಪ ಸಿದ್ಧಿ‌ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಷಣ. ಪ್ರಧಾನಿ ಮೋದಿ‌ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೊಗಳಿದ ಸಿಎಂ. ಯಾವುದೇ ದೇಶ ಅಭಿವೃದ್ಧಿ ಆಗಲು ದೂರದೃಷ್ಟಿಯುಳ್ಳ, ದಕ್ಷತೆ, ಗಟ್ಟಿ ನಾಯಕತ್ವ ಬೇಕು. ನಮ್ಮ‌ದೇಶಕ್ಕೆ ದೂರದೃಷ್ಟಿಯುಳ್ಳ ನಾಯಕ ಪ್ರಧಾನಿ ರೂಪದಲ್ಲಿ ಸಿಕ್ಕಿದ್ದಾರೆ. ದಕ್ಷ ನಾಯಕ ಅಮಿತ್ ಶಾ ರೂಪದಲ್ಲಿ ಸಿಕ್ಕಿದ್ದಾರೆ ಅಂದ ಸಿಎಂ. ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೇಳಿದ ಸಿಎಂ. ಉದ್ಯೋಗ ನೀತಿ, ಆರ್ ಅಂಡ್ ಡಿ ನೀತಿ, ವಿದ್ಯುತ್‌ಚಾಲಿತ ವಾಹನಗಳ ನೀತಿ, ಕೈಗಾರಿಕಾ ನೀತಿ, ಸೆಮಿ ಕಂಡಕ್ಟರ್ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಿಎಂ. ಮೋದಿಯವರ ಐದು ಟ್ರಿಲಿಯನ್ ಆರ್ಥಿಕತೆ ಸೃಷ್ಟಿಯ ಕನಸಿಗೆ ರಾಜ್ಯದಿಂದಲೂ ಬೆಂಬಲ. ರಾಜ್ಯದಿಂದ 1 ಟ್ರಿಲಿಯನ್ ಆರ್ಥಿಕತೆ ಸೃಷ್ಟಿ ಬಗ್ಗೆ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

1:21 PM IST:

ಚಿಕ್ಕೋಡಿ: ಬ್ರೇಕ್ ಫೇಲ್ ಆಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಸಾರಿಗೆ ಬಸ್. ಸ್ವಲ್ಪದರಲ್ಲೆ ತಪ್ಪಿದ  ಅನಾಹುತ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಘಟನೆ. ಅಥಣಿ ಘಟಕಕ್ಕೆ ಸೇರಿದ ಸಾರಿಗೆ ಬಸ್. ಅಥಣಿಯಿಂದ ಸಾವಳಗಿ ಗ್ರಾಮಕ್ಕೆ ಹೋಗುತ್ತಿದ್ದ ಬಸ್. 35ಕ್ಕೂ ಹೆಚ್ಚು ಜನ ಬಸ್ಸಿನಲ್ಲಿ ಪ್ರಯಾಣ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ.ಸ್ಥಳಿಯ ಗ್ರಾಮಸ್ಥರಿಂದ ಪ್ರಯಾಣಿಕರ ರಕ್ಷಣೆ, ಗಾಯಾಳುಗಳಿಗ್ರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ.. ಐಗಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ.

1:08 PM IST:

ಸಂಕಲ್ಪ ಸಿದ್ಧಿ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹೇಳಿಕೆ. ಭಾರತ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದರ ಹಿಂದೆ ಮೂರು ಉದ್ದೇಶವಿದೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮನವರಿಕೆ ಮಾಡುವುದು. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯ. 75 ವರ್ಷದ ದೇಶದ‌ ಸಾಧನೆಗಳನ್ನು ಜನತೆಗೆ ತಲುಪಿಸುವುದು ಉದ್ದೇಶ. ಈಗ  ಸ್ವಾತಂತ್ರ್ಯದ  ಅಮೃತಮಹೋತ್ಸವ ಮಾಡ್ತಿದ್ದೇವೆ. ಮುಂದೆ ಶತಮಾನೋತ್ಸವವನ್ನು ಕೂಡ ಆಚರಿಸುತ್ತೇವೆ. ಈ ಮುಂದಿನ ಅವಧಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷದಲ್ಲಿ ಶ್ರಮಿಸಬೇಕು. ವಿಕಾಸದಲ್ಲಿ ಭಾರತ ಎಲ್ಲಾ ದೇಶಗಳಿಗೆ ಮಾದರಿಯಾಗಬೇಕು. ಎಲ್ಲಾರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಈಗಾಗಲೇ ತನ್ನ ಛಾಪು ಮೂಡಿಸಿದೆ. ಈ ವಿಕಾಸದ ಹಾದಿಯಲ್ಲಿ ಜನವರ್ಗವನ್ನೂ ಒಳಗೊಳ್ಳುವಂತೆ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರಗಳು ಇದ್ದಾಗ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ನಿತ್ಯ ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರದ ಹೆಡ್‌ಲೈನ್‌ಗಳೆ ರಾರಾಜಿಸುತ್ತಿತ್ತು. ಎಲ್ಲಾ ದೇಶಗಳು ಭಾರತವನ್ನು ಬೇರೆ ದೃಷ್ಟಿಯಲ್ಲಿ ನೋಡ್ತಿತ್ತು. ಬಹಳ ಕಾಲದ ನಂತರ ಪೂರ್ಣಬಹುಮತದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನರೇ ಆಯ್ಕೆ ಮಾಡಿರುವ ಪೂರ್ಣಬಹುಮತದ ಸರ್ಕಾರಕ್ಕೆ ಈಗ ಎಂಟು ವರ್ಷ ತುಂಬಿದೆ. ಒಮ್ಮೆ ಈಗ ತಿರುಗಿ ಹಿಂದೆ ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ದೇಶದಲ್ಲಿ ನಾವು ನಿರ್ಮಾಣ ಮಾಡಿದ್ದೇವೆ. ಜಿಎಸ್‌ಟಿಯ ಜಾರಿ ಸಫಲತೆ ಕಂಡಿದೆ, ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ. 

12:16 PM IST:

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ. ನಾವೆಲ್ಲಾ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು. ಅನೇಕ ಘಟನಾವಳಿ ನಮಗೆ ಗೊತ್ತಿಲ್ಲ. ಸ್ವಾತಂತ್ರ್ಯ ಬಂದ ನಂತರ ನಾವು ಅವರನ್ನ ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು. ಏನೆಲ್ಲಾ ಘಟನೆಗಳು ನಡೆಯಿತು ಅನ್ನೋದು ನಮಗೆ ಅರಿವಿರಬೇಕು. ಆ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡಬೇಕು ಅನ್ನೋ ಆಲೋಚನೆ ಇರಬೇಕು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನ, ಸ್ವಾತಂತ್ರ್ಯಕ್ಕಾಗಿ ಬಲಿದಾನವಾದವರ ಸ್ಮರಣೆ ಮಾಡಬೇಕು. ವಿಶೇಷವಾಗಿ ನಮ್ಮ ಪೊಲೀಸ್ ವಿಭಾಗ ಜನರ ಪ್ರಾಣ, ಮಾನ ಉಳಿಸಲು ಸಂಕಲ್ಪ ಮಾಡಿದ್ದಾರೆ. ಕರ್ನಾಟಕ ಜನರ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ. ದೇಶ ಸೇವೆಮಾಡುವ ಸಂಕಲ್ಪ ಮಾಡೋಣ.

11:29 AM IST:

ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ರೈತ. ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಘಟನೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳ. ವೆಂಕಟೇಶ (36) ಕೊಚ್ಚಿ ಹೋದ ರೈತ. ಜಮೀನು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಾಗ ನಡೆದ ಘಟನೆ. ಘಟನಾ ಸ್ಥಳಕ್ಕೆ ಮಾನ್ವಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಭೇಟಿ. ಶೋಧ ಕಾರ್ಯ ಮುಂದುವರಿದಿದೆ.

11:08 AM IST:

ಬೆಂಗಳೂರು ಸಿಸಿಬಿ ಪೊಲೀಸರಿಂದ ಉಗ್ರರ ಬಂಧನ ಪ್ರಕರಣ. ಶಂಕಿತ ಉಗ್ರ ಜುಭಾ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮತ್ತೊಬ್ಬ ಸಿಸಿಬಿ ವಶಕ್ಕೆ. ಕೋಲ್ಕತ್ತಾದಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು. ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಕೋಲ್ಕತ್ತಾದಲ್ಲಿ ವಶಕ್ಕೆ. ಅಬು ಸಯ್ಯದ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ. ಈಗಾಗಲೇ ಅಖ್ತರ್ ಹುಸೇನ್‌ ಹಾಗೂ ಜುಭಾ ಇಬ್ಬರು ಆಲ್ ಖೈದ ನೇಮಕಾತಿ ಆಗಿದ್ದರು. ನೇಮಕಾತಿ ಆಗೋ ಗ್ರೂಪ್ ನ ಲೀಸ್ಟ್‌ನಲ್ಲಿ ಇದ್ದ ಅಬು ಸಯ್ಯದ್. ಕೋಲ್ಕತ್ತಾ ಮೂಲಕ ಅಬು ಸಯ್ಯದ್ ನ ನೇಮಕಾತಿ ಮಾಡಲು ತಯಾರಿ ನಡೆದಿತ್ತು. ಆದ್ರೆ ಅಬು ಸಯ್ಯದ್‌ಗೆ ವಿಧ್ಯಾಭ್ಯಾಸ ಇಲ್ಲದ ಕಾರಣಕ್ಕೆ ಹ್ಯಾಂಡ್ಲರ್ಸ್ ತಡ ಮಾಡಿದ್ರು. ಆದ್ರೂ ಅಬು ಸೈಯದ್ ವಿದ್ಯಾಭ್ಯಾಸ ಇಲ್ಲದಿದ್ರೂ ಟೆಕ್ನಿಕಲಿ ಸ್ಟ್ರಾಂಗ್ ಮಾಡಲು ಮುಂದಾಗಿದ್ರು. ಟೆಲಿಗ್ರಾಂ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದ ಶಂಕಿತರು. ನೇಮಕಾತಿ ವಿಚಾರಗಳನ್ನ ಇದೇ ಗ್ರೂಪಿನಲ್ಲಿ ಚರ್ಚೆಯೂ ಆಗಿತ್ತು. ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪೊಲೀಸ್ ಮೂಲಗಳ ಎಕ್ಸ್ ಕ್ಲೂಸೀವ್ ಮಾಹಿತಿ.

10:54 AM IST:

ಕೊಡಗು: ಪದೇ ಭೂಕಂಪನವಾಗಿದ್ದ ಚೆಂಬು ಗ್ರಾಮದ ಸ್ಥಿತಿ ಏನಾಗಿದೆ ಗೊತ್ತಾ? ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಪಂಚಾಯಿತಿ ವ್ಯಾಪ್ತಿಯ ದಬ್ಬಡ್ಕದಲ್ಲಿ ಭೀಕರ ಜಲಸ್ಫೋಟ.
ರಾಜೇಶ್ವರಿ ಎಂಬುವರ ರಬ್ಬರ್ ತೋಟದಲ್ಲಿ ಜಲಸ್ಫೋಟ. ಭಾರೀ ಶಬ್ಧದೊಂದಿಗೆ ಆಗಿರುವ ಜಲಸ್ಫೋಟ. ತಡರಾತ್ರಿ 12 ಗಂಟೆ ವೇಳೆಗೆ ಆಗಿರುವ ಜಲಸ್ಫೋಟ. ಜಲಸ್ಫೋಟದ ಶಬ್ಧಕೇಳಿ ಮನೆಯಿಂದ ಹೊರಬಂದಿದ್ದ ಬಾಲಕೃಷ್ಣ ಎಂಬುವರ ಕುಟುಂಬ. ಹೊರ ಬರುವಷ್ಟರಲ್ಲಿ ಸಮುದ್ರದ ಅಲೆಯಂತೆ ನುಗ್ಗುತ್ತಿದೆ ನೀರು. ಕೂಡಲೇ ಎತ್ತರದ ಪ್ರದೇಶದ ಕಡೆಗೆ ಓಡಿದ ಮನೆಯ ಜನರು. ಎತ್ತರದ ಜಾಗಕ್ಕೆ ಓಡಿ ಪ್ರಾಣ ಉಳಿಸಿಕೊಂಡಿರುವ ಬಾಲಕೃಷ್ಣ ಮನೆಯವರು. ಬಾಲಕೃಷ್ಣ ಅವರ ಮನೆಗೆ ನೀರು ಕೆಸರು ನುಗ್ಗಿ ಮನೆಯ ವಸ್ತುಗಳೆಲ್ಲಾ ಹಾಳು. ಕುಸಿದು ಬಿದ್ದಿರುವ ದನದ ಕೊಟ್ಟಿಗೆ. ಜಲಸ್ಫೋಟದ ಜೊತೆಗೆ ಭಾರಿ ಭೂಕುಸಿತ. ಅರ್ಧ ಎಕರೆ ಭೂ ಪ್ರದೇಶ ಕುಸಿತ. ಕೆಸರಿನಂತಾಗಿ ಹರಿದು ಹೋಗಿರುವ ಭೂಮಿ. ಜಲಸ್ಫೋಟದಿಂದ ಕೊಚ್ಚಿಹೋದ 150 ರಬ್ಬರ್ ಮರಗಳು. 
150 ಕಾಫಿ ಗಿಡ, 40 ಅಡಿಕೆ ಮರಗಳು ನಾಶ. ರಾಜೇಶ್ವರಿ ಎಂಬುವರ ತೋಟ ಸರ್ವ ನಾಶ. ಆತಂಕದಲ್ಲಿರುವ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು. ಜೂನ್ ತಿಂಗಳ ಅಂತ್ಯದಲ್ಲಿ 10ಕ್ಕೂ ಹೆಚ್ಚು ಬಾರಿ ಭೂಕಂಪನವಾಗಿತ್ತು. 

10:48 AM IST:

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅವಾಂತರ. ನಿನ್ನೆ ಸುರಿದ ಭಾರಿ ಮಳೆಯಿಂದ ಕಂಗಾಲಾದ ರೈತಾಪಿ ಸಮೂಹ. ಮಳೆಯಿಂದ ಹಲವು ಸೇತುವೆ ಜಲಾವೃತ. ಭೀಮಳ್ಳಿ ಬಳಿಯ ಸೇತುವೆ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತ. ಸೋಮನಾಥಹಳ್ಳಿ, ಭೀಮಳ್ಳಿ, ಕಡಣಿ ಇತರೆ ಗ್ರಾಮಗಳಲ್ಲಿ ಮನೆಗಳಿಗೆ ನುಗ್ಗಿದ ನೀರು. ಮನೆಯಲ್ಲಿನ ಧವಸ ಧಾನ್ಯ ನೀರು ಪಾಲು ಜ‌ನ ಕಂಗಾಲು.

10:46 AM IST:

ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಪಶ್ಚಿಮ ವಾಹಿನಿ ಮುಳುಗಡೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ. ಪ್ರತಿದಿನ ಸಾವಿರಾರು ಜನರು ಇಲ್ಲಿ ಅಸ್ತಿ ವಿಸರ್ಜನೆ ಮಾಡುತ್ತಾರೆ. ಆದ್ರೆ‌ ಅಸ್ತಿ ವಿಸರ್ಜನೆ ಮಾಡಬಾರದು, ನದಿಗೆ ಇಳಿಯಬಾರದು ಎಂದು ನಿಷೇಧ ಹೇರಿರುವ ಮಂಡ್ಯ ಜಿಲ್ಲಾಡಳಿತ. ಆದ್ರೆ‌ ಜಿಲ್ಲಾಡಳಿತ ಆದೇಶವನ್ನು ಲೆಕ್ಕಿಸದೆ ಅಸ್ತಿ ವಿಸರ್ಜನೆಗೆ ಮುಂದಾದ ಜನರು. ಸದ್ಯ ಪಶ್ಚಿಮ ವಾಹಿನಿಯಲ್ಲಿರುವ ದೇವಾಲಯಗಳು ಮುಳುಗಡೆ. ಮುಳೆಗಡೆಯಾಗಿರುವುದರಿಂದ ಪ್ರವೇಶ ನಿಷೇಧ ಮಾಡಿ ಆದೇಶ.

10:24 AM IST:

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ. ಮಳೆ ಆರ್ಭಟಕ್ಕೆ ಜಿಲ್ಲೆಯಲ್ಲಿ ಅವಾಂತರ. ನಿನ್ನೆ ಸುರಿದ ಭಾರಿ ಮಳೆಗೆ ಮನೆ ಕುಸಿತ. ಮನೆ ಗೊಡೆ ಕುಸಿತದಿಂದ ಗುಂಡಪ್ಪ ಕುಂಬಾರ ಕುಟುಂಬಸ್ಥರ ಸಂಕಷ್ಟ. ಮನೆ ಕುಸಿತದಿಂದ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿ. ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದ ಗುಂಡಪ್ಪ ಎಂಬುವವರ ಮನೆ ಕುಸಿತ. ವಾಸಕ್ಕೆ ಮನೆಯಿಲ್ಲದೇ ಗುಂಡಪ್ಪ ಕಂಗಾಲು. ಸಹೋದರ ಅವರ ಮನೆಯಲ್ಲಿ ಗುಂಡಪ್ಪ ಕುಟುಂಬಸ್ಥರ ವಾಸ. ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹ. ಮಳೆ ಅಬ್ಬರಕ್ಕೆ ಭರ್ತಿಯಾದ ಕೆರೆ. ಅಲ್ಲಿಪೂರ ಕೆರೆ ಭರ್ತಿ ಹಾರಿದ ಕೆರೆ ಕೋಡಿ. ಕೆರೆ ಕೋಡಿ ಮೇಲಿನಿಂದ ಹರಿಯುತ್ತಿರುವ ನೀರು. ಅಲ್ಲಿಪೂರ ಗ್ರಾಮದೊಳಗಿನ ರಸ್ತೆ ಜಲಾವೃತ. ಶಾಲೆ ಹಾಗೂ ಪಂಚಾಯತ್‌ದೆ ತೆರಳುವ ರಸ್ತೆ ಜಲಾವೃತ. ಮಕ್ಕಳು, ವೃದ್ಧರು ತೆರಳಲು ಪರದಾಡುತ್ತಿದ್ದಾರೆ.

10:19 AM IST:

ಮಂಗಳೂರು: ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆ ಪ್ರಕರಣದ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಎದುರಾಗಿದೆ. ಮಂಗಳೂರು ನಗರ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಕನ್ನಡ ಸೇರಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರು ಭೇಟಿ. ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಅಲೋಕ್ ಕುಮಾರ್. ಮಂಗಳೂರು ಕಮಿಷನರೇಟ್, ಉಡುಪಿ ಜಿಲ್ಲೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ. ಮಂಗಳೂರು ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರತೆ ಕುರಿತು ಪರಿಶೀಲನಾ ಸಭೆ ನಡೆಸಲಿರುವ ಎಡಿಜಿಪಿ  ಅಲೋಕ್ ಕುಮಾರ್. ಪ್ರವೀಣ್ ನೆಟ್ಟಾರು ಹಾಗು ಫಾಝಿಲ್ ಹತ್ಯೆ ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆದಲಿರುವ ಅಲೋಕ್ ಕುಮಾರ್. ಮಂಗಳೂರು ಹೊರವಲಯದ ಬಜಪೆ , ಸುರತ್ಕಲ್ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 

10:11 AM IST:

ಹೊಸೂರು (ತಮಿಳುನಾಡು): ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ದ. ಮಳೆಯಾರ್ಭಟಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧರನ್ನು ಸ್ಥಳೀಯರು ಸಮಯ ಪ್ರಜ್ಞೆಯಿಂದ ಬಚಾವ್ ಮಾಡಿದ್ದಾರೆ. ರಾಜ್ಯದ ಗಡಿ ತಮಿಳುನಾಡಿನ ಹೊಸೂರಿನಲ್ಲಿ ಘಟನೆ. ಹೊಸೂರಿನ ಜಿಆರ್‌ಟಿ ವೃತ್ತದ ಬಳಿ ಚರಂಡಿಗೆ ಬಿದ್ದಿದ್ದ ವೃದ್ದ. ಬಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆ ಬದಿಯ ಚರಂಡಿಯನ್ನ ಮುಚ್ಚದೇ ಹಾಗೆ ಬಿಡಲಾಗಿತ್ತು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ವೃದ್ದ. ಹರಿವ ಮಳೆ ನೀರಿನ ಜೊತೆಗೆ ಚರಂಡಿಯೊಳಗೆ ಬಿದ್ದಿದ್ದ. ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ದನನ್ನು ರಕ್ಷಿಸಿದ ಸಾರ್ವಜನಿಕರು. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದ ವೃದ್ದ. ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬರುತ್ತಿತ್ತು. ಗಾಯಗೊಂಡಿದ್ದರೂ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿಯೇ ಕಿರಿಕ್. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ. ಸ್ಥಳಕ್ಕೆ ಬಂದ ಹೊಸೂರು ಪೋಲೀಸರ ಮೇಲೆಯೇ ವೃದ್ದ ಜಟಾಪಟಿ. ಆಸ್ಪತ್ರೆಗೆ ಹೋಗೋದಿಲ್ಲ ಎಂದು ಪೋಲೀಸರ ಜೊತೆ ಕಿರಿಕ್ ಸಹ ಮಾಡಿದ್ದರು. ತದ ನಂತರ ವೃದ್ದನ ಮನವೊಲಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ.

11:01 AM IST:

ಅದು 6 ತಿಂಗಳ‌ ಹಿಂದೆ ನಡೆದಿದ್ದ ಅನುಮಾನಾಸ್ಪದ ಸಾವು. ಶಾಲಾ ಶಿಕ್ಷಕಿಯ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದು ನಿಂತಿತ್ತು. ಕಡೆಗೆ 6 ತಿಂಗಳ ನಂತರ ಆರೋಪಿಗಳು ಅಂದರ್ ಆಗಿದ್ದಾರೆ. ಕೊಲೆಗೆ ಅಕ್ರಮ ಸಂಭಂಧ ಕಾರಣವಾಗಿದ್ದು, ಟೀಚರ್ ಬಲಿಯಾಗಿದ್ದಾರೆ. ಇಂದು ನಂಜನಗೂಡಿನ ಹಿಂದಿ ಶಿಕ್ಷಕಿ ಕೊಲೆ ರಹಸ್ಯ. ಶಿಕ್ಷಕಿ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ. ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಯೊಂದಿಗೆ ತನ್ನ ಪತಿ ಹೊಂದಿದ್ದ ಅಕ್ರಮ ಸಂಭಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಸುದ್ದಿಗಾಗಿ ಇಲ್ಲಿ ಓದಿ

10:07 AM IST:

ಹುಬ್ಬಳ್ಳಿ: ಬತ್ ರೂಮ್‌ ನಲ್ಲಿ‌ ಜಾರಿ ಬಿದ್ದ ಕೈ ಶಾಸಕ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲಿನ ಮೂಳೆ ಮುರಿತ. ರೂಮಿನಲ್ಲಿ ಕಾಲು ಜಾರಿ ಬಿದ್ದು ಕಾಲು ಮುರಿದಿದೆ. ತಕ್ಷಣವೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ.ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ನಡೆದ ಘಟನೆ. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರಾವನಿಸಿದ ಆಪ್ತರು.ಸಿದ್ಧರಾಮೋತ್ಸದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಾಸಕರು.

9:48 AM IST: