ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ನಿಯಮ ಮರೆಯಲೇಬೇಡಿ, ಕೇವಲ 16ದಿನದಲ್ಲಿ ದಾಖಲಾಗಿದೆ 12ಸಾವಿರಕ್ಕೂ ಹೆಚ್ಚು ಕೇಸ್!

By Gowthami K  |  First Published May 17, 2024, 3:24 PM IST

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವಾಗ ಈ ನಿಯಮಳನ್ನು ತಪ್ಪದೇ ಪಾಲಿಸಿ. ಇಲ್ಲವೇ ಕೇಸ್‌ ಹಾಕಿಸಿಕೊಳ್ಳಲು ರೆಡಿಯಾಗಿ.


ಬೆಂಗಳೂರು (ಮೇ.17): ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವಾಗ ಈ ನಿಯಮಳನ್ನು ತಪ್ಪದೇ ಪಾಲಿಸಿ. ಇಲ್ಲವೇ ಕೇಸ್‌ ಹಾಕಿಸಿಕೊಳ್ಳಲು ರೆಡಿಯಾಗಿ.  ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದಿದ್ದಕ್ಕೆ, ಸಂಚಾರ ನಿಯಮ ಪಾಲಿಸದೇ ಇದ್ದಿದ್ದಕ್ಕೆ ಮತ್ತು ಓವರ್‌ ಸ್ಫೀಡ್‌ ಹೀಗೆ  ಕೇವಲ 16 ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದೆ.

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಕೇಸ್‌  ಬೀಳಲಿದ್ದು, ಸೀಟ್ ಬೆಲ್ಟ್‌ ಧರಿಸದೇ ಕಾರು ಚಲಾಯಿಸಿದ ಸವಾರರ ಮೇಲೆ ಕೇವಲ 16 ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದೆ. ಮೇ 1 ರಿಂದ ಮೇ 16ರ ವರೆಗೆ  12192 ಕೇಸ್ ದಾಖಲು ಮಾಡಲಾಗಿದ್ದು,  ಹೆದ್ದಾರಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಈ ಕೇಸ್ ದಾಖಲು ಮಾಡಲಾಗಿದೆ.

Tap to resize

Latest Videos

undefined

ಬೆಂಗಳೂರು-ಮೈಸೂರು ಹೈವೇನಲ್ಲಿ 10 ರೂ.ಗೆ ಸಿಗುತ್ತೆ ಹೊಟ್ಟೆ ತುಂಬಾ ತಿಂಡಿ; ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ, ಬೋಂಡ!

ಕಾರು ಚಾಲಕ ಸೀಟ್ ಬೆಲ್ಟ್ ಧರಿಸದೇ  ಚಾಲನೆ ಮಾಡಿರುವುದರ ಜೊತೆಗೆ  ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಕೂಡ ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡಿರುವುದು ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ಆಧಾರದಲ್ಲಿ ಕಾರು ಮಾಲೀಕನ ವಿಳಾಸಕ್ಕೆ ನೋಟಿಸ್ ನೀಡಲಾಗಿದೆ. ನೋಟಿಸ್ ಮಾಡಿದ ಏಳು ದಿನದಲ್ಲಿ ಸಂಚಾರಿ ಠಾಣೆಗೆ ಹೋಗಿ ದಂಡ ಪಾವತಿಗೆ ಸೂಚನೆ ನೀಡಲಾಗಿದೆ. ದಂಡ ಕಟ್ಟದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪತ್ತೆಗಾಗಿ ಎಐ ಆಧಾರಿತ ಎಎನ್ ಪಿಆರ್ ಕ್ಯಾಮೆರಾ ಅಳಡಿಕೆ ಮಾಡಲಾಗಿದೆ.

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ANPR ಕ್ಯಾಮೆರಾ ಅಳವಡಿಕೆ..!

ಸುದ್ದಿಗಾರರೊಂದಿಗೆ ಇತ್ತೀಚೆಗೆ  ಮಾತನಾಡಿದ ಅಲೋಕ್ ಕುಮಾರ್, ಎಕ್ಸ್ ಪ್ರೆಸ್ ವೇನಲ್ಲಿ 100 ಕಿಲೋಮೀಟರ್ ಗಿಂತಲೂ ಮೀರಿ ಚಾಲಕರು ವಾಹನಗಳ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಲು ಹೆದ್ದಾರಿಯಲ್ಲಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದರು.

ವಾಹನಗಳ ಚಾಲಕರು ಮತ್ತು ಮುಂದಿನ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸದೆ ಪ್ರಯಾಣ ಮಾಡುವ ವಾಹನಗಳ ಚಾಲಕರನ್ನು ಸಿಸಿ ಕ್ಯಾಮೆರಾದ ಮೂಲಕ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಕ್ಸ್ ಪ್ರೆಸ್ ವೇ ನಲ್ಲಿ ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಎರಡು ವಿಭಾಗಗಳಲ್ಲಿ ತಲಾ ಎರಡು ಗಸ್ತು ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ನಿಗಾ ವಹಿಸಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಹೆದ್ದಾರಿಯಲ್ಲಿ ದ್ವಿಚಕ್ರ. ಮತ್ತು ತ್ರಿಚಕ್ರ ಹಾಗೂ ಟ್ರ್ಯಾಕ್ಟರ್ ಸೇರಿದಂತೆ ಮೋಟಾರ್ ವಾಹನಗಳ ಸಂಚಾರವನ್ನು ನಿಷೇಧಿಸುವ ಮೂಲಕ ಹೆಚ್ಚುವರಿಯಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಇದರಿಂದ ಕ್ರಮೇಣ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

 

No violation can escape the hawk eyes of our powerful cameras on Bengaluru-Mysore Highway, whether it’s day or night

Plz avoid use of mobile phones while driving plz take action against the errant driver having disregard for traffic rules pic.twitter.com/8HrKHUA5hn

— alok kumar (@alokkumar6994)
click me!