Qatar Jobless Kannadigas: ಕತಾರ್​​ನಲ್ಲಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದ 35 ಮಂದಿ ಮರಳಿ ಭಾರತಕ್ಕೆ

Published : Feb 05, 2022, 04:22 PM ISTUpdated : Feb 05, 2022, 05:52 PM IST
Qatar Jobless Kannadigas: ಕತಾರ್​​ನಲ್ಲಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದ 35 ಮಂದಿ  ಮರಳಿ ಭಾರತಕ್ಕೆ

ಸಾರಾಂಶ

ಕತಾರ್​​ನಲ್ಲಿ ಉದ್ಯೋಗ ಕಳೆದು ಕೊಂಡು ಸಂಬಳವಿಲ್ಲದೇ ಅತಂತ್ರರಾಗಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರದ 35 ಕಾರ್ಮಿಕರನ್ನು ಕತಾರ್​ನ ಉತ್ತರ ಕರ್ನಾಟಕ ಬಳಗದ ಅಧ್ಯಕ್ಷ ಶಶಿಧರ್ ಹೆಬ್ಬಾಳ್ ವಾಪಸ್​ ತವರಿಗೆ ಕಳಿಸಿದ್ದಾರೆ.

ಕತಾರ್(ಫೆ.5): ಕತಾರ್​​ನಲ್ಲಿ ಉದ್ಯೋಗ ಕಳೆದು ಕೊಂಡು ಸಂಬಳವಿಲ್ಲದೇ ಅತಂತ್ರರಾಗಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರದ 35 ಕಾರ್ಮಿಕರನ್ನು ಕತಾರ್​ನ ಉತ್ತರ ಕರ್ನಾಟಕ ಬಳಗದ ಅಧ್ಯಕ್ಷ ಶಶಿಧರ್ ಹೆಬ್ಬಾಳ್ ವಾಪಸ್​ ತವರಿಗೆ ಕಳಿಸಿದ್ದಾರೆ

ಈ ಬಗ್ಗೆ ಮಾತನಾಡಿರುವ ಶಶಿಧರ್ ಹೆಬ್ಬಾಳ್ , 2021 ರ ಮದ್ಯ ಭಾಗದಲ್ಲಿ ಕಾರ್ಮಿಕರು ಕತಾರ್‌ಗೆ ತೆರಳಿದ್ದರು. ಒಂದು ತಿಂಗಳ ಸಂಬಳ ಮಾತ್ರ ಕಾರ್ಮಿಕರಿಗೆ ದೊರಕಿದ್ದು, 4 ತಿಂಗಳಿನಿಂದ ಸಂಬಳ ಸಿಗದೆ ಕಂಪನಿ ಮುಚ್ಚಿದೆ.  ಫ್ಲೈಟ್ ಟಿಕೆಟ್/ಆರ್‌ಟಿಪಿಸಿಆರ್/ಸಾರಿಗೆ ವೆಚ್ಚಗಳನ್ನು ನೀಡಲು ಕಂಪನಿ ಸಿದ್ಧವಿಲ್ಲದ ಕಾರಣ ಭಾರತಕ್ಕೆ ಮರಳುವ ಬಗ್ಗೆ ಎಲ್ಲರಿಗೂ ಚಿಂತೆ ಕಾಡಿತ್ತು. ಅವರು ನನ್ನ ಸಂಪರ್ಕ ಸಂಖ್ಯೆಯನ್ನು ಪಡೆದರು ಮತ್ತು ವಿವರಗಳೊಂದಿಗೆ ಸಂದೇಶ ಕಳುಹಿಸಿದರು. ನಾನು ಅವರ ಬಳಿಗೆ ತಕ್ಷಣ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದೆ.

ಕೂಡಲೇ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿವರಗಳನ್ನು ವಿವರಿಸಿ ಮತ್ತು ಸಾಧ್ಯವಿರುವ ಸಹಾಯವನ್ನು ವಿನಂತಿಸಿದೆವು. ಕಂಪೆನಿಗೆ ದೂರವಾಣಿ ಮೂಲಕ ವಿಚಾರ ತಿಳಿಸಿದೆವು. ಕಾರ್ಮಿಕರ ಕನಿಷ್ಠ ವೆಚ್ಚವನ್ನು ನೀಡಲು ಕೂಡ ಕಂಪೆನಿ ಸಿದ್ಧವಾಗಿಲ್ಲ.

"

BMRCL Recruitment 2022: ಬೆಂಗಳೂರು ಮೆಟ್ರೋದಲ್ಲಿದೆ ಉದ್ಯೋಗಾವಕಾಶ

ಆ ಸಮಯದಲ್ಲಿ ನಾವು ಕೆಲವು ಕಂಪನಿಗಳನ್ನು ಉದ್ಯೋಗ ನೀಡಲು ಪ್ರಯತ್ನಿಸಿದೆವು ಮಾತುಕತೆ ಯಶಸ್ವಿಯಾಯಿತು. ಆದರೆ ಅದು ವರ್ಕೌಟ್ ಆಗಿಲ್ಲ. ಏಕೆಂದರೆ ಸದ್ಯ ಕೆಲಸ ಕಳೆದುಕೊಂಡಿರುವವರ ವೀಸಾವನ್ನು ಅಸ್ತಿತ್ವದಲ್ಲಿರುವ ಕಂಪನಿಯಿಂದ ಇನ್ನೊಂದಕ್ಕೆ ವರ್ಗಾಯಿಸಲಾಗುವುದಿಲ್ಲ.

ಕೊನೆಗೆ  ನಾನು ಅವರನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ ಮತ್ತು ಹಣವನ್ನು ಕಳುಹಿಸಲು ಅವರ ಕುಟುಂಬದವರನ್ನು ಮಾತನಾಡಿಸಿದೆ ಆದರೆ ಎಲ್ಲರೂ ಬಡವರು ಹೀಗಾಗಿ ಸಾಧ್ಯವಿಲ್ಲ. ಕೊನೆಗೆ ಏಜೆಂಟರಿಗೆ ಮನವರಿಕೆ ಮಾಡಿಕೊಟ್ಟು ನನ್ನಿಂದಲೇ ಸ್ವಲ್ಪ ಹಣ ಹಾಕಿ 6 ಬ್ಯಾಚ್‌ಗಳಲ್ಲಿ 35 ಕಾರ್ಮಿಕರನ್ನು ಕಳುಹಿಸಿದೆ ಎಂದಿದ್ದಾರೆ.

HAL RECRUITMENT 2022: ಜನರಲ್ ಮ್ಯಾನೇಜರ್ ಸೇರಿ 7 ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!: ಡಿಸೆಂಬರ್ 2021ರ ವೇಳೆಗೆ ಭಾರತದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ತಲುಪಿದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ (Centre for Monitoring Indian Economy - CMIE) ಹೇಳಿದೆ. ಇವರಲ್ಲಿ 3.5 ಕೋಟಿ ನಿರುದ್ಯೋಗಿಗಳು ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದಾರೆ ಮತ್ತು 1.7 ಕೋಟಿ ಜನರು ಕೆಲಸ ಮಾಡಲು ಸಿದ್ಧರಿದ್ದರೂ ಕೆಲಸ ಹುಡುಕಲು ಮನಸ್ಸು ಮಾಡಿಲ್ಲ ಎಂದು ಸಿಎಂಐಇ ತನ್ನ ವರದಿಯಲ್ಲಿ ತಿಳಿಸಿದೆ.

ಭಾರತವು ನಿರುದ್ಯೋಗ (Unemployment) ದರದಲ್ಲಿರುವ ಶೇ. 7.9 ಜನರಿಗೆ ಅಥವಾ ಡಿಸೆಂಬರ್ 2021ರಲ್ಲಿ ಕಂಡು ಬಂದಿರುವ 3.5 ಕೋಟಿ ಜನರಿಗೆ ತಕ್ಷಣವೇ ಉದ್ಯೋಗವನ್ನು ಒದಗಿಸಬೇಕಾಗಿದೆ. ಯಾರು ಸಕ್ರಿಯವಾಗಿ ಉದ್ಯೋಗ  ಹುಡುಕುತ್ತಿದ್ದಾರೋ ಅವರಿಗೆ ಕೆಲಸ ಒದಗಿಸಬೇಕು ಎಂದು ಸಿಎಂಐಇ ತನ್ನ ಸಾಪ್ತಾಹಿಕ ವಿಶ್ಲೇಷಣೆಯಲ್ಲಿ ಒತ್ತಾಯಿಸಿದೆ.

ಹೆಚ್ಚುವರಿ 1.7 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುವುದು ಕೂಡ ಅಷ್ಟೇ ಮುಖ್ಯವಾದ ಸವಾಲಾಗಿದೆ. ಇವರು ಕೆಲಸ ಲಭ್ಯವಿದ್ದರೆ ಕೆಲಸ ಮಾಡಲು ಸಿದ್ಧರಿದ್ದಾರೆ, ಆದರೆ ಕೆಲಸಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿಲ್ಲ ಅಷ್ಟೇ ಎಂದಿದ್ದಾರೆ.
ಸಿಎಂಐಇ ಪ್ರಕಾರ ಡಿಸೆಂಬರ್ 2021ರಲ್ಲಿ ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದ 3.5 ಕೋಟಿ ನಿರುದ್ಯೋಗಿಗಳಲ್ಲಿ ಶೇ. 23 ಅಂದರೆ 80 ಲಕ್ಷದಷ್ಟು ಜನರು ಮಹಿಳೆಯರು, ಇನ್ನು 1.7 ಕೋಟಿ ಮಂದಿ ಪ್ಯಾಸಿವ್ ಆಗಿ ನಿರುದ್ಯೋಗಿಗಳಾಗಿದ್ದು, ಶೇ 53ರಷ್ಟು ಅಂದರೆ 90 ಲಕ್ಷ ಮಹಿಳೆಯರು ಸಕ್ರಿಯವಾಗಿ ಕೆಲಸಕ್ಕಾಗಿ ಹುಡುಕದಿದ್ದರೂ ಅವರಿಗೆ ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ಮಾಡುವ ಸಾಮರ್ಥ್ಯ ಇದ್ದರೂ ಸಕ್ರಿಯವಾಗಿ ಕೆಲಸಕ್ಕೆ ಏಕೆ ಅಪ್ಲೈ ಮಾಡುತ್ತಿಲ್ಲ ಅಥವಾ ಉದ್ಯೋಗ ಅರಸಲು ಬೇರೆ ಪ್ರಯತ್ನ ಏಕೆ ಮಾಡುತ್ತಿಲ್ಲ. ಇದನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಉದ್ಯೋಗ ಲಭ್ಯ ಇಲ್ಲ ಎಂಬ ಕಾರಣವೋ ಅಥವಾ ಕೆಲಸಕ್ಕೆ ಸೇರುವುದಕ್ಕೆ ಸಾಮಾಜಿಕ ಬೆಂಬಲದ ಕೊರತೆಯೋ ಎಂಬ ಚರ್ಚೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!