ಅಡಕೆ ಕ್ಯಾನ್ಸರ್‌ ಕಾರಕವೇ?: ಈಗ ಕೇಂದ್ರ ಸರ್ಕಾರ ಅಧ್ಯಯನ, ಸಿಪಿಸಿಆರ್‌ಐಗೆ 10 ಕೋಟಿ ರು.

By Kannadaprabha News  |  First Published Dec 16, 2024, 6:33 AM IST

ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನು ಕ್ಯಾನ್ಸರ್‌ಕಾರಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದು ತೀವ್ರ ವಿವಾದಕ್ಕೆ ಗುರಿಯಾಗಿರುವಂತೆಯೇ ಇನ್ನೊಂದೆಡೆ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆಯಲ್ಲಿದೆ. 


ಆತ್ಮಭೂಷಣ್‌

ಮಂಗಳೂರು (ಡಿ.16): ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನು ಕ್ಯಾನ್ಸರ್‌ಕಾರಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವುದು ತೀವ್ರ ವಿವಾದಕ್ಕೆ ಗುರಿಯಾಗಿರುವಂತೆಯೇ ಇನ್ನೊಂದೆಡೆ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆಯಲ್ಲಿದೆ. ಈ ಮಧ್ಯೆ ಅಡಕೆ ಬೆಳೆಗಾರರು, ಬೆಳೆಗಾರ ಸಂಘಟನೆಗಳು, ಜನಪ್ರತಿನಿಧಿಗಳ ಸತತ ಪ್ರಯತ್ನದ ಫಲವಾಗಿ ಈ ಗೊಂದಲ, ವಿವಾದಕ್ಕೆ ಶಾಶ್ವತ ಪರಿಹಾರ ಕ್ರಮಕ್ಕೆ ಕೇಂದ್ರ ಸರ್ಕಾರ ಕೊನೆಗೂ ದಿಟ್ಟ ಹೆಜ್ಜೆ ಇರಿಸಿದೆ. 

Tap to resize

Latest Videos

ಈಗ ಅಡಕೆಯ ಆರೋಗ್ಯ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರವೇ ಅಧ್ಯಯನ ನಡೆಸಲು ಹೊರಟಿದೆ. ಸುಮಾರು 10 ಕೋಟಿ ರು. ಮೊತ್ತ ಬಿಡುಗಡೆಗೊಳಿಸಿದ್ದು, ಕಾಸರಗೋಡಿನ ಇಂಡಿಯನ್‌ ಕೌನ್ಸಿಲ್‌ ಆಫ್‌ ಅಗ್ರಿಕಲ್ಚರಲ್‌ ರಿಸರ್ಚ್‌(ಐಸಿಎಆರ್‌) ಇದರಡಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಇದರ ನೇತೃತ್ವ ವಹಿಸಿಕೊಳ್ಳಲಿದೆ. ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್‌ ನೇತೃತ್ವದಲ್ಲಿ ವಿಜ್ಞಾನಿಗಳ ತಂಡ ಅಧ್ಯಯನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸುಮಾರು ತಲಾ 3.15 ಕೋಟಿ ರು.ಗಳಂತೆ ಮೂರು ಹಂತಗಳಲ್ಲಿ ಈ ಮೊತ್ತ ಬಿಡುಗಡೆಯಾಗಲಿದೆ. ದೇಶದ ಪ್ರತಿಷ್ಠಿತ ಏಮ್ಸ್‌ನಂತಹ 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ಮೂಲಕ ಅಡಕೆ ಬಗ್ಗೆ ವಿಸ್ತೃತ ಅಧ್ಯಯನ ನಡೆಯಲಿದೆ. ಮೂರು ವರ್ಷದಲ್ಲಿ ಅಧ್ಯಯನ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ.

ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

undefined

ಬರೇ ಅಡಕೆ ಅಧ್ಯಯನವೂ ಇದೆ: ವಿಶ್ವ ಆರೋಗ್ಯ ಸಂಸ್ಥೆಗೆ ಇದುವರೆಗೆ ಸಲ್ಲಿಕೆಯಾದ ಅಡಕೆ ಕುರಿತ ಅಧ್ಯಯನ ವರದಿಯಲ್ಲಿ ಗುಟ್ಕಾ ಅಥವಾ ತಂಬಾಕು ಸಹಿತ ಅಡಕೆ ಬಗ್ಗೆ ನಡೆಸಿದ ಅಧ್ಯಯನ ವರದಿ ಇದೆ. ಅದರ ಆಧಾರದಲ್ಲೇ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಷರಾ ಬರೆಯಲಾಗಿದೆ. ಇದೇ ಮೊದಲ ಬಾರಿಗೆ ಬರೇ ಅಡಕೆ ಹಾಗೂ ಅದರ ಸೇವನೆ ಕುರಿತೂ ಅಧ್ಯಯನ ನಡೆಯಲಿದೆ. ಈ ಮೂಲಕ ಅಡಕೆ ಆರೋಗ್ಯಕರ ಎಂಬುದನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯಲಿದೆ.

ಅಧ್ಯಯನ ವಿಧಾನ ಹೇಗೆ?: ಮೊದಲ ಹಂತದಲ್ಲಿ ಅಡಕೆಯ ಸ್ಯಾಂಪಲ್‌ ಪಡೆದುಕೊಂಡು ಅಧ್ಯಯನ ನಡೆಯಲಿದೆ. ಬರೇ ಅಡಕೆ, ಅಡಕೆ ತಿನ್ನುವವರ ಮೇಲೆ ಪ್ರಯೋಗಾಲಯ ಪರೀಕ್ಷೆಯೂ ನಡೆಯಲಿದೆ. ದಂತವೈದ್ಯಕೀಯ ಆಸ್ಪತ್ರೆಗಳಲ್ಲಿ ಅಡಕೆ ತಿನ್ನುವುದರಿಂದ ಹಾಗೂ ಅಡಕೆ ಸಹಿತ ಕೆಮಿಕಲ್ ಮಿಶ್ರಣದ ಗುಟ್ಕಾ ಸೇವಿಸುವುದರಿಂದ ದಂತ ಕ್ಯಾನ್ಸರ್‌ ಸಂಭವಿಸಿರುವ ಬಗ್ಗೆಯೂ ಅಧ್ಯಯನ ನಡೆಯಲಿದೆ. ದೇಶಾದ್ಯಂತ ವಿವಿಧ ಕಡೆಗಳಲ್ಲಿ ಅಡಕೆಯ ಆರೋಗ್ಯ ಪರಿಣಾಮದ ವಿವಿಧ ಹಂತಗಳು ಅಧ್ಯಯನಕ್ಕೆ ಒಳಪಡಲಿದೆ. ಮುಂದಿನ ಹಂತಗಳಲ್ಲಿ ಇಲಿ, ಹಲ್ಲಿ ಮುಂತಾದವುಗಳ ಮೇಲೂ ಕ್ಲಿನಿಕಲ್‌ ಪ್ರಯೋಗ ನಡೆಯಲಿದೆ. ಕೊನೆ ಹಂತದಲ್ಲಿ ಸಮಗ್ರ ಅಧ್ಯಯನ ನಡೆದು ಅಡಕೆಯ ಆರೋಗ್ಯ ಪರಿಣಾಮ ಜಾಗತಿಕವಾಗಿ ಪ್ರಕಟವಾಗಲಿದೆ. 

ಅಂ.ರಾ.ಜರ್ನಲ್‌ಗಳಲ್ಲಿ ಪ್ರಕಟವಾಗಬೇಕು: ಸಿಪಿಸಿಆರ್‌ಐ ನೇತೃತ್ವದಲ್ಲಿ ಅಡಕೆ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಅದರ ವರದಿ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಲಿದೆ. ಗೂಗಲ್‌ ಸ್ಕಾಲರ್‌ಗಳೂ ಕೂಡ ಅಧ್ಯಯನ ವರದಿ ಪರಿಶೀಲಿಸಬೇಕು. ಇವೆಲ್ಲವೂ ವಿಶ್ವ ಆರೋಗ್ಯ ಸಂಸ್ಥೆಗೆ ತಲುಪಬೇಕು. ನಂತರವಷ್ಟೆ ಅಡಕೆಯಲ್ಲಿ ಆರೋಗ್ಯ ಪರಿಣಾಮ ಏನು ಎಂಬುದು ಜಗತ್ತಿನ ಮುಂದೆ ವಿಶ್ಲೇಷಣೆಗೊಳಗಾಲಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಅಡಕೆಯ ಆರೋಗ್ಯಕರ ಪರಿಣಾಮಗಳು ಮನದಟ್ಟಾದರೆ ಮಾತ್ರ ಅದನ್ನೇ ಮಾನದಂಡವಾಗಿರಿಸಿಕೊಂಡು ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಐ) ಕೂಡ ಅಡಕೆ ಮೇಲಿನ ಕ್ಯಾನ್ಸರ್‌ಕಾರಕ ಕಳಂಕವನ್ನು ತೊಡೆದುಹಾಕಲು ಸಾಧ್ಯವಾಗಲಿದೆ ಎಂಬುದು ಸಿಪಿಸಿಆರ್‌ಐ ವಿಜ್ಞಾನಿಗಳ ಅಂಬೋಣ.ಸಿಪಿಸಿಆರ್‌ಐ ಭಗೀರಥ ಪ್ರಯತ್ನ.

ಅಡಕೆ ಆರೋಗ್ಯ ಪರಿಣಾಮ ಕುರಿತಂತೆ ಕ್ಯಾಂಪ್ಕೋ ಸೇರಿದಂತೆ ವಿವಿಧ ಬೆಳೆಗಾರ ಸಂಘಟನೆಗಳಂತೆ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಕೂಡ ಕಳೆದ ನಾಲ್ಕೈದು ವರ್ಷಗಳಿಂದಲೇ ಅವಿರತ ಶ್ರಮದಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ಕೇಂದ್ರ ಸಹಾಯಕ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಈ ಬಗ್ಗೆ ಮನದಟ್ಟು ಮಾಡುವ ಪ್ರಯತ್ನ ನಡೆಸಿದೆ. ಇಲ್ಲಿವರೆಗೆ ಬರೇ ಅಡಕೆಯ ಬಗ್ಗೆ ಅಧ್ಯಯನ ನಡೆದಿಲ್ಲ ಎಂಬುದನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ಮನದಟ್ಟು ಮಾಡಲು ಯತ್ನಿಸಲಾಗಿದೆ. ಅದರ ಫಲವಾಗಿ ಅಡಕೆಯ ಸಮಗ್ರ ಅಧ್ಯಯನಕ್ಕೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ.

ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್‌ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್‌ ಸಿಟಿ’ ನಿರ್ಮಾಣ

ಈಗಾಗಲೇ ದೇಶದ ಪ್ರತಿಷ್ಠಿತ ವಿವಿಧ ಸಂಶೋಧನಾ ಸಂಸ್ಥೆಗಳು, ಮೆಡಿಕಲ್‌ ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ಅಡಕೆಗೆ ಪೂರಕವಾದ ಸಂಘಸಂಸ್ಥೆಗಳನ್ನು ಸಿಪಿಸಿಆರ್‌ಐ ಸಂಪರ್ಕಿಸಿ ಎರಡು ಸುತ್ತಿನ ಮಾತುಕತೆ ನಡೆಸಿದೆ. ಅಲ್ಲದೆ ಯಾವ ರೀತಿ ಅಧ್ಯಯನ ನಡೆಸಬೇಕು. ಏನೆಲ್ಲ ಸಿದ್ಧತೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಿದ್ದು, ಕೇಂದ್ರದಿಂದ ಮೊತ್ತ ಬಿಡುಗಡೆಯಾದ ಕೂಡಲೇ ಅಧ್ಯಯನ ಆರಂಭವಾಗಲಿದೆ ಎಂದು ಸಿಪಿಸಿಆರ್‌ಐ ಮೂಲಗಳು ತಿಳಿಸಿವೆ.

click me!