‘ಮಾಣಿಪ್ಪಾಡಿಯವರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಅವರ ವಿಡಿಯೋ ಹೇಳಿಕೆ ನೋಡಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಈಗ ಯಾಕೆ ಉಲ್ಟಾ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗದಗ (ಡಿ.16): ‘ಮಾಣಿಪ್ಪಾಡಿಯವರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಅವರ ವಿಡಿಯೋ ಹೇಳಿಕೆ ನೋಡಿಯೇ ಪ್ರತಿಕ್ರಿಯೆ ನೀಡಿದ್ದೇನೆ. ಈಗ ಯಾಕೆ ಉಲ್ಟಾ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗದಗ ಜಿಲ್ಲೆ ರೋಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ವಕ್ಫ್ ಆಸ್ತಿ ಅಕ್ರಮದ ವರದಿ ಮುಚ್ಚಿ ಹಾಕಲು ಕಾಂಗ್ರೆಸ್‌ನಿಂದಲೇ ನನಗೆ ಕೋಟಿ ಕೋಟಿ ಆಫರ್ ಬಂದಿತ್ತು.
ಮೌನದಿಂದಿರಲು ವಿಜಯೇಂದ್ರ 150 ಕೋಟಿ ಆಫರ್ ಮಾಡಿದ್ದಾರೆ ಎಂಬುದು ಸುಳ್ಳು ಎಂಬ ಅನ್ವರ್ ಮಾಣಿಪ್ಪಾಡಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ವಿಡಿಯೋ ರೆಕಾರ್ಡ್ ನಲ್ಲಿ ಇದೆಯಲ್ಲ. ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಅವರೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈಗ ಯಾಕೆ ಉಲ್ಟಾ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಬದಲಾವಣೆ ಮಾಡಿಸಿ ಬಿಜೆಪಿಯವರೇ ಹೇಳಿಸಿರಬಹುದು ಎಂದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟರೆ ಕಾಂಗ್ರೆಸ್ ನವರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬ ಮಾಣಿಪ್ಪಾಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ. ಸಿಬಿಐಗೆ ಕೊಡಲಿ ಎಂದರು.
ಸಿಎಂ ಘೇರಾವ್‌ಗೆ ಯತ್ನಿಸಿದ ಹೋರಾಟಗಾರರ ಬಂಧನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೇರಾವ್ ಹಾಕಲು ತೆರಳುತ್ತಿದ್ದ ಪಂಚಮಸಾಲಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ ಘಟನೆ ಗದಗ, ನರೇಗಲ್ ಮತ್ತು ರೋಣ ಪಟ್ಟಣದಲ್ಲಿ ಭಾನುವಾರ ನಡೆದಿದೆ. ರೋಣ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ₹200 ಕೋಟಿ ವೆಚ್ಚದ ವಿವಿಧ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದರು. ಈ ವೇಳೆ ಗದಗ ನಗರದಿಂದ ರೋಣ ಪಟ್ಟಣಕ್ಕೆ ಪಂಚಮಸಾಲಿ ಹೋರಾಟಗಾರು ಆಗಮಿಸುತ್ತಿದ್ದರು.
ಅಡಕೆ ಕ್ಯಾನ್ಸರ್ ಕಾರಕವೇ?: ಈಗ ಕೇಂದ್ರ ಸರ್ಕಾರ ಅಧ್ಯಯನ, ಸಿಪಿಸಿಆರ್‌ಐಗೆ 10 ಕೋಟಿ ರು.
ಅವರನ್ನು ಗದಗ ನಗರದ ತೋಂಟದಾರ್ಯ ಮಠದ ಮಹಾದ್ವಾರದ ಬಳಿ ಬಂಧಿಸಲಾಯಿತು. ಅದೇ ರೀತಿ ರೋಣ ಹಾಗೂ ನರೇಗಲ್ ಪಟ್ಟಣದಲ್ಲಿಯೂ ಪಂಚಮಸಾಲಿ ಮುಖಂಡರನ್ನು ಪೊಲೀಸರು ಬಂಧಿಸಿದರು. 2ಎ ಮೀಸಲಾತಿ ಹೋರಾಟದ ವೇಳೆ ಪಂಚಮಸಾಲಿಗರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶಿಸಿ, ಘೇರಾವ್ ಹಾಕಲು ಇವರು ತೆರಳುತ್ತಿದ್ದರು.