ಅವಕಾಶ ಸಿಕ್ಕಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುತ್ತೇನೆ: ಕುಮಾರ್‌ ಬಂಗಾರಪ್ಪ

Published : Dec 16, 2024, 07:25 AM IST
ಅವಕಾಶ ಸಿಕ್ಕಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುತ್ತೇನೆ: ಕುಮಾರ್‌ ಬಂಗಾರಪ್ಪ

ಸಾರಾಂಶ

ಬೂತ್ ಮಟ್ಟದಿಂದ ಅಧ್ಯಕ್ಷರ ಬದಲಾವಣೆ ಆಗುತ್ತಿದೆ, ರಾಜ್ಯ ಮಟ್ಟದಲ್ಲಿ ಸಹ ಬದಲಾವಣೆ ಆಗುತ್ತೆ. ನಾನು ರಾಜ್ಯಾಧ್ಯಕ್ಷರ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳೋದಿಲ್ಲ. ಅವಕಾಶ ಸಿಕ್ಕಲ್ಲಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು.

ಶಿವಮೊಗ್ಗ (ಡಿ.16): ಬೂತ್ ಮಟ್ಟದಿಂದ ಅಧ್ಯಕ್ಷರ ಬದಲಾವಣೆ ಆಗುತ್ತಿದೆ, ರಾಜ್ಯ ಮಟ್ಟದಲ್ಲಿ ಸಹ ಬದಲಾವಣೆ ಆಗುತ್ತೆ. ನಾನು ರಾಜ್ಯಾಧ್ಯಕ್ಷರ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳೋದಿಲ್ಲ. ಅವಕಾಶ ಸಿಕ್ಕಲ್ಲಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 30 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಒಬಿಸಿ ಸಮುದಾಯಕ್ಕೆ ಪರಿಗಣಿಸಿದರೆ ನನ್ನನ್ನು ಪರಿಗಣಿಸಿ ಎಂದಿದ್ದೇನೆ. ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗಬಹುದು ಎಂಬ ನಿರೀಕ್ಷೆ ಇದೆ. ನನಗೂ ಬೇಕಿದ್ದರೆ ಕೊಡಲಿ ಸ್ಥಾನ ನಿರ್ವಹಿಸುತ್ತೇನೆ. ಒಬಿಸಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲಾ ಸಮಾಜಗಳನ್ನು ಒಟ್ಟಿಗೆ ತಗೆದುಕೊಂಡು ಹೋಗಲು ಸಹಕಾರಿ ಆಗಲಿದೆ. 

ಅವಕಾಶ ಕೊಟ್ಟರೆ ನೂರಕ್ಕೆ ನೂರು ಅಧ್ಯಕ್ಷ ಸ್ಥಾನ ನಿಭಾಹಿಸುತ್ತೇನೆ ಎಂದರು. ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತ ವಿಚಾರದ ಬಗ್ಗೆ ಮಾತನಾಡಿದ ಅವರು, ಬಣ ರಾಜಕೀಯ ಅಂತ ಅಲ್ಲ. ನಮ್ಮ ಅನಿಸಿಕೆಗಳನ್ನು ಹೈ ಕಮಾಂಡ್ ಗೆ ತಿಳಿಸಿದ್ದೇವೆ. ಸೂಕ್ತವಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನ ಹೈಕಮಾಂಡ್ ತಗೆದುಕೊಳ್ಳುತ್ತಾರೆ. ಎಲ್ಲರನ್ನು ಜೊತೆಗೆ ಕರೆದುಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ತಯಾರಿ ನಡಿಬೇಕು ಅಂದಿದ್ದೇವೆ. ರೇಣುಕಾಚಾರ್ಯ ಅವರು ಸಭೆ ನಡೆಸುತ್ತಿರೊದು ಏನು ತಪ್ಪಿಲ್ಲ. ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಹೈ ಕಮಾಂಡ್ ಹೇಳಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದ್ಗುರು ಸ್ಥಾಪಿತ ಈಶ ಫೌಂಡೇಶನ್‌ನ 5 ಕೃಷಿ ಸಂಸ್ಥೆಗಳಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ

ಮನುಷ್ಯ ಬುದ್ಧಿವಂತಿಕೆ, ಸಂಸ್ಕೃತಿ ಕಲಿತಿದ್ದೆ ಪ್ರಕೃತಿಯಿಂದ: ನಮ್ಮ ಕಲೆಗೆ ಪ್ರಕೃತಿಯೆ ಸ್ಪೂರ್ತಿ, ಅದಕ್ಕಿಂತ ದೊಡ್ಡದು ಯಾವುದು ಇಲ್ಲ ಎಂಬುದಕ್ಕೆ ಮಳೆ ಮತ್ತು ಬರಗಾಲದ ರೂಪದಲ್ಲಿ ನಮ್ಮ ಮುಂದೆ ಬರುತ್ತಿದೆ ಎಂದು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಹೇಳಿದರು. ಇಲ್ಲಿನ ಈಡಿಗರ ಭವನದಲ್ಲಿ ಭಾನುವಾರ ಧೀರ ದೀವರ ಬಳಗ, ಹಳೇಪೈಕಿ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿದತ್ತ ಸಂಪತ್ತಿನ ಒಳಗೆ ಜಾನಪದ ಕಲೆಗಳು ಮತ್ತು ನಮ್ಮ ಮುಂದಿನ ಪೀಳಿಗೆ ನೋಡುವ ಶಕ್ತಿ, ಯುಕ್ತಿ, ಮಾರ್ಗದರ್ಶನ ಎಲ್ಲವೂ ಪ್ರಕೃತಿಯಲ್ಲಿದೆ ಎಂದರು.

ನಮ್ಮ ಚಿತ್ತಾರ ಕಲೆ, ಬುದ್ಧಿವಂತಿಕೆ ಸಂಸ್ಕೃತಿಯನ್ನು ಕಲಿತಿರುವುದು ಈ ಪ್ರಕೃತಿಯಿಂದಲೆ. ಅಕ್ಷರ ಕಲಿಯುವುದಕ್ಕಿಂತ ಮೊದಲು ಮಾತುಗಳು ಬರುತ್ತಿದ್ದವು. ಅದಕ್ಕಿಂತ ಮೊದಲು ಸ್ವರ ಜ್ಞಾನವನ್ನು ದೇವರು ಸ್ವಾಭಾವಿಕವಾಗಿ ನೀಡಿದ್ದ. ಒಳ್ಳೆಯದು, ಕೆಟ್ಟದ್ದು ತೂಗುವ ಶಕ್ತಿ ಮನುಷ್ಯನಿಗಿದೆ. ಆದರೆ ಅದನ್ನು ಕಲಿತಿದ್ದು ಮಾತ್ರ ಮಾತು ಬರದಿರುವ ಪ್ರಾಣಿ-ಪಕ್ಷಿ ಹಾಗೂ ಪ್ರಕೃತಿಯಿಂದ, ನದಿಯಿಂದ, ನೀರಿನ ನಿಶ್ಯಬ್ದತೆಯಿಂದ ಎಂದು ಹೇಳಿದರು. ಕಲೆಗಳು ಇಂದಿಗೂ ಸಹಿತ ನಮ್ಮ ಪ್ರಕೃತಿಯಲ್ಲಿ ಅಡಗಿವೆ. ಪ್ರಕೃತಿ ರೌದ್ರತೆ, ಶಾಂತವಾಗಿಯೂ ಇದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಮುಂದಿನ ಪೀಳಿಗೆಗೆ ಹೋಗಬೇಕು ಎನ್ನುವ ಪ್ರಯತ್ನ ಅಭೂತಪೂರ್ವ. ಮನುಷ್ಯ ಸ್ವಾರ್ಥಿಯಾದ ಮೇಲೆ ಸಂಪ್ರದಾಯಗಳು ನಮಗೆ ಮಾತ್ರ ಎಂಬ ಭಾವನೆ ಬಂದಿದೆ. 

ಆನೆಗಳ ಹಾವಳಿ ನಿಯಂತ್ರಣಕ್ಕೆ ಆನೆಧಾಮ ನಿರ್ಮಾಣ: ಸಚಿವ ಈಶ್ವರ್ ಖಂಡ್ರೆ

ಇದನ್ನು ಬಿಡಬೇಕು. ಸಮಾಜದ ಅನೇಕ ನಾಯಕರು ಸಮಾಜದ ಜೊತೆಗಿದ್ದು, ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಧೀರರ ಸಾಂಸ್ಕೃತಿಕ ವೈಭವದ ಸಂಚಾಲಕ ನಾಗರಾಜ ನೇರಿಗೆ ಪ್ರಾಸ್ತವಿಕವಾಗಿ ಮಾತಾಡಿದರು. ರಾಜಪ್ಪ ಮಾಸ್ತರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಚಲನಚಿತ್ರ ನಿರ್ದೇಶಕ ರಾಜಗುರು, ಧೀರ ದೀವರ ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ, ಗಣಪತಿಯಪ್ಪ ಮಡೆನೂರು, ಕಣ್ಣೂರು ಟಾಕಪ್ಪ, ಲಕ್ಷ್ಮೀ ಗಡೆಮನೆ, ಮೋಹನ್ ಚಂದ್ರಗುತ್ತಿ, ತಬಲಿ ಬಂಗಾರಪ್ಪ, ಶ್ರೀಧರ್ ಹುಲ್ತಿಕೊಪ್ಪ, ಗೀತಾಂಜಲಿ ದತ್ತಾತ್ರೇಯ, ಐಎಎಸ್ ಅಧಿಕಾರಿ ಜಿ.ಜಗದೀಶ್, ಪುರುಷೋತ್ತಮ್, ಲಕ್ಷ್ಮಣ್ ಕೊಡಸೆ, ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ