ರಾಜ್ಯದಲ್ಲಿ ರ‍್ಯಾಪಿಡ್‌ ಟೆಸ್ಟ್‌ ಆರಂಭ?: 12400 ಟೆಸ್ಟಿಂಗ್‌ ಕಿಟ್‌ ಆಗಮನ!

By Kannadaprabha NewsFirst Published Apr 18, 2020, 7:33 AM IST
Highlights

ರಾಜ್ಯದಲ್ಲಿ ನಾಳೆಯಿಂದ ರ‍್ಯಾಪಿಡ್‌ ಟೆಸ್ಟ್‌ ಆರಂಭ?| ವೇಗವಾಗಿ ಸೋಂಕು ಪತ್ತೆಗೆ ಇದು ಸಹಕಾರಿ| ಇಂದು ರಾಜ್ಯಕ್ಕೆ 12400 ಟೆಸ್ಟಿಂಗ್‌ ಕಿಟ್‌ ಆಗಮನ

ಬೆಂಗಳೂರು(ಏ.18): ಕೇಂದ್ರ ಸರ್ಕಾರ 12,400 ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳನ್ನು ರಾಜ್ಯಕ್ಕೆ ಪೂರೈಕೆ ಮಾಡುತ್ತಿದ್ದು, ಸದ್ಯದಲ್ಲೇ ಈ ಕಿಟ್‌ಗಳನ್ನು ಬಳಸಿಕೊಂಡು ತ್ವರಿತವಾಗಿ ಕೊರೋನಾ ಸೋಂಕು ಪತ್ತೆಗೆ ಪರೀಕ್ಷಾ ಕಾರ್ಯ ಆರಂಭಿಸಲಾಗುವುದು ಎಂದು ಕೋವಿಡ್‌​-19 ಉಸ್ತುವಾರಿ ಹೊತ್ತ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರೀಸಜ್‌ರ್‍ (ಐಸಿಎಂಆರ್‌) ಮೂಲಕ ಖರೀದಿಸಿರುವ 6.5 ಲಕ್ಷ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳ ಪೈಕಿ 12,400 ಕಿಟ್‌ಗಳನ್ನು ಕರ್ನಾಟಕಕ್ಕೆ ಪೂರೈಕೆ ಮಾಡುತ್ತಿದೆ. ಇವು ಶನಿವಾರ ರಾಜ್ಯಕ್ಕೆ ತಲುಪಲಿದ್ದು, ಕೂಡಲೇ ಅಗತ್ಯಕ್ಕನುಗುಣವಾಗಿ ಎಲ್ಲ ಜಿಲ್ಲೆಗಳಿಗೂ ಕಿಟ್‌ಗಳ ಹಂಚಿಕೆ ಮಾಡಲಾಗುವುದು. ಆಯಾ ಜಿಲ್ಲಾಡಳಿತಗಳ ಮೂಲಕ ರಾರ‍ಯಪಿಡ್‌ ಟೆಸ್ಟ್‌ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಬೆಂಗಳೂರಲ್ಲಿ ಹೆಚ್ಚುತ್ತಿದೆ ಲಾಕ್‌ಡೌನ್‌ ಉಲ್ಲಂಘನೆ!

ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಪರೀಕ್ಷೆಗಳು ಹೆಚ್ಚಿದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಪ್ರಯೋಗಾಲಯಗಳ ಕೊರತೆ ಇತ್ತು. ನಾಲ್ಕು ದಿನಗಳ ಹಿಂದಿನವರೆಗೆ ನಿತ್ಯ 500 ಮಾದರಿ ಪರೀಕ್ಷೆ ಮಾಡಲಾಗುತ್ತಿತ್ತು. ಸದ್ಯ ಪ್ರಯೋಗಾಲಯ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈಗ ನಿತ್ಯ 2000 ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಸೋಂಕಿರ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳ ಮೂಲಕ ಪರೀಕ್ಷೆ ಆರಂಭವಾದರೆ ಇನ್ನಷ್ಟು ಹೆಚ್ಚಾಗಬಹುದು. ರಾರ‍ಯಪಿಡ್‌ ಕಿಟ್‌ಗಳನ್ನು ಬಳಸಿ ಬಹಳ ಬೇಗ ಸೋಂಕು ಪತ್ತೆಹಚ್ಚಬಹುದಾಗಿದೆ ಎಂದರು.

ಟೆಸ್ಟ್‌ ಯಾರಿಗೆ?

ಈ ಪರೀಕ್ಷೆಯನ್ನು ಮೊದಲು ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ಸರ್ಕಾರಿ ವೈದ್ಯರು, ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಡೆಲಿವರಿ ಬಾಯ್‌್ಸ ಸೇರಿದಂತೆ ಹೆಚ್ಚಿನದಾಗಿ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರುವವರ ತಪಾಸಣೆಗೆ ಬಳಸುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

3 ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ತೀವ್ರ: ಚಚ್ಚುಮದ್ದು ಪಡೆದವರಿಗೂ ರೋಗ!

ಏನಿದು ರಾರ‍ಯಪಿಡ್‌ ಟೆಸ್ಟ್‌?

ರೋಗಿಯ ರಕ್ತದ ಮಾದರಿ ಪಡೆದು ರಾರ‍ಯಪಿಡ್‌ ಆ್ಯಂಟಿಬಾಡಿಸ್‌ ಟೆಸ್ಟ್‌ ನಡೆಸಲಾಗುತ್ತದೆ. ಇದು ಅಗ್ಗದ ಪರೀಕ್ಷೆ. ಕೇವಲ 20ರಿಂದ 30 ನಿಮಿಷಗಳಲ್ಲಿ ಫಲಿತಾಂಶ ಸಿಗುತ್ತದೆ. ಕೊರೋನಾ ವೈರಸ್‌ ವಿರುದ್ಧ ದೇಹದಲ್ಲಿರುವ ಪ್ರತಿಕಾಯ ಶಕ್ತಿ ಹೋರಾಟ ಆರಂಭಿಸಿದೆಯೇ ಇಲ್ಲವೇ ಎಂಬುದಷ್ಟೇ ಈ ಪರೀಕ್ಷೆಯಿಂದ ತಿಳಿದುಬರುತ್ತದೆ. ಪ್ರತಿಕಾಯ ಶಕ್ತಿಗಳು ಕೆಲಸ ಶುರು ಮಾಡಿಲ್ಲದಿದ್ದರೆ ನೆಗೆಟಿವ್‌ ಎಂಬ ಫಲಿತಾಂಶ ಬರುತ್ತದೆ. ಸಾಮಾನ್ಯವಾಗಿ ವೈರಸ್‌ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿರುವ ಹಾಟ್‌ಸ್ಪಾಟ್‌ಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

click me!