ಯುವಬ್ರಿಗೇಡ್‌ ಕಾರ್ಯಕರ್ತನ ಹತ್ಯೆ; ಹಿಂದೂ ಪರ ಸಂಘಟನೆಗಳಿಂದ ಬಂದ್

By Kannadaprabha News  |  First Published Jul 11, 2023, 4:48 AM IST

ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ವೇಳೆ ನಡೆದ ಸಣ್ಣ ಗಲಾಟೆ ಯುವ ಬ್ರಿಗೇಡ್‌ ಸಂಚಾಲಕ ವೇಣುಗೋಪಾಲ್‌ ಎಂಬವರ ಕೊಲೆಯಲ್ಲಿ ಅಂತ್ಯವಾಗಿದೆ. ಜು.8ರಂದು ಹನುಮ ಜಯಂತಿ ದಿನ ದೇಗುಲದ ಒಳಗೆ ಬೈಕ್‌ ಒಳಗೆ ಬಿಡಲಿಲ್ಲ ಎಂಬ ಸಣ್ಣ ವಿಚಾರಕ್ಕೆ ಆರಂಭವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ


ಟಿ.ನರಸೀಪುರ (ಜು.11) : ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ವೇಳೆ ನಡೆದ ಸಣ್ಣ ಗಲಾಟೆ ಯುವ ಬ್ರಿಗೇಡ್‌ ಸಂಚಾಲಕ ವೇಣುಗೋಪಾಲ್‌ ಎಂಬವರ ಕೊಲೆಯಲ್ಲಿ ಅಂತ್ಯವಾಗಿದೆ. ಜು.8ರಂದು ಹನುಮ ಜಯಂತಿ ದಿನ ದೇಗುಲದ ಒಳಗೆ ಬೈಕ್‌ ಒಳಗೆ ಬಿಡಲಿಲ್ಲ ಎಂಬ ಸಣ್ಣ ವಿಚಾರಕ್ಕೆ ಆರಂಭವಾದ ಜಗಳದಿಂದ ಈ ಕೊಲೆ ನಡೆದಿದ್ದು, ಘಟನೆ ಖಂಡಿಸಿ ಸೋಮವಾರ ಹಿಂದೂ ಪರ ಸಂಘಟನೆಗಳ ಕರೆ ಮೇರೆಗೆ ಟಿ.ನರಸೀಪುರ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸ್ವಯಂಪ್ರೇರಿತ ಬಂದ್‌ ನಡೆಸಲಾಯಿತು.

ಹನುಮ ಜಯಂತಿ ವೇಳೆ ಬೈಕ್‌ಗಳನ್ನು ಗುಂಜಾನರಸಿಂಹ ಸ್ವಾಮಿ ದೇಗುಲದ ಒಳಗೆ ತರುವುದು ಬೇಡ, ಒಬ್ಬರು ಬೈಕ್‌ ಒಳಗೆ ತಂದರೆ ಎಲ್ಲರೂ ತರುತ್ತಾರೆ, ಇದರಿಂದ ಸಮಸ್ಯೆ ಆಗುತ್ತದೆ ಎಂದು ವೇಣುಗೋಪಾಲ ಹೇಳಿದ ವಿಚಾರ ಜಗಳಕ್ಕೆ ತಿರುಗಿ, ನಂತರ ಇದನ್ನೇ ನೆಪಮಾಡಿಕೊಂಡ ಪಟ್ಟಣದ ಶ್ರೀರಾಮಪುರ ಬೀದಿ ಮಣಿಕಂಠ ಆ.ಕೊಳಮಣಿ, ತಿರಮಕೂಡಲು ಸಂದೇಶ್‌, ಅನಿಲ…, ಶಂಕರ, ತುಪ್ಪ ಹ್ಯಾರಿಸ್‌ ಮತ್ತು ಮಂಜು ಸೇರಿ ಸಂಧಾನಕ್ಕಾಗಿ ತಲಕಾಡು ರಸ್ತೆ ಹಳೆಸಂತೆ ಮಾಳದ ಬಳಿ ಇರುವ ಅಗ್ನಿಶಾಮಕದಳದ ಬಳಿ ಭಾನುವಾರ ರಾತ್ರಿ ಕರೆಸಿಕೊಂಡರು. ನಂತರ ಬಾಟಲ…, ಚಾಕು ಬಳಸಿ ವೇಣುಗೋಪಾಲ…ನನ್ನು ಕೊಲೆ ಮಾಡಿದ್ದಾರೆ ಎಂದು ಪಟ್ಟಣ ಪೊಲೀಸ್‌ ಠಾಣೆಯಲ್ಲಿ 6ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Latest Videos

undefined

ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವಾಯಿತಾ?

ಸ್ವಯಂಪ್ರೇರಿತ ಬಂದ್‌: ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಪರ ಸಂಘಟನೆಗಳಿಂದ ಸ್ವಯಂ ಪ್ರೇರಿತ ನರಸೀಪುರ ಬಂದ್‌ಗೆ ಕರೆ ನೀಡಲಾಗಿತ್ತು. ಅಂಗಡಿ ಮಾಲೀಕರು ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರಿಂದ ಟಿ.ನರಸೀಪುರ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೃತ ವ್ಯಕ್ತಿ ವೇಣುಗೋಪಾಲ… ಮನೆ ಮುಂಭಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೈಕ್‌ ತರಬೇಡಿ, ಪುನೀತ್‌ ಫೋಟೋ ಬೇಡ ಎಂದಿದ್ದಕ್ಕೆ ಹತ್ಯೆ?

ಹನುಮ ಜಯಂತಿ ವೇಳೆ ಬೈಕ್‌ ದೇವಾಲಯದ ಒಳ ತರುವುದು ಬೇಡ ಹಾಗೂ ಪುನೀತ್‌ ಫೋಟೋ ಮೆರವಣಿಗೆಗೆ ಬೇಡ, ಇಲ್ಲಿ ಎಲ್ಲ ನಟರ ಭಕ್ತರಿದ್ದಾರೆ ಎಂದು ಹೇಳಿದ್ದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ಕೆಲ ಯುವಕರು ನನ್ನ ಪತಿಯನ್ನು ಹತ್ಯೆ ಮಾಡಿದ್ದಾರೆಂದು ವೇಣುಗೋಪಾಲ ಪತ್ನಿ ಪೂರ್ಣಿಮಾ ಆರೋಪಿಸಿದ್ದಾರೆ. ಗಲಾಟೆ ವಿಚಾರವಾಗಿ ಮಾತುಕತೆ ಮೂಲಕ ಸಂಧಾನ ಮಾಡಿಕೊಳ್ಳೋಣ ಎಂದು ನಂಬಿಸಿ ನನ್ನ ಗಂಡನ ಕರೆಸಿ ಕೊಲೆ ಮಾಡಲಾಗಿದೆ. ಗಂಡನನ್ನು ಕಳೆದುಕೊಂಡಿರುವ ನನಗೆ ಮತ್ತು ನನ್ನ ಮಗಳಿಗೆ ಯಾರು ದಿಕ್ಕು? ಇಂಥ ಕ್ರೂಪ ಪಾಪಿಗಳನ್ನು ಬಿಡಬಾರದು. ಇವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ

click me!