ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಶ್ರೀಗಳ ಬಳಿಯಿದ್ದ ಅವರ ವೈಯಕ್ತಿಕ ಡೈರಿಯನ್ನು ಸುಟ್ಟುಹಾಕಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಬೆಳಗಾವಿ (ಜು.13) : ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಂತಕರು ಶ್ರೀಗಳ ಬಳಿಯಿದ್ದ ಅವರ ವೈಯಕ್ತಿಕ ಡೈರಿಯನ್ನು ಸುಟ್ಟುಹಾಕಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಡೈರಿಯಲ್ಲಿ ಯಾವ ಮಾಹಿತಿ ಇತ್ತು. ಅದರಲ್ಲಿ ಯಾವೆಲ್ಲ ಸಂಗತಿಗಳಿದ್ದವು ಎನ್ನುವ ಕುರಿತು ಆರೋಪಿ ನಾರಾಯಣ ಮಾಳಿ(Narayana mali) ಮಾಹಿತಿ ನೀಡುತ್ತಿಲ್ಲ. ನನಗೇನೂ ಅದರಲ್ಲಿ ಯಾವ ಮಾಹಿತಿ ಇತ್ತು ಗೊತ್ತಿಲ್ಲ. ಶ್ರೀಗಳ ಡೈರಿಯನ್ನು ನಾನೇ ಸುಟ್ಟುಹಾಕಿದ್ದೇನೆ ಎಂದು ಹೇಳಿದ್ದಾನೆ.
ಜೈನ ಮುನಿ ಹತ್ಯೆ ಪ್ರಕರಣ: ಭದ್ರತೆ ಜೊತೆ ಪೊಲೀಸ್ ಸಿಬ್ಬಂದಿಯ ಮಾನವೀಯ ಕಾರ್ಯ ..!
ಪೊಲೀಸ್ ಕಷ್ಟಡಿಯಲ್ಲಿರುವ ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಆರೋಪಿಗಳು ಹೇಳಿದ ಮಾಹಿತಿ ಆಧರಿಸಿ ಕೊಲೆ ಸಂಚಿನ ಪಿನ್ ಟು ಪಿನ್ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ತೀವ್ರ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಆರೋಪಿಗಳ ಜೊತೆಗೆ ಕೊಲೆ ನಡೆದ ಸ್ಥಳ, ಸಂಚು ರೂಪಿಸಿದ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ ನೇತೃತ್ವದ ತನಿಖಾ ತಂಡದಿಂದ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹಸನ್ ಡಲಾಯತ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್‌್ತ ನಡುವೆಯೇ ಆರೋಪಿಗಳನ್ನು ಖಟಕಬಾವಿಯ ತೆರೆದ ಕೊಳವೆಬಾವಿ ಸ್ಥಳಕ್ಕೆ ಪೊಲೀಸರು ಕರೆದೊಯ್ದು ಪರಿಶೀಲನೆ ನಡೆಸಿದರು.
ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಏನು ಕಾರಣ ಎಂಬುದರ ಕುರಿತು ತಿಳಿದುಕೊಳ್ಳಲು ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಶ್ರೀಗಳ ಹತ್ಯೆಗೆ ಹಣಕಾಸಿನ ವ್ಯವಹಾರ ಕಾರಣವಾ? ಇಲ್ಲವೇ ಬೇರೆ ಉದ್ದೇಶವೇನಾದರೂ ಇತ್ತಾ? ಎಂಬುದರ ಕುರಿತು ಪೊಲೀಸರು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಜೈನ ಮುನಿ ಹಂತಕರಿಗೆ ಪೊಲೀಸರಿಂದ ಫುಲ್ ಗ್ರಿಲ್: ವಿಚಾರಣೆ ವೇಳೆ ಖಾಕಿ ದಿಕ್ಕು ತಪ್ಪಿಸಲು ಯತ್ನ!
ಪ್ರಮುಖ ಆರೋಪಿ ನಾರಾಯಣ ಮಾಳಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ. ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ ಎಂಬ ಸಂಶಯ ಮೂಡುತ್ತಿದೆ. ವಿಚಾರಣೆ ವೇಳೆ ನನ್ನಿಂದ ತಪ್ಪಾಗಿದೆ ನಿಜ. ಗುಂಡಿಕ್ಕಿ ನನ್ನನ್ನು ಕೊಂದಿ ಬಿಡಿ, ಇಲ್ಲದಿದ್ದರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಶ್ರೀಗಳ ವೈಯಕ್ತಿಕ ಡೈರಿಯನ್ನು ಸುಟ್ಟಿದ್ದು ನಾನೇ. ಆದರೆ, ಅದರಲ್ಲೇನಿತ್ತು? ಎಂಬುದರ ಕುರಿತು ಬಾಯ್ಬಿಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.