ಜೈನ ಮುನಿ ಹಂತಕರಿಗೆ ಪೊಲೀಸರಿಂದ ಫುಲ್‌ ಗ್ರಿಲ್‌: ವಿಚಾರಣೆ ವೇಳೆ ಖಾಕಿ ದಿಕ್ಕು ತಪ್ಪಿಸಲು ಯತ್ನ!

ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಪೊಲೀಸರು ಪತ್ಯೇಕ ಕೊಠಡಿಯಲ್ಲಿ ಮಾಡುತ್ತಿದ್ದಾರೆ.
 

First Published Jul 12, 2023, 9:37 AM IST | Last Updated Jul 12, 2023, 9:37 AM IST

ಬೆಳಗಾವಿ: ಚಿಕ್ಕೋಡಿಯ ಹಿರೋಕೋಡಿಯ ಜೈನಮುನಿ ಹತ್ಯೆ ಪ್ರಕರಣದ(Jain Monk Murder) ಆರೋಪಿಗಳಿಗೆ ಪೊಲೀಸರು ಅಜ್ಞಾತ ಸ್ಥಳದಲ್ಲಿ ಫುಲ್‌ ಗ್ರಿಲ್‌ ಮಾಡುತ್ತಿದ್ದಾರೆ. ಮುನಿಗಳ ಹತ್ಯೆಗೆ ನಿಖರ ಕಾರಣ ತಿಳಿಯಲು ಖಾಕಿ ಪಡೆ ತನಿಖೆ ನಡೆಸುತ್ತಿದೆ. ಅಲ್ಲದೇ ಡೈರಿ(Dairy) ನಾಪತ್ತೆಯಾಗಿರುವ ಬಗ್ಗೆ ಆರೋಪಿಗಳಿಂದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮುನಿಗಳ ಜೊತೆ ಆರೋಪಿಗಳು ಯಾವ ರೀತಿ ಸಂಭಾಷಣೆ ಮಾಡಿದ್ದಾರೆ ಎಂಬುದರ ಬಗ್ಗೆ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ಆರೋಪಿಗಳ ದ್ವಂದ್ವ ಹೇಳಿಕೆಯಿಂದ ಪೊಲೀಸರಿಗೆ ಕಿರಿಕಿರಿಯಾಗಿದೆ. ಜೈನ ಮುನಿಗಳನ್ನು ಕರೆಂಟ್ ಶಾಕ್‌(Current shock) ಕೊಟ್ಟು, ಬಳಿಕ ಟವೆಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆಯನ್ನು(Murder) ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಚಿಕ್ಕೋಡಿ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

ಇದನ್ನೂ ವೀಕ್ಷಿಸಿ:  ಸಿಲಿಕಾನ್ ಸಿಟಿಯಲ್ಲಿ ಡಬಲ್‌ ಮರ್ಡರ್‌: ವೃತ್ತಿ ವೈಷಮ್ಯಕ್ಕೆ ನಡೆಯಿತಾ ಕೊಲೆ ?

Video Top Stories