ತಾವೇ ಮರುನಾಮಕರಣ ಮಾಡಿರುವ ಕಲ್ಯಾಣ ಕರ್ನಾಟಕ್ಕೆ BSY ಬಂಪರ್ ಕೊಡುಗೆ

By Suvarna NewsFirst Published Feb 16, 2020, 7:26 PM IST
Highlights

ಮಾರ್ಚ್ 5 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ‌ 2020  ಅವಧಿಯ ಮೊದಲ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ ನಡೆಸಿ ಆಯವ್ಯಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಬಿಎಸ್ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಘೋಷಣೆ ಮಾಡಿದ್ದಾರೆ.

ಬೆಂಗಳೂರು, [ಫೆ.16]: ಸಿಎಂ ಯಡಿಯೂರಪ್ಪ ಹೈದ್ರಾಬಾದ್‌ ಕರ್ನಾಟಕವನ್ನು 'ಕಲ್ಯಾಣ ಕರ್ನಾಟಕ'ಕ್ಕೆ 500 ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಇಂದು [ಭಾನುವಾರ] ಬೆಳಗ್ಗೆ ವಾರಣಾಸಿ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಬೆಂಗಳೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಕಲ್ಯಾಣ ಕರ್ನಾಟಕಕ್ಕೆ‌ ಬಜೆಟ್ ನಲ್ಲಿ500 ಕೋಟಿ ರೂ. ತಗೆದಿಡುತ್ತಿದ್ದೇನೆ. ಅಷ್ಟೇ ಅಲ್ಲದೇ ಈ ವರ್ಷ 100 ಕೋಟಿ‌ ರೂ ಅನುದಾನ ಕೊಟ್ಟು ಕೆಲಸ ಆರಂಭ ಮಾಡುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅನುದಾನ ಬಳಕೆ: ಕೊಪ್ಪಳ ಫಸ್ಟ್‌, ಬೀದರ್ ಲಾಸ್ಟ್

ಮಠ ಮಾನ್ಯಗಳಿಗೂ ಹೆಚ್ಚಿನ ನೆರವು ನೀಡುತ್ತೇನೆ. ಮಾರ್ಚ್ 5ನೇ ತಾರೀಖಿನ‌ ಬಜೆಟ್ ನಲ್ಲಿ ರೈತ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.

ನೀರಾವರಿ ಯೋಜನೆಗೆ ಒತ್ತು ಕೊಟ್ಟು,ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ರೈತ ಬೆಳೆಗಳಿಗೆ ವೈಜ್ಞಾನಿಕ ಬೆಲೆ‌ಕೊಟ್ಟು ರೈತರಿಗೆ ನೆರವಾಗಬೇಕಿದೆ‌ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಯಡಿಯೂರಪ್ಪ

2020  ಅವಧಿಯ ಮೊದಲ ಬಜೆಟ್ ಇದೇ ಮಾರ್ಚ್ 5ರಂದು ಸಿಎಂ ಯಡಿಯೂರಪ್ಪ ಮಂಡಿಸಲಿದ್ದು, ಈ ಬಾರಿ ಕೃಷಿ, ರೈತಪರ ಬಜೆಟ್ ಮಂಡಿಸುವುದಾಗಿ ಈಗಾಗಲೇ ಅವರೇ ಹೇಳಿದ್ದನ್ನು ಇಲ್ಲಿ ಸ್ಮರಿಸಹುದು.

click me!