ಕ್ರಿಕೆಟ್‌ಗೆ ದ್ರಾವಿಡ್ ಹಾಗೂ ಧೋನಿ ಅವಶ್ಯಕತೆ ಇದೆ-ಡೇವಿಡ್ ರಿಚರ್ಡ್ಸನ್

By Web DeskFirst Published Aug 7, 2018, 7:47 PM IST
Highlights

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಎಂ ಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ತಮ್ಮ ತಾಳ್ಮೆ, ನಡೆತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ದಿಗ್ಗಜ ಕ್ರಿಕೆಟಿಗರು ವಿದಾಯ ಹೇಳಿದರೂ ವಿಶ್ವ ಕ್ರಿಕೆಟ್‌ಗೆ ಇವರ ಅವಶ್ಯಕತೆ ಮಾತ್ರ ಬಹಳಷ್ಟಿದೆ.

ಲಾರ್ಡ್ಸ್(ಆ.07): ವಿಶ್ವ ಕ್ರಿಕೆಟ್‌ಗೆ ರೋಲ್ ಮಾಡೆಲ್‌ಗಳ ಅಗತ್ಯವಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಮಾದರಿ ಕ್ರಿಕೆಟಿಗನಾಗಿದ್ದರೆ, ಭಾರತದ ಮಾಜಿ ನಾಯಕರಾದ ರಾಹುಲ್ ದ್ರಾವಿಡ್ ಹಾಗೂ ಎಂ ಎಸ್ ಧೋನಿ ಅವಶ್ಯಕತೆ ವಿಶ್ವ ಕ್ರಿಕೆಟ್‌ಗಿದೆ ಎಂದು ಐಸಿಸಿ  ಮುಖ್ಯ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.

ಲಾರ್ಡ್ಸ್‌ನಲ್ಲಿ ಆಯೋಜಿಸಿದ್ದ 2018ರ ಎಂಸಿಸಿ ಕೌಡ್ರೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ರಿಚರ್ಡ್ಸನ್, ಸದ್ಯ ಕ್ರಿಕೆಟ್‌ಗೆ ಅಂಟಿಕೊಂಡ ಬಾಲ್ ಟ್ಯಾಂಪರಿಂಗ್ ಹಾಗೂ ಮೋಸದಾಟಗಳು ಕ್ರಿಕೆಟ್‌ಗೆ ಕಪ್ಪುಚುಕ್ಕೆ ಇದ್ದಂತೆ. 

ಕ್ರಿಕೆಟ್‌ನಲ್ಲಿ ಈ ರೀತಿಯ ಮೋಸಾದಾಟ ತಡೆಯಲು ಸಭ್ಯ ಕ್ರಿಕೆಟಿಗರ ಅಗತ್ಯವಿದೆ. ರಾಹುಲ್ ದ್ರಾವಿಡ್, ಎಂ ಎಸ್ ಧೋನಿ ಮೈದಾನದಲ್ಲಿ ಹಾಗೂ ಮೈದಾನದ ಆಚೆಗೂ ತಮ್ಮ ನಡೆತೆ ಹಾಗೂ ಸಭ್ಯತೆಯಲ್ಲಿ ಎಲ್ಲೇ ಮೀರಿಲ್ಲ. ಹೀಗಾಗಿ ದ್ರಾವಿಡ್, ಧೋನಿ ಸೇರಿದಂತೆ ಹಲವು ಸಭ್ಯ ಕ್ರಿಕೆಟಿಗರ ಅವಶ್ಯಕತೆ ವಿಶ್ವಕ್ರಿಕೆಟ್‌ಗೆ ಇದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ಐಸಿಸಿ, ಕ್ರಿಕೆಟಿಗರಿಗೆ ಕ್ರೀಡಾ ಸ್ಪೂರ್ತಿಯಿಂದ ಆಡಲು ಹಲವು ಶಿಭಿರಗಳನ್ನ ಆಯೋಜಿಸುತ್ತಿದೆ. ಈ ಮೂಲಕ ಕ್ರಿಕೆಟಿಗರಿಗೆ ಉಪಯುಕ್ತ ಮಾಹಿತಿ ನೀಡುವ ಕಾರ್ಯಕ್ಕೆ ಐಸಿಸಿ ಮುಂದಾಗಿದೆ ಎಂದು ರಿಚರ್ಡ್ಸನ್ ಹೇಳಿದ್ದಾರೆ.

click me!