ಇಗಾ ಸ್ವಿಯಾಟೆಕ್‌, ನೋವಾಕ್ ಜೋಕೋವಿಚ್‌ ಪ್ರೀ ಕ್ವಾರ್ಟರ್‌ಗೆ ಲಗ್ಗೆ

By Naveen Kodase  |  First Published Jul 9, 2023, 9:50 AM IST

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಜೋಕೋ ಗೆಲುವಿನ ನಾಗಾಲೋಟ
ವಿಶ್ವ ನಂ.1 ಇಗಾ ಸ್ವಿಯಾಟೆಕ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶ
ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಶುಭಾರಂಭ


ಲಂಡನ್‌(ಜು.09): ಸತತ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ವಿಶ್ವ ನಂ.1 ಇಗಾ ಸ್ವಿಯಾಟೆಕ್ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಜೋಕೋವಿಚ್ 3 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ಸ್ವಿಜರ್‌ಲೆಂಡ್‌ನ ವಾಂವ್ರಿಕಾ ವಿರುದ್ಧ 6-3, 6-1, 7-6(7/5) ಅಂತರದಲ್ಲಿ ಗೆಲುವು ಸಾಧಿಸಿದರು. ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ 4ನೇ ಸುತ್ತಿಗೇರಿದರು. ಆದರೆ 2 ಬಾರಿ ಚಾಂಪಿಯನ್‌ ಬ್ರಿಟನ್‌ನ ಆ್ಯಂಡಿ ಮರ್ರೆ, ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ವಿರುದ್ಧ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು.ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಪೋಲೆಂಡ್‌ನ ಇಗಾ ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್‌ ವಿರುದ್ಧ 6-2, 7-5 ಸುಲಭ ಜಯಗಳಿಸಿದರು. ಬ್ರೆಜಿಲ್‌ನ ಹದ್ದಾದ್‌ ಮಿಯಾ ಕೂಡಾ 4ನೇ ಸುತ್ತು ಪ್ರವೇಶಿಸಿದರು.

Latest Videos

undefined

ಬೋಪಣ್ಣ ಶುಭಾರಂಭ

ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಶುಭಾರಂಭ ಮಾಡಿದ್ದಾರೆ. ಈ ಜೋಡಿ ಅರ್ಜೆಂಟೀನಾದ ಡುರಾನ್‌-ಥಾಮಸ್‌ ಮಾರ್ಟಿನ್‌ ಜೋಡಿ ವಿರುದ್ಧ 6-2, 6-7(5/7), 7-6(10-8) ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.

ಕಿರಿಯರ ಆರ್ಚರಿ: ಅದಿತಿ ಚಾಂಪಿಯನ್‌

ಲೀಮರಿಕ್‌(ಐರ್ಲೆಂಡ್‌): ಭಾರತದ ಯುವ ಆರ್ಚರಿ ಪಟು ಅದಿತಿ ಸ್ವಾಮಿ ವಿಶ್ವ ಆರ್ಚರಿ ಯೂತ್‌ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಇಲ್ಲಿ ನಡೆದ ಅಂಡರ್‌-18 ಮಹಿಳೆಯರ ಕಾಂಪೌಂಡ್‌ ವಿಭಾಗದ ಫೈನಲ್‌ನಲ್ಲಿ 16 ವರ್ಷದ ಅದಿತಿ ಅಮೆರಿಕದ ಲೀನ್‌ ಡ್ರೇಕ್‌ ವಿರುದ್ಧ 142-136 ಅಂಕಗಳಿಂದ ಮಣಿಸಿ ಚಿನ್ನ ಜಯಿಸಿದರು. ಈ ಮೂಲಕ ಕೂಟದ ಇತಿಹಾಸದಲ್ಲಿ ವೈಯಕ್ತಿಕ ಪದಕ ಗೆದ್ದ 4ನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಈ ಮೊದಲು ಪಾಲ್ಟಾನ್‌ ಹನ್ಸದಾ, ದೀಪಿಕಾ ಕುಮಾರಿ, ಕೊಮಾಲಿಕಾ ಬಾರಿ ಪದಕ ಗೆದ್ದಿದ್ದರು.

"ಅತ್ತಿಗೆ ನನಗೆ 30 ಲಕ್ಷ ರುಪಾಯಿ ಸಾಕು.": ಧೋನಿ ಬಗ್ಗೆ ನೀವೆಲ್ಲೂ ಕೇಳಿರದ ಆ ದಿನಗಳ ಕಥೆ ಮೆಲುಕು ಹಾಕಿದ ಮಾಜಿ ಕ್ರಿಕೆಟಿಗ..!

17ರ ಗುಕೇಶ್‌ಗೆ ಮಣಿದ ವಿಶ್ವನಾಥನ್‌ ಆನಂದ್‌

ಜಾಗ್ರೆಬ್‌(ಕ್ರೊವೇಷಿಯಾ): ಇಲ್ಲಿ ನಡೆಯುತ್ತಿರುವ ಸೂಪರ್‌ ಯುನೈಟೆಡ್‌ ರ್‍ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ 5 ಬಾರಿ ವಿಶ್ವಚಾಂಪಿಯನ್‌, ಭಾರತದ ದಿಗ್ಗಜ ಚೆಸ್‌ ಪಟು ವಿಶ್ವನಾಥನ್ ಆನಂದ್‌ಗೆ 17ರ ಡಿ.ಗುಕೇಶ್‌ ಸೋಲುಣಿಸಿದ್ದಾರೆ. ಟೂರ್ನಿಯ 8ನೇ ಸುತ್ತಿನ ಪಂದ್ಯದಲ್ಲಿ ಭಾರತದ ಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಗುಕೇಶ್‌ ಗೆಲುವು ಸಾಧಿಸಿದರು. ಸದ್ಯ ಟೂರ್ನಿಯಲ್ಲಿ ಇಬ್ಬರೂ ತಲಾ 10 ಅಂಕಗಳೊಂದಿಗೆ 4ನೇ ಸ್ಥಾನ ಹಂಚಿಕೊಂಡಿದ್ದಾರೆ.

ಏಷ್ಯಾಡ್‌: ಈಜು ಸ್ಪರ್ಧೆಗೆ ರಾಜ್ಯದ 8 ಮಂದಿ ಆಯ್ಕೆ 

ನವದೆಹಲಿ: ಚೀನಾದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನ ಈಜು ಸ್ಪರ್ಧೆಗೆ ಭಾರತೀಯ ಈಜು ಫೆಡರೇಶನ್‌ 21 ಮಂದಿಯ ಂತಂಡ ಪ್ರಕಟಿಸಿದ್ದು, ಕರ್ನಾಟಕ 8 ಮಂದಿ ಸ್ಥಾನ ಗಿಟ್ಟಿಸಿದ್ದಾರೆ. ಅನೀಶ್‌ ಗೌಡ, ಉತ್ಕರ್ಷ್‌ ಪಾಟೀಲ್‌, ತನಿಶ್‌ ಜಾರ್ಜ್‌, ಶ್ರೀಹರಿ ನಟರಾಜ್‌, ಧಿನಿಧಿ, ಹಾಶಿಕಾ, ನೀನಾ ಹಾಗೂ ಲಿನೈಶಾ ತಂಡದಲ್ಲಿದ್ದಾರೆ.

click me!