
ದುಬೈ(ಸೆ.23): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಮೇಲುಗೈ ನೀಡಿದ್ದು ಎಂ.ಎಸ್ ಧೋನಿ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಫಕರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡೋ ಸೂಚನೆ ನೀಡಿದ್ದರು.
ಯುಜುವೇಂದ್ರ ಚೆಹಾಲ್ ಎಸೆತದಲ್ಲಿ ಇಮಾಮ್ ಉಲ್ ಹಕ್ ಎಲ್‌ಬಿ ಬಲೆಗೆ ಬಿದ್ದರು. ಆದರೆ ಅಂಪೈರ್ ತೀರ್ಮಾನ ನಾಟ್ ಔಟ್. ತಕ್ಷಣವೇ ಧೋನಿ ಡಿಆರ್‌ಎಸ್ ಪಡೆಯುವಂತೆ ರೋಹಿತ್‌ಗೆ ಸೂಚಿಸಿದರು.
ಧೋನಿ ಡಿಆರ್‌ಎಸ್ ಯಾವುತ್ತೂ ತಪ್ಪಾಗಿಲ್ಲ. ಪಾಕಿಸ್ತಾನ ವಿರುದ್ಧವೂ ಇದು ಸಾಬೀತಾಯಿತು. ಡಿಆರ್‌ಎಸ್‌ನಿಂದ ಧೋನಿ ನಿರ್ಧಾರ ಸರಿಯಾಗಿತ್ತು. ಹೀಗಾಗಿ ಅಂಪೈರ್ ಔಟ್ ತೀರ್ಮಾನ ನೀಡಿದರು.
ಧೋನಿಯ ಡಿಆರ್‌ಎಸ್ ನಿರ್ಧಾರಕ್ಕೆ ಟ್ವಿಟರ್‌ನಲ್ಲಿ ಮೆಚ್ಟುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಡಿಆರ್‌ಎಸ್ ಎಂದರೆ ಡಿಸಿಶನ್ ರಿವ್ಯೂಸ್ ಸಿಸ್ಟಮ್ ಅಲ್ಲ, ಬದಲಾಗಿದೆ ಧೋನಿ ರಿವ್ಯೂವ್ ಸಿಸ್ಟಮ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.