ಮುಂಬೈ ತೊರೆದು ಪುದುಚೇರಿ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

By Web DeskFirst Published Aug 20, 2018, 4:50 PM IST
Highlights

ಆತ ಟೀಂ ಇಂಡಿಯಾ ಪರ ಮಿಂಚಿದ ಕ್ರಿಕೆಟಿಗ, ಮುಂಬೈ ರಣಜಿ ತಂಡವನ್ನ ಮುನ್ನಡೆಸಿದ ನಾಯಕ. ಆಲ್ರೌಂಡರ್ ಕ್ರಿಕೆಟಿಗನಾಗಿ ಅದ್ಬುತ ಪ್ರದರ್ಶನ ನೀಡಿದ ಸ್ಟಾರ್ ಕ್ರಿಕೆಟಿಗ ಇದೀಗ 20 ವರ್ಷಗಳಿಂದ ಆಡುತ್ತಿದ್ದ ಮುಂಬೈ ತಂಡವನ್ನ ತೊರೆದು ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ. ಹಾಗಾದರೆ ಹೊಸ ತಂಡ ಸೇರಿಕೊಳ್ಳುತ್ತಿರುವ ಆ ಕ್ರಿಕೆಟಿಗ ಯಾರು? ಇಲ್ಲಿದೆ.

ಮುಂಬೈ(ಆ.20): ಮುಂಬೈ ರಣಜಿ ಕ್ರಿಕೆಟ್ ತಂಡದ ಆಲ್ರೌಂಡರ್ ಆಗಿ, ನಾಯಕನಾಗಿ ಅದ್ಬುತ ಕೊಡುಗೆ ನೀಡಿದ ಕ್ರಿಕೆಟಿಗ. ಟೀಂ ಇಂಡಿಯಾ ಪರ ಏಕದಿನ ಪಂದ್ಯ ಆಡಿದ ಮುಂಬೈ ಮೂಲದ ಅಭಿಷೇಕ್ ನಾಯರ್ ಇದೀಗ ಮುಂಬೈ ತಂಡ ತೊರೆದು ನೂತನ ಪುದುಚೇರಿ ತಂಡ ಸೇರಿಕೊಂಡಿದ್ದಾರೆ. 

ಈ ಬಾರಿಯ ರಣಜಿ ಟೂರ್ನಿಗೆ ಪುದುಚೇರಿ ತಂಡ ಹೊಸದಾಗಿ ಸೇರ್ಪಡೆಗೊಂಡಿದೆ. ಮುಂಬೈ ತಂಡದಲ್ಲಿ ಅವಕಾಶದ ಕೊರತೆಯಿಂದ ಅಭಿಷೇಕ್ ನಾಯರ್ ಇದೀಗ ಪುದುಚೇರಿ  ತಂಡದ ಪರ ಕಣಕ್ಕಿಳಿಯಲಿದ್ದಾರೆ.

ವಿಶೇಷ ಅಂದರೆ ಅಭಿಷೇಕ್ ನಾಯರ್ 99 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದ್ದಾರೆ. ಇದೀಗ ಪುದುಚೇರಿ ಪರ ಕಣಕ್ಕಿಳಿಯಲಿರುವ ಅಭಿಷೇಕ್ ನಾಯರ್ 100ನೇ ಪಂದ್ಯ ಆಡುತ್ತಿರುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಮುಂಬೈ ತೊರೆದು ಪುದುಚೇರಿ ತಂಡ ಸೇರಿಕೊಳ್ಳುತ್ತಿರುವ ಅಭಿಷೇಕ್ ನಾಯರ್ ಟ್ವಿಟರ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂಬೈ ತಂಡದಲ್ಲಿ ಸಹಕರಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

 

MUMBAI >>>PUDUCHERRY...thank you everyone who has helped me and been part of this wonderful 20 years of khadoos cricket,right from the u14s to 99firstclass games..it's been an honour🙏.it's an emotional moment for me but I leave a happy man.the lion shall always roar in my 💓.

— abhishek nayar (@abhisheknayar1)

 

ಅಭಿಷೇಕ್ ನಾಯರ್ ಟ್ವೀಟ್‌ಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.  ನೂತನ ತಂಡ ಸೇರಿಕೊಳ್ಳುತ್ತಿರುವ ನಾಯರ್‌ಗೆ ಶುಭಾಶಯ ಹೇಳಿದ್ದಾರೆ.


 

One of Mumbais stalwarts is biding adieu to Mumbai cricket. I have known this guy for a long time and I can honestly say he’s the most selfless man I have met. Giving back to the game/players is his forte. Good luck with all the exciting things ahead buddy pic.twitter.com/v39LdjlSsH

— Rohit Sharma (@ImRo45)
click me!