IPL 2024 ಮತ್ತೆ ಸಿಡಿದ ಫ್ರೇಸರ್‌, ಮುಂಬೈಗೆ ಕಠಿಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

By Naveen Kodase  |  First Published Apr 27, 2024, 5:25 PM IST

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫ್ರೇಸರ್‌ ಮೆಗಾರ್ಕ್ ಹಾಗು ಅಭಿಷೇಕ್ ಪೋರೆಲ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಪರಿಣಾಮ 2.4 ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 50 ರನ್ ಕಲೆಹಾಕಿತು.


ನವದೆಹಲಿ(ಏ.27): ಸದ್ಯ ಆಸ್ಟ್ರೇಲಿಯಾ ಮೂಲದ ಯುವ ಸ್ಪೋಟಕ ಬ್ಯಾಟರ್ ಫ್ರೇಸರ್‌ ಮೆಗಾರ್ಕ್‌ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದ್ದು, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಬಲಿಷ್ಠ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಎದುರು ಫ್ರೇಸರ್‌ ತಮ್ಮ ಬ್ಯಾಟಿಂಗ್ ಪರಾಕ್ರಮ ಮೆರೆದಿದ್ದಾರೆ. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಬಾರಿಸಿದ್ದು, ಮುಂಬೈ ಇಂಡಿಯನ್ಸ್‌ಗೆ ಕಠಿಣ ಗುರಿ ನೀಡಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫ್ರೇಸರ್‌ ಮೆಗಾರ್ಕ್ ಹಾಗು ಅಭಿಷೇಕ್ ಪೋರೆಲ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಪರಿಣಾಮ 2.4 ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 50 ರನ್ ಕಲೆಹಾಕಿತು. ಜೇಕ್‌ ಫ್ರೇಸರ್‌ ಮೆಗಾರ್ಕ್ ಕೇವಲ 15 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಮೊದಲ 6 ಓವರ್‌ ಪವರ್‌ಪ್ಲೇನಲ್ಲಿ ಡೆಲ್ಲಿ 92 ರನ್ ಕಲೆಹಾಕಿತ್ತು. ಈ ಪೈಕಿ ಫ್ರೇಸರ್‌ ಬಾರಿಸಿದ್ದು 24 ಎಸೆತಗಳಲ್ಲಿ 78 ರನ್.

Innings Break!

Batting carnage from help them put up a target 🎯 of 2️⃣5️⃣8️⃣

An interesting reply starts 🔜

Scorecard ▶️ https://t.co/BnZTzctcaH | pic.twitter.com/gUu9arcAOc

— IndianPremierLeague (@IPL)

Tap to resize

Latest Videos

ಫ್ರೇಸರ್‌ ಹಾಗೂ ಅಭಿಷೇಕ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ ಬರೋಬ್ಬರಿ 114 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ ಯಶಸ್ವಿಯಾದರು. ಫ್ರೇಸರ್‌ ಕೇವಲ 27 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 84 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಅಭಿಷೇಕ್ ಪೋರೆಲ್ 36 ರನ್ ಬಾರಿಸಿ ನಬಿಗೆ ವಿಕೆಟ್ ಒಪ್ಪಿಸಿದರು.

"ಇವರನ್ನು ಖರೀದಿಸದ ಹೊರತು ಆರ್‌ಸಿಬಿ ಕಪ್ ಗೆಲ್ಲಲ್ಲ": ಬೆಂಗಳೂರು ತಂಡದ ಬಗ್ಗೆ ಅಚ್ಚರಿ ಮಾತಾಡಿದ ಭಜ್ಜಿ

ಇನ್ನು ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ರಿಷಭ್ ಪಂತ್ ಹಾಗೂ ಶಾಯ್ ಹೋಪ್ 24 ಎಸೆತಗಳಲ್ಲಿ 53 ರನ್‌ಗಳ ಜತೆಯಾಟವಾಡಿದರು. ಶಾಯ್ ಹೋಪ್ 17 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 41 ರನ್ ಬಾರಿಸಿ ಲೂಕ್ ವುಡ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 4ನೇ ವಿಕೆಟ್‌ಗೆ ಪಂತ್ ಹಾಗೂ ಸ್ಟಬ್ಸ್ 27 ಎಸೆತಗಳಲ್ಲಿ 55 ರನ್‌ಗಳ ಜತೆಯಾಟವಾಡಿದರು. ಪಂತ್ 29 ರನ್ ಸಿಡಿಸಿ 7ನೇ ಬಾರಿಗೆ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಟ್ರಿಸ್ಟನ್ ಸ್ಟಬ್ಸ್ 18ನೇ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 26 ರನ್ ಚಚ್ಚಿದರು. ಅಂತಿಮವಾಗಿ ಸ್ಟಬ್ಸ್ ಕೇವಲ 25 ಎಸೆತಗಳನ್ನು ಎದುರಿಸಿ ಅಜೇಯ 48 ರನ್ ಸಿಡಿಸಿದರು. 
 

click me!