ಟಿ20 ವಿಶ್ವಕಪ್ 2024, ಸೆಮಿಫೈನಲ್‌ಗೇರುವ 4 ತಂಡದ ಭವಿಷ್ಯ ನುಡಿದ ಯುವರಾಜ್!

By Suvarna News  |  First Published Apr 27, 2024, 7:43 PM IST

ಟಿ20 ವಿಶ್ವಕಪ್ ಟೂರ್ನಿ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಟಿ20 ವಿಶ್ವಕಪ್ ಜ್ವರ ಶುರುವಾಗಲಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳು ಯಾವುದು? ಟೀಂ ಇಂಡಿಯಾಗಿದೆಯಾ ಅವಕಾಶ? ಭವಿಷ್ಯ ನುಡಿದ ಯುವರಾಜ್ ಸಿಂಗ್
 


ಮುಂಬೈ(ಏ.27) ಐಪಿಎಲ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಪ್ಲೇ ಆಫ್ ಲೆಕ್ಕಾಚಾರಗಳು ಜೋರಾಗುತ್ತಿದೆ. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಟೂರ್ನಿ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಜೂನ್ 1ರಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಈ ಬಾರಿ ಟ್ರೋಫಿ ಗೆಲ್ಲುವ ತಂಡಗಳು ಯಾವುದು ಅನ್ನೋ ಕುತೂಹಲ ಮನೆ ಮಾಡಿದೆ. ಇದರ ನಡುವೆ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳು ಯಾವುದು? ಹಲವರು ಭಾರಿ ಲೆಕ್ಕಾಚಾರ, ಚರ್ಚೆಯಲ್ಲಿ ತೊಡಗಿದ್ದಾರೆ. ಟಿ20 ಚಾಂಪಿಯನ್ ಯುವರಾಜ್ ಸಿಂಗ್ ಇದೀಗ ಈ ಬಾರಿಯ ಸೆಮಿಫೈನಲ್ ಪ್ರವೇಶಿಸುವ ನಾಲ್ಕು ತಂಡಗಳ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ ಎಂದಿದ್ದಾರೆ.

ಐಸಿಸಿ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ನಡೆದ ಪ್ರಶ್ನೋತ್ತರದಲ್ಲಿ ಯುವರಾಜ್ ಸಿಂಗ್ ಸೆಮಿಫೈನಲ್ ಪ್ರವೇಶಿರುವ ನಾಲ್ಕು ತಂಡಗಳ ಹೆಸರು ಸೂಚಿಸಿದ್ದಾರೆ. 

Latest Videos

undefined

ಸಚ್ಚಿನ್‌, ವಿರಾಟ್, ಧೋನಿ ಇವರಲ್ಲಾರು ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ?

ಯುವಿ ಭವಿಷ್ಯ; ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ ನಾಲ್ಕು ತಂಡ
ಭಾರತ
ಇಂಗ್ಲೆಂಡ್
ಆಸ್ಟ್ರೇಲಿಯಾ
ಪಾಕಿಸ್ತಾನ

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ನಾಲ್ಕು ತಂಡಗಳು  ಟಿ20 ಸೇರಿದಂತೆ ಇತರ ಮಾದಿರಿಯಲ್ಲೂ ಬಲಿಷ್ಠವಾಗಿದೆ. ಹೀಗಾಗಿ ಈ ಬಾರಿಯ ಟೂರ್ನಿ ಮತ್ತಷ್ಟು ರೋಚಕವಾಗಲಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅಚ್ಚರಿಗಳು ಸಂಭವಿಸಲಿದೆ. 2007ರ ಬಳಿಕ ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ಸು ಸಿಕ್ಕಿಲ್ಲ. ಸೆಮಿಫೈನಲ್ ಪ್ರವೇಶ, ಫೈನಲ್ ಪ್ರವೇಶಿಸಿದರೂ ಟ್ರೋಫಿ ಗೆದ್ದಿಲ್ಲ. ಇಷ್ಟೇ ಅಲ್ಲ 2013ರ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತ, ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿತ್ತು. ಇದೀಗ ಟೀಂ ಇಂಡಿಯಾದ ಚಿತ್ತ ಟಿ20 ವಿಶ್ವಕಪ್ ಟೂರ್ನಿ ಮೇಲೆ ನೆಟ್ಟಿದೆ. ಈ ಮೂಲಕ ಟ್ರೋಫಿ ಬರ ನೀಗಿಸಿಕೊಳ್ಳಲು ತಯಾರಿ ನಡೆಸುತ್ತಿದೆ. 

"ಇವರನ್ನು ಖರೀದಿಸದ ಹೊರತು ಆರ್‌ಸಿಬಿ ಕಪ್ ಗೆಲ್ಲಲ್ಲ": ಬೆಂಗಳೂರು ತಂಡದ ಬಗ್ಗೆ ಅಚ್ಚರಿ ಮಾತಾಡಿದ ಭಜ್ಜಿ

2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯವಹಿಸಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಕಿಯಾಗುತ್ತಿದೆ. ಈ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

click me!