ಬಿರಿಯಾನಿ ಪ್ರಿಯ ಕೊಹ್ಲಿ ಇದೀಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇಕೆ?

By Web DeskFirst Published Oct 8, 2018, 9:32 AM IST
Highlights

ಕಳೆದ 4 ತಿಂಗಳಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಂಸಾಹಾರ ತ್ಯಜಿಸಿದ್ದಾರೆ.   ಅಷ್ಟಕ್ಕೂ ಬಿರಿಯಾನಿ ಇಷ್ಟಪಡೋ ವಿರಾಟ್ ಕೊಹ್ಲಿ ಧೀಡಿರ್ ಮಾಂಸಾಹಾರ ತ್ಯಜಿಸಿದ್ದೇಕೆ? ಇಲ್ಲಿದೆ.

ನವದೆಹಲಿ: ‘ಗೋ ವೆಜನ್’ ಎಂಬ ಆಂದೋಲನ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸುತ್ತಿದೆ. ಹೌದು ಫಿಟ್ನೆಸ್ ಮಂತ್ರ ಪಠಿಸುವ ಕಾರಣದಿಂದಾಗಿ ಮಾಡೆಲ್‌ಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು ಗೋ ವೆಜಿಟೆರಿಯನ್ ಆಂದೋಲನದಲ್ಲಿ ಸಕ್ರಿಯರಾಗುತ್ತಿದ್ದಾರೆ. 

ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಿಗಳಾಗುವತ್ತ ಕ್ರೀಡಾಪಟುಗಳು ಮುಂದಾಗುತ್ತಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಗೋ ವೆಜನ್ ಆಂದೋಲನಲ್ಲಿ ತೊಡಗಿಸಿಕೊಂಡಿದ್ದಾರೆ. ಬಿರಿಯಾನಿ ಅಂದರೆ ಕೊಹ್ಲಿಗೆ ಪಂಚಪ್ರಾಣ, ಆದರೂ ಫಿಟ್ನೆಸ್‌ಗಾಗಿ ಸಸ್ಯಾಹಾರಿಯಾಗಿ ಮಾರ್ಪಡುವ ನಿರ್ಧಾರ ಕೈಗೊಂಡಿದ್ದಾರೆ. 

IPL 2021: ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡಿದ್ರೆ ಆರ್‌ಸಿಬಿಗೆ ಲಾಭ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಸಸ್ಯಹಾರದ ಮೊರೆ ಹೋಗಿದ್ದಾರೆ. ಸಸ್ಯಾಹಾರ ಸೇವಿಸುತ್ತಿರುವುದರಿಂದ ತಮ್ಮ ಫಿಟ್ನೆಸ್ ಹಾಗೂ ಕ್ರಿಕೆಟ್ ವೃತ್ತಿ ಜೀವನಕ್ಕೆ ಇದು ಸಹಕಾರಿಯಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹೆಚ್ಚು ಪ್ರೋಟಿನ್‌ಯುಕ್ತ ಆಹಾರವನ್ನು ವಿರಾಟ್ ಕೊಹ್ಲಿ ಸೇವಿಸುತ್ತಿದ್ದು, ತರಕಾರಿ ಮತ್ತು ಸೋಯಾಬೀನನ್ನು ಹೆಚ್ಚಾಗಿ ಬಳಸುತ್ತಿರುವುದಾಗಿ ಹೇಳಿದ್ದಾರೆ. ಸಸ್ಯಹಾರಿ ಆದಾಗಿನಿಂದ ಕೊಹ್ಲಿಯ ವರ್ತನೆಯಲ್ಲೂ ಮಹತ್ವದ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.  ಕೊಹ್ಲಿ ಅವರೊಂದಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ಸಸ್ಯಾಹಾರಿ ಯಾಗುತ್ತಿರುವುದು ನಿಜಕ್ಕೂ ವಿಶೇಷ ಎನಿಸಿದೆ. 

click me!