ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ ಕೊರೋನಾ ಪಾಸಿಟಿವ್‌

By Suvarna News  |  First Published Apr 18, 2021, 10:20 AM IST

ಕೇಂದ್ರ ಕ್ರೀಡಾಸಚಿವ ಕಿರಣ್‌ ರಿಜಿಜು ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸ್ವತಃ ರಿಜಿಜು ಟ್ವೀಟ್‌ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಏ.18): ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಶನಿವಾರ ಈ ಕುರಿತು ಟ್ವೀಟ್‌ ಮಾಡಿರುವ 49 ವರ್ಷದ ಕಿರಣ್ ರಿಜಿಜು, ನನ್ನ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೆನೆ. ನಾನು ದೈಹಿಕವಾಗಿ ಫಿಟ್‌ ಆಗಿದ್ದೇನೆ. ನನ್ನ ಜೊತೆ ಸಂರ್ಪಕಕ್ಕೆ ಬಂದಿರುವವರು ಕೂಡಲೇ ಕ್ವಾರಂಟೈನ್‌ ಆಗಿ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಕೋರಿದ್ದಾರೆ. 

After getting repeated test for Covid-19, today my report has come out positive. I'm taking the advice of the Doctors. I request all those who have come in my contact recently to be observant, exercise self-quarantine and get themselves tested. I'm physically fit and fine.

— Kiren Rijiju (@KirenRijiju)

Latest Videos

undefined

ರಿಜಿಜು ಶುಕ್ರವಾರವಷ್ಟೇ ಉತ್ತರ್‌ಖಂಡ್‌ನ ತೆಹ್ರಿಯಲ್ಲಿ ವಾಟರ್‌ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್‌ ಇನ್ಸ್‌ಟಿಟ್ಯೂಟ್‌ಗೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಸೋಂಕಿನಿಂದ ಗುಣಮುಖರಾಗಿದ್ದ ಉತ್ತರ್‌ಖಂಡ್‌ನ ಸಿಎಂ ತಿರತ್‌ ಸಿಂಗ್‌ ರಾವತ್‌ ಪಾಲ್ಗೊಂಡಿದ್ದರು.

ಕೊರೋನಾ ಎದುರಿಸಲು 10 ಹಾದಿ: ಡಾ. ಬಿಎಂ ಹೆಗ್ಡೆ ಕೊಟ್ಟ ಸಲಹೆಗಳಿವು

ದೇಶದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದ್ದು, ಶನಿವಾರ(ಏ.17)ದಂದು ಒಂದೇ ದಿನ ದಾಖಲೆಯ 2.34 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 1,341 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ದಾಖಲೆಯ 17480 ಕೋವಿಡ್ 19 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ.

click me!