
ಬೆಂಗಳೂರು (ನ.18): ಹೊಸ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಳ್ವಿ ನೇಮಕವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೋಮವಾರ ಸಂಜೆ ಖಚಿತಪಡಿಸಿದೆ. ಪ್ರಸ್ತುತ ಮುಂಬೈನ ಮುಖ್ಯ ಕೋಚ್ ಆಗಿರುವ ಓಂಕಾರ್, ಮುಂಬರುವ ಐಪಿಎಲ್ 2025 ರ ಸೀಸನ್‌ಗೆ ಮುಂಚಿತವಾಗಿ ಫ್ರಾಂಚೈಸಿಗೆ ಸೇರಿಕೊಳ್ಳಲಿದ್ದಾರೆ. 46 ವರ್ಷದ ಅವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಮುಂಬೈ ಕೋಚ್ ಆಗಿ ಸಾಲ್ವಿ ಅವರ ಅಧಿಕಾರಾವಧಿಯು ಮಾರ್ಚ್ 2025 ರಲ್ಲಿ ಕೊನೆಗೊಳ್ಳಲಿದೆ. ಈ ಬಗ್ಗೆ ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. 'ಪ್ರಕಟಣೆ: ಹಾಲಿ ಮುಂಬೈ ರಣಜಿ ಟೀಮ್ ಕೋಚ್ ಆಗಿರುವ ಓಂಕಾರ್ ಸಾಳ್ವಿ ಅವರನ್ನು ಆರ್‌ಸಿಬಿಯ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಕಳೆದ ಎಂಟು ತಿಂಗಳಲ್ಲಿ ಅವರು ರಣಜಿ ಟ್ರೋಫಿ, ಇರಾನಿ ಟ್ರೋಫಿ ಹಾಗೂ ಐಪಿಎಲ್ ಟ್ರೋಫಿ ಜಯಿಸಿದ ಟೀಮ್‌ಗೆ ಕೋಚಿಂಗ್ ನೀಡಿದ್ದಾರೆ. ಐಪಿಎಲ್ 2025ರ ಮುನ್ನ ಅವರು ತಂಡ ಸೇರಿಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಅವರು ದೇಶಿಯ ಕ್ರಿಕೆಟ್ ಋತುವಿನ ಡ್ಯೂಟಿ ಮಾಡಲಿದ್ದಾರೆ' ಎಂದು ತಿಳಿಸಿದೆ.
ಈ ವರ್ಷದ ಆರಂಭದಲ್ಲಿ, RCB ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು 2025 ರ ಋತುವಿಗಾಗಿ ತಮ್ಮ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಿಸಿತ್ತು. ಕಾರ್ತಿಕ್ ಮತ್ತು ಸಾಳ್ವಿ ಈ ಹಿಂದೆ KKR ಗಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ 2025 ರಲ್ಲಿ ಟೈಟಲ್ ಜಿಂಕ್ಸ್ ಅನ್ನು ಮುರಿದು ಎಲ್ಲಾ ರೀತಿಯಲ್ಲಿ ಹೋಗಬೇಕಾದರೆ, ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಫ್ರಾಂಚೈಸಿ ಆಶಿಸುತ್ತದೆ. 2025ರಲ್ಲಿ ಆರ್‌ಸಿಬಿ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಬೇಕಾದಲ್ಲಿ ಇವರಿಬ್ಬರ ಕಾರ್ಯ ಪ್ರಮುಖವಾಗಿ ಇರಲಿದೆ.
ಓಂಕಾರ್ ಸಾಲ್ವಿ ನೇಮಕದ ಬಗ್ಗೆ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, "ಓಂಕಾರ್ ಸಾಳ್ವಿಯನ್ನು ಆರ್‌ಸಿಬಿಯ ಬೌಲಿಂಗ್ ಕೋಚ್ ಆಗಿ ಸ್ವಾಗತಿಸಲು ನಾವು ಸಂತಸಪಡುತ್ತೇವೆ. ಅವರ ಅಪಾರ ಅನುಭವದೊಂದಿಗೆ, ವಿಶೇಷವಾಗಿ ವೇಗದ ಬೌಲರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಕಾರ್ಯ ನೋಡಿದ್ದೇವೆ. ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ಸೂ ಕಂಡಿದ್ದಾರೆ. ಐಪಿಎಲ್ ಗ್ರೇಡ್‌ಗೆ ಅವರು ನಮ್ಮ ಕೋಚಿಂಗ್ ತಂಡಕ್ಕೆ ಫುಲ್ ಫಿಟ್ ಆಗುತ್ತಾರೆ. ಓಂಕಾರ್ ಅವರ ತಾಂತ್ರಿಕ ಪರಿಣತಿ, ಸ್ಥಳೀಯ ಜ್ಞಾನ ಮತ್ತು ನಾಯಕತ್ವವು ನಮಗೆ ದೊಡ್ಡ ಮೌಲ್ಯವನ್ನು ನೀಡುತ್ತದೆ' ಎಂದು ಹೇಳಿದ್ದಾರೆ.
ಸ್ಟಾರ್ಟ್‌ಅಪ್ ಕನಸಿದ್ಯಾ? ಹಾಗಿದ್ರೆ OTT ಅಲ್ಲಿ ನೀವು ಮಿಸ್ ಮಾಡದೇ ಈ ಚಿತ್ರಗಳನ್ನ ನೋಡ್ಲೇಬೇಕು
ಯಾರಿವರು ಓಂಕಾರ್ ಸಾಳ್ವಿ: ಟೀಮ್ ಇಂಡಿಯಾ ಮಾಜಿ ವೇಗಿ ಆವಿಷ್ಕರ್ ಸಾಳ್ವಿ ಸಹೋದರ ಓಂಕಾರ್ ಸಾಳ್ವಿ. 46 ವರ್ಷದ ಓಂಕಾರ್ ಸಾಳ್ವಿ ಅವರನ್ನು ಭಾರತದ ದೇಶೀಯ ಕ್ರಿಕೆಟ್‌ನ ಶ್ರೇಷ್ಠ ಕೋಚ್‌ಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಆರ್‌ಸಿಬಿಗೂ ಮುನ್ನ ಕೆಕೆಆರ್ ತಂಡಕ್ಕೆ ಸಹಾಯಕ ಬೌಲಿಂಗ್ ಕೋಚ್ ಆಗಿ ಅವರು ಕೆಲಸ ಮಾಡಿದ್ದರು. ಕಳೆದ 2-3 ವರ್ಷಗಳಲ್ಲಿ ಓಂಕಾರ್ ಸಾಳ್ವಿ ದೊಡ್ಡ ಯಶಸ್ಸು ಕಂಡಿದ್ದಾರೆ. 2023-24ರ ಸೀಸನ್‌ನಲ್ಲಿ ಮುಂಬೈ ತಂಡವನ್ನು ರಣಜಿ ಚಾಂಪಿಯನ್ ಮಾಡಿದ ಇವರು, ಬಳಿಕ ಇರಾನಿ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು.ಓಂಕಾರ್ ಸಾಳ್ವಿ ಅವರ ವೃತ್ತಿಜೀವನದಲ್ಲಿ ಕೇವಲ 1 ಲಿಸ್ಟ್ ಎ ಪಂದ್ಯವನ್ನು ಆಡಿದ್ದಾರೆ. ರೈಲ್ವೇಸ್‌ಗಾಗಿ ತನ್ನ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ, ಸಾಳ್ವಿ ಮಧ್ಯಪ್ರದೇಶ ವಿರುದ್ಧ ಒಂದು ವಿಕೆಟ್ ಮತ್ತು 36 ರನ್ ನೀಡಿದ್ದರು.
ಬಿಗ್ ಬಾಸ್ ವೇದಿಕೆಯಲ್ಲೇ ಭಾರತ್ ಪೇ ಫೌಂಡರ್ ಅಶ್ನೀರ್ ಗ್ರೋವರ್ ಚಳಿ ಬಿಡಿಸಿದ ಸಲ್ಮಾನ್ ಖಾನ್
ಮೇ 2023 ರಲ್ಲಿ ಸಾಳ್ವಿ ಅವರನ್ನು ಹಿರಿಯ ಪುರುಷರ ತಂಡಕ್ಕೆ ಮುಂಬೈನ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಮುಂಬೈನಲ್ಲಿ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.