ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಡೇವಿಸ್ ಕಪ್‌ನಲ್ಲಿ ರೋಹನ್ ಬೋಪಣ್ಣ ಭಾಗಿ
ಮೊರಾಕ್ಕೊ ವಿರುದ್ದ ಕೊನೆಯ ಡೇವಿಸ್ ಕಪ್ ಪಂದ್ಯ ಆಡಲಿರುವ ಟೆನಿಸಿಗ
ವಿದಾಯದ ಪಂದ್ಯವನ್ನು ತವರಿನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ ರೋಹನ್ ಬೋಪಣ್ಣ
ನವದೆಹಲಿ(ಜೂ.22): ಭಾರತದ ತಾರಾ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಸೆಪ್ಟೆಂಬರ್‌ನಲ್ಲಿ ಡೇವಿಸ್ ಕಪ್ ವೃತ್ತಿಬದುಕಿಗೆ ವಿದಾಯ ಹೇಳಲಿದ್ದಾರೆ. ಇದನ್ನು ಸ್ವತಃ 43 ವರ್ಷದ ಬೋಪಣ್ಣ ಬಹಿರಂಗಪಡಿಸಿದ್ದು, ವಿದಾಯದ ಪಂದ್ಯವನ್ನು ಬೆಂಗಳೂರಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಆದರೆ ಮೊರಾಕ್ಕೊ ವಿರುದ್ಧ ವಿಶ್ವ ಗುಂಪು-2ರ ಪಂದ್ಯಕ್ಕೆ ಉತ್ತರ ಪ್ರದೇಶ ಆತಿಥ್ಯ ವಹಿಸಲಿದೆ. ಪಂದ್ಯ ಉತ್ತರ ಪ್ರದೇಶದಲ್ಲೇ ನಡೆದರೆ ಬೋಪಣ್ಣಗೆ ಬೆಂಗಳೂರಿನಲ್ಲಿ ಪಂದ್ಯ ಆಡುವ ಅವಕಾಶವಿಲ್ಲ. ಆದರೆ ಈ ಪಂದ್ಯ ಬೆಂಗ್ಳೂರಲ್ಲಿ ನಡೆಯಬೇಕೆಂದು ಬಯಸಿರುವ ಬೋಪಣ್ಣ, ಪಂದ್ಯ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಬೋಪಣ್ಣ 2002ರಲ್ಲಿ ಭಾರತ ಪರ ಮೊದಲ ಡೇವಿಡ್ ಪಂದ್ಯವಾಡಿದ್ದು, ಈವರೆಗೆ 32 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
undefined
"ನಾನು ಸೆಪ್ಟೆಂಬರ್‌ನಲ್ಲಿ ನನ್ನ ಪಾಲಿನ ಕೊನೆಯ ಡೇವಿಸ್ ಕಪ್ ಪಂದ್ಯವನ್ನು ಆಡಬೇಕು ಎಂದುಕೊಂಡಿದ್ದೇನೆ" ಎಂದು ಲಂಡನ್‌ನಲ್ಲಿರುವ ರೋಹನ್ ಬೋಪಣ್ಣ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು 2002ರಿಂದಲೂ ತಂಡದ ಜತೆಗಿದ್ದೇನೆ. ನಾನು ನನ್ನ ಕೊನೆಯ ಪಂದ್ಯವನ್ನು ನನ್ನ ತವರಿನಲ್ಲಿ ಆಡಬೇಕು ಎಂದು ಬಯಸಿದ್ದೇನೆ. ನಾನು ನಮ್ಮ ಹುಡುಗರ (ಭಾರತೀಯ ಆಟಗಾರರ) ಜತೆ ಮಾತನಾಡಿದ್ದೇನೆ. ಅವರೆಲ್ಲರೂ ಬೆಂಗಳೂರಿನಲ್ಲಿ ಆಡುವ ಕುರಿತಂತೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೂಡಾ ಡೇವಿಡ್ ಕಪ್ ಆಯೋಜನೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಹೀಗಾಗಿ ಭಾರತೀಯ ಟೆನಿಸ್ ಫೆಡರೇಷನ್ ಡೇವಿಸ್ ಕಪ್ ಟೂರ್ನಿಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
90ನೇ ಗೋಲು: ಸಕ್ರಿಯ ಫುಟ್ಬಾಲಿಗರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆಟ್ರಿ!
ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ನಾಲ್ವರು ಟೆನಿಸ್ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ರೋಹನ್ ಬೋಪಣ್ಣ, "ನಾನು ಕಳೆದ 20 ವರ್ಷಗಳಿಂದ ಟೆನಿಸ್ ಆಡುತ್ತಾ ಬಂದಿದ್ದೇನೆ. ಪ್ರತಿಯೊಬ್ಬರು ಬಂದು ನನ್ನ ಕೊನೆಯ ಪಂದ್ಯವನ್ನು ವೀಕ್ಷಿಸಲಿ ಎಂದು ಬಯಸುತ್ತೇನೆ" ಎಂದು ಬೋಪಣ್ಣ ಹೇಳಿದ್ದಾರೆ.
ರೋಹನ್ ಬೋಪಣ್ಣ ಮೊರಾಕ್ಕೊ ವಿರುದ್ದ ಕಣಕ್ಕಿಳಿಯುವ ಮೂಲಕ ಡೇವಿಸ್ ಕಪ್ ಇತಿಹಾಸದಲ್ಲಿ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್ ಅವರನ್ನು ಹಿಂದಿಕ್ಕಲಿದ್ದಾರೆ. ರೋಹನ್ ಬೋಪಣ್ಣ ಇದುವರೆಗೂ 32 ಡೇವಿಸ್ ಕಪ್ ಪಂದ್ಯಗಳನ್ನಾಡಿದ್ದು, 12 ಸಿಂಗಲ್ಸ್ ಹಾಗೂ 10 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ತೈಪೆ ಓಪನ್: ಪ್ರಣಯ್, ಕಶ್ಯಪ್ ಪ್ರಿ ಕ್ವಾರ್ಟರ್‌ಗೆ
ತೈಪೆ: ಭಾರತದ ಶಟ್ಲರ್‌ಗಳಾದ ಎಚ್.ಎಸ್.ಪ್ರಣಯ್ ಹಾಗೂ ಪಾರುಪಲ್ಲಿ ಕಶ್ಯಪ್ ಇಲ್ಲಿ ಬುಧವಾರ ಆರಂಭಗೊಂಡ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ವಿಶ್ವ ನಂ.9 ಪ್ರಣಯ್ ಸ್ಥಳೀಯ ಶಟ್ಲರ್ ಲಿನ್ ಯು ವಿರುದ್ಧ ಕೇವಲ 26 ನಿಮಿಷದಲ್ಲಿ 21-11, 21-10ರಲ್ಲಿ ಗೆದ್ದರೆ, ಕಶ್ಯಪ್ ಜರ್ಮನಿಯ ಸ್ಯಾಮುಯಲ್ ಹಿಯೊ ವಿರುದ್ಧ 21-15, 21-16ರಲ್ಲಿ ಜಯಿಸಿದರು.
ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಗೆ ಶ್ಯಾಮ ಶಾ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟರ್ ಶ್ಯಾಮ ಶಾ ಅವರು ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆ ಹೊರಡಿಸಿದ್ದಾರೆ. 51 ವರ್ಷದ ಶ್ಯಾಮ ಭಾರತ ಪರ 1995-97ರ ನಡುವೆ 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದಾರೆ. ಬಂಗಾಳ ಹಾಗೂ ರೈಲ್ವೇಸ್ ತಂಡಗಳನ್ನೂ ಪ್ರತಿನಿಧಿಸಿರುವ ಅವರು ಸಮಿತಿಯಲ್ಲಿ ಮಿಥು ಮುಖರ್ಜಿ ಸ್ಥಾನವನ್ನು ತುಂಬಲಿದ್ದಾರೆ. ಇದೇ ವೇಳೆ ಕಿರಿಯರ ಆಯ್ಕೆ ಸಮಿತಿಗೆ ರಾಜ್ಯದ ತಿಲಕ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾಗಿ ಬಿಸಿಸಿಐ ತಿಳಿಸಿದೆ. ಇತ್ತೀಚೆಷ್ಟೆಎಸ್.ಶರತ್ ಅವರಿಂದ ತೆರವುಗೊಂಡಿದ್ದ ಸಮಿತಿಯ ಸ್ಥಾನಕ್ಕೆ ತಿಲಕ್ರನ್ನು ನೇಮಿಸಲಾಗಿತ್ತು.