ಒಂದೂವರೆ ದಿನಕ್ಕೆ ಮುಕ್ತಾಯಗೊಂಡಿತು ಜಾರ್ಖಂಡ್-ಹರಿಯಾಣ ರಣಜಿ!

By Web DeskFirst Published Nov 13, 2018, 6:10 PM IST
Highlights

4 ದಿನದ ರಣಜಿ ಪಂದ್ಯ ಕೇವಲ ಒಂದೂವರೆ ದಿನಕ್ಕೆ ಅಂತ್ಯಗೊಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೆಲುವಿನ ಟಾರ್ಗೆಟ್ ಕೇವಲ 11 ರನ್. ಇಂತಹ ಅಪರೂಪದ ಪಂದ್ಯಕ್ಕೆ ಜಾರ್ಖಂಡ್ ಹಾಗೂ ಹರಿಯಾಣ ಸಾಕ್ಷಿಯಾಗಿದೆ.

ರೋಹ್ಟಕ್(ನ.13): ಜಾರ್ಖಂಡ್ ಹಾಗೂ ಹರಿಯಾಣ ನಡುವಿನ ರಣಜಿ ಪಂದ್ಯ ಕೇವಲ ಒಂದೂವರೆ ದಿನಕ್ಕೆ ಮುಕ್ತಾಯಗೊಂಡಿದೆ. ಎರಡೂ ತಂಡಗಳು ಒಟ್ಟು ಆಡಿದ್ದು 117.5 ಓವರ್. ಒಟ್ಟು ಸ್ಕೋರ್ 308 ರನ್. ದ್ವಿತೀಯ ಇನ್ನಿಂಗ್ಸ್‌‍ನಲ್ಲಿ ಜಾರ್ಖಂಡ್ ತಂಡಕ್ಕೆ ಗೆಲುವಿನ ಟಾರ್ಗೆಟ್ ಕೇವಲ 11 ರನ್. 

ಈ ರೋಚಕ ಪಂದ್ಯದಲ್ಲಿ ಜಾರ್ಖಂಡ್ 9 ವಿಕೆಟ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 81 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಜಾರ್ಖಂಡ್ 143 ರನ್‌ಗೆ ಆಲೌಟ್ ಆಯಿತು. ಹೀಗಾಗಿ 62 ರನ್ ಮುನ್ನಡೆ ಪಡೆದುಕೊಂಡಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹರಿಯಾಣ 72 ರನ್‌ಗೆ ಸರ್ವಪತನ ಕಂಡಿತು. ಹೀಗಾಗಿ ಜಾರ್ಖಂಡ್ ತಂಡಕ್ಕೆ ಕೇವಲ 11 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಗುರಿಯನ್ನ ಜಾರ್ಖಂಡ್ 4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

click me!