ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಕ್ಯಾಂಡಿಡೇಟ್ಸ್ ವಿಜೇತರ ನಡುವೆ ಸೆಣಸಾಟ ನಡೆಯಲಿದೆ. ಕ್ಯಾಂಡಿಡೇಟ್ಸ್‌ನಲ್ಲಿ 17ರ ಗುಕೇಶ್, ವಿಶ್ವದ ಘಟಾನುಘಟಿ ಚೆಸ್ ಪಟುಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.
ಲಾಸೆನ್(ಸ್ವಿಜರ್‌ಲೆಂಡ್): ಕ್ಯಾಂಡಿಡೇಟ್ಸ್ ಟೂರ್ನಿ ವಿಜೇತ ಭಾರತದ ಡಿ.ಗುಕೇಶ್ ಹಾಗೂ ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ತಿಳಿಸಿದೆ. ಆದರೆ ಸ್ಥಳ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ವಿಶ್ವ ಚಾಂಪಿಯನ್ ಹಾಗೂ ಕ್ಯಾಂಡಿಡೇಟ್ಸ್ ವಿಜೇತರ ನಡುವೆ ಸೆಣಸಾಟ ನಡೆಯಲಿದೆ. ಕ್ಯಾಂಡಿಡೇಟ್ಸ್‌ನಲ್ಲಿ 17ರ ಗುಕೇಶ್, ವಿಶ್ವದ ಘಟಾನುಘಟಿ ಚೆಸ್ ಪಟುಗಳನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.
undefined
ಕೊಡವ ಹಾಕಿ: ಪುದಿಯೋಕ್ಕಡ, ನೆರವಂಡ, ಕುಪ್ಪಂಡಕ್ಕೆ ಗೆಲುವು
ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯಗಳಲ್ಲಿ ಬಿರುಸಿನ ಪೈಪೋಟಿ ಕಂಡುಬಂದವು.
ಮುಕ್ಕಾಟಿರ(ಬೋಂದ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ಮತ್ತು ಕಲಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ ಕುಪ್ಪಂಡ (ಕೈಕೇರಿ) ತಂಡವು ಜಯ ಸಾಧಿಸಿತು.
ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಫಿಕ್ಸಿಂಗ್ ಕರಿನೆರಳು: ತನಿಖೆ ಆರಂಭ!
ಉಳಿದಂತೆ ನೆಲ್ಲ ಮಕ್ಕಡ ತಂಡವು ಅಂಜಪರವಂಡ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿದರೆ ಪುದಿಯೋಕ್ಕಡ ಕೂತಂಡ ತಂಡದ ವಿರುದ್ಧ 3-1 ಅಂತರದ ಜಯ ಸಾಧಿಸಿತು.
ಬೆಂಗಳೂರು 10K ರೇಸ್‌ಗೆ ಕ್ಷಣಗಣನೆ: ರೂಟ್ ಮ್ಯಾಪ್ ಬಿಡುಗಡೆ
ಬೆಂಗಳೂರು: ಏ.28ರಂದು ನಡೆಯಲಿರುವ 16ನೇ ಆವೃತ್ತಿಯ ವಿಶ್ವ 10ಕೆ ಬೆಂಗಳೂರು ರೇಸ್‌ನ ರೂಟ್ ಮ್ಯಾಪ್ ಬಿಡುಗಡೆಗೊಳಿಸಲಾಗಿದೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಯೋಜಕರು, ರೇಸ್ ಸಾಗಿ ಬರುವ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ, ಬದಲಿ ಸಂಚಾರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಫೀಲ್ಡ್ ಮಾರ್ಷಲ್ ಮಾಣೆಕ್‌ಶಾ ಪರೇಡ್ ಮೈದಾನದ ಹೊರಗಿನ ಕಬ್ಬನ್ ರಸ್ತೆಯಲ್ಲಿ ರೇಸ್ ಆರಂಭಗೊಳ್ಳಲಿದ್ದು, ಆರ್ಮಿ ಪಬ್ಲಿಕ್ ಸ್ಕೂಲ್ ಬಳಿ ಕೊನೆಗೊಳ್ಳಲಿದೆ.
ರೇಸ್‌ನಲ್ಲಿ 28,000 ಮಂದಿ ಪಾಲ್ಗೊಳ್ಳಲಿದ್ದಾರೆ. ವರ್ಚುವಲ್ ಆಗಿ ಸುಮಾರು 1500 ಮಂದಿ ರೇಸ್‌ನಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇಂದಿನಿಂದ ಅಂಡರ್-20 ಏಷ್ಯನ್ ಅಥ್ಲೆಟಿಕ್ಸ್: ಕರ್ನಾಟಕದ ನಾಲ್ವರ ಸ್ಪರ್ಧೆ
ದುಬೈ: ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬುಧವಾರದಿಂದ ಆರಂಭಗೊಳ್ಳಲಿದ್ದು, ಕರ್ನಾಟಕದ ನಾಲ್ವರು ಸೇರಿ ಭಾರತದ 60 ಮಂದಿ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏ.27ರ ವರೆಗೆ ನಡೆಯಲಿರುವ ಕೂಟದಲ್ಲಿ ರಾಜ್ಯದ ಶ್ರೇಯಾ ರಾಜೇಶ್ 400 ಮೀ. ಹರ್ಡಲ್ಸ್, ಪವನಾ ನಾಗರಾಜ್ ಅವರು ಲಾಂಗ್‌ಜಂಪ್ ಮತ್ತು ಹೆಪ್ಟಥ್ಲಾನ್, ಉನ್ನತಿ ಅಯ್ಯಪ್ಪ 100 ಮೀ. ಹರ್ಡಲ್ಸ್ ಹಾಗೂ ನಿಯೋಲ್ ಕಾರ್ನೆಲಿಯೊ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ.
ಕ್ರಿಕೆಟಿಗ ಸಂದೀಪ್ ಶರ್ಮಾ ಪತ್ನಿ ನಮ್ಮ ಬೆಂಗಳೂರಿನವರು..! ಓದಿದ್ದು ಇದೇ ಕಾಲೇಜ್
2023ರಲ್ಲಿ ಭಾರತ 6 ಚಿನ್ನ ಸೇರಿದಂತೆ 19 ಪದಕ ಗೆದ್ದಿತ್ತು. ಈ ಬಾರಿ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಕೂಟವು ಆಗಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಕೂಟದ ಅರ್ಹತಾ ಟೂರ್ನಿಯಾಗಿದೆ.