ಫಿಫಾ ವಿಶ್ವಕಪ್ ಟೂರ್ನಿ ಗೆದ್ದ ಫ್ರಾನ್ಸ್ ತಂಡ ಇತಿಹಾಸ ರಚಿಸಿದೆ. ಇದೀಗ ಫ್ರಾನ್ಸ್ ತಂಡದ ಸಾಧನೆಗೆ ಪ್ಯಾರಿಸ್ ವಿಶೇಷ ಗೌರವ ಸೂಚಿಸಿದೆ. ಪ್ಯಾರಿಸ್‌ನ ನಾಲ್ಕು ಮೆಟ್ರೋ ನಿಲ್ದಾಣದ ಹೆಸರನ್ನ ಮರುನಾಮಕರಣ ಮಾಡಲಾಗಿದೆ.
ಪ್ಯಾರಿಸ್(ಜು.16): ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ತಂಡವನ್ನ ಮಣಿಸಿ ವಿಶ್ವ ಚಾಂಪಿಯನ್ ಆದ ಫ್ರಾನ್ಸ್ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ಪ್ಯಾರಿಸ್‌ನಲ್ಲಿ ಫ್ರಾನ್ಸ್ ಗೆಲುವಿಗೆ ನಾಲ್ಕು ಮೆಟ್ರೋ ನಿಲ್ದಾಣದ ಹೆಸರನ್ನ ಬದಲಾಯಿಸಲಾಗಿದೆ.
ಪ್ಯಾರಿಸ್‌ನ ವಿಕ್ಟರ್ ಹುಗೋ ನಿಲ್ದಾಣವನ್ನ ನಾಯಕ ಹಾಗೂ ಗೋಲ್ ಕೀಪರ್ ಹೆಸರಿಗೆ ಅನ್ವಯವಾಗುವಂತೆ ಇದೀಗ ವಿಕ್ಟರ್ ಹುಗೋ ಲೊರಿಸ್ ಎಂದು ಬದಲಾಯಿಸಲಾಗಿದೆ. ಇನ್ನು ಬರ್ಸಿ ನಿಲ್ದಾಣವನ್ನ ಬರ್ಸಿಲೆಸ್ ಬ್ಲೂಸ್ ಎಂದು ಮರುನಾಮಕರಣ ಮಾಡಲಾಗಿದೆ. ಅವ್ರೋನ್ ನಿಲ್ದಾಣವನ್ನ ಇದೀಗ ನೌಸ್ ಅವ್ರೋನ್ ಗಾಗ್ನೆ ಎಂದು ಬದಲಾಯಿಸಲಾಗಿದೆ. ಇನ್ನು ಚಾರ್ಲ್ಸ್ ಡೇ ಗೌಲ್ಲೆ ಇಟೊಯಿಲ್ ನಿಲ್ದಾಣವನ್ನ ಆನ್ ಟು ಇಟೊಯಿಲೆಸ್ ಎಂದು ಬದಲಾಯಿಸಲಾಗಿದೆ.
ಫ್ರಾನ್ಸ್ ಫುಟ್ಬಾಲ್ ತಂಡದ ಆಟಗಾರರ ಹೆಸರಿಗೆ ಅನ್ವರ್ಥವಾಗುವಂತೆ ಮೆಟ್ರೋ ನಿಲ್ದಾಣಗಳನ್ನ ಮುರುನಾಮಕರಣ ಮಾಡಲಾಗಿದೆ. ಈ ಮೂಲಕ ಫ್ರಾನ್ಸ್ ತಂಡಕ್ಕೆ ಗೌರವ ಸೂಚಿಸಲಾಗಿದೆ.