ಪಾಕಿಸ್ತಾ​ನ ಸ್ಪಿನ್‌ ದಿಗ್ಗಜ ಅಬ್ದುಲ್‌ ಖಾದಿರ್‌ ನಿಧ​ನ

Published : Sep 07, 2019, 02:11 PM IST
ಪಾಕಿಸ್ತಾ​ನ ಸ್ಪಿನ್‌ ದಿಗ್ಗಜ ಅಬ್ದುಲ್‌ ಖಾದಿರ್‌ ನಿಧ​ನ

ಸಾರಾಂಶ

ಪಾಕಿಸ್ತಾನ ಕಂಡ ದಿಗ್ಗಜ ಸ್ಪಿನ್ನರ್ ಅಬ್ದುಲ್ ಖಾದೀರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಖಾದೀರ್ ನಿಧನಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಲಾಹೋರ್‌[ಸೆ.07]: ಪಾಕಿ​ಸ್ತಾ​ನದ ಲೆಗ್‌ ಸ್ಪಿನ್‌ ಮಾಂತ್ರಿಕ, ದಿಗ್ಗಜ ಕ್ರಿಕೆ​ಟಿಗ ಅಬ್ದುಲ್‌ ಖಾದಿರ್‌ ಶುಕ್ರ​ವಾರ ಹೃದ​ಯಾ​ಘಾತದಿಂದ ನಿಧ​ನ​ರಾ​ದರು. ಅವ​ರಿಗೆ 63 ವರ್ಷ ವಯ​ಸ್ಸಾ​ಗಿತ್ತು. 

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ಪಾಕ್‌ ಪರ 67 ಟೆಸ್ಟ್‌ ಹಾಗೂ 104 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿದ್ದ ಅಬ್ದುಲ್‌, ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 368 ವಿಕೆಟ್‌ಗಳನ್ನು ಕಬ​ಳಿ​ಸಿ​ದ್ದರು. 2009ರಲ್ಲಿ ಖಾದಿರ್‌ ಪಾಕಿ​ಸ್ತಾನ ತಂಡದ ಆಯ್ಕೆಗಾರ​ರಾ​ಗಿ​ದ್ದರು. ಅವರು ಆಯ್ಕೆ ಮಾಡಿದ್ದ ತಂಡ, 2009ರ ಟಿ20 ವಿಶ್ವ​ಕಪ್‌ ಗೆದ್ದಿತ್ತು. 

ಅಬ್ದುಲ್‌ ಖಾದಿರ್‌ ನಿಧನಕ್ಕೆ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆ​ಟಿ​ಗರು ಕಂಬನಿ ಮಿಡಿ​ದಿ​ದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!