ದೇಶದ ಮೊದಲ ಹೈಬ್ರಿಡ್‌ ಕ್ರಿಕೆಟ್ ಪಿಚ್‌ ಅನಾವರಣ!

Published : May 07, 2024, 09:48 AM IST
ದೇಶದ ಮೊದಲ ಹೈಬ್ರಿಡ್‌ ಕ್ರಿಕೆಟ್ ಪಿಚ್‌ ಅನಾವರಣ!

ಸಾರಾಂಶ

ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಇಂಗ್ಲೆಂಡ್‌ನಲ್ಲಿ ಈ ವರ್ಷದಿಂದ 4 ದಿನಗಳ ಕೌಂಟಿ ಪಂದ್ಯಗಳಿಗೂ ಹೈಬ್ರಿಡ್‌ ಪಿಚ್‌ಗಳನ್ನು ಉಪಯೋಗಿಸಲಾಗುತ್ತದೆ.

ಧರ್ಮಶಾಲಾ(ಮೇ.07): ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ ಅನ್ನು ಸೋಮವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು. ನೆದರ್‌ಲೆಂಡ್ಸ್‌ ಮೂಲದ ಎಸ್‌ಐಎಸ್‌ ಸಂಸ್ಥೆಯು ಈ ಪಿಚ್‌ ಅಳವಡಿಕೆ ಮಾಡಿದ್ದು, ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಪಿಚ್‌ ಅನಾವರಣಗೊಳಿಸಿದರು.

‘ಹೈಬ್ರಿಡ್‌ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗಲಿದೆ’ ಎಂದು ಧುಮಾಲ್‌ ಭರವಸೆ ವ್ಯಕ್ತಪಡಿಸಿದರು. ಹೈಬ್ರಿಡ್‌ ಪಿಚ್‌ಗಳು ಈಗಾಗಲೇ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಹಾಗೂ ದಿ ಓವಲ್‌ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.

ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಇಂಗ್ಲೆಂಡ್‌ನಲ್ಲಿ ಈ ವರ್ಷದಿಂದ 4 ದಿನಗಳ ಕೌಂಟಿ ಪಂದ್ಯಗಳಿಗೂ ಹೈಬ್ರಿಡ್‌ ಪಿಚ್‌ಗಳನ್ನು ಉಪಯೋಗಿಸಲಾಗುತ್ತದೆ.

ಏನಿದು ಹೈಬ್ರಿಡ್‌ ಪಿಚ್‌?

ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜೊತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದ್ದು, ಚೆಂಡಿನ ಬೌನ್ಸ್‌ನಲ್ಲಿ ಏರುಪೇರು ಇರುವುದಿಲ್ಲ. ಇನ್ನು ಪಿಚ್‌ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದು. ಇದರಿಂದ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಆಟದ ಗುಣಮಟ್ಟವೂ ಉತ್ತರವಾಗಿಲಿದೆ.

4ನೇ ಟಿ20: ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

ಸೈಲೆಟ್‌: ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ಮಹಿಳಾ ತಂಡ ಗೆಲುವಿನ ಓಟ ಮುಂದುವರಿಸಿದ್ದು, 4ನೇ ಟಿ20 ಪಂದ್ಯದಲ್ಲಿ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 56 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಪಡೆದಿದೆ. ಮಳೆಯಿಂದಾಗಿ ಪಂದ್ಯವನ್ನು ತಲಾ 14 ಓವರ್‌ಗೆ ಕಡಿತಗೊಳಿಸಲಾಯಿತು. ಭಾರತ 6 ವಿಕೆಟ್‌ಗೆ 122 ರನ್‌ ಗಳಿಸಿದರೆ, ಬಾಂಗ್ಲಾ 7 ವಿಕೆಟ್‌ ಕಳೆದುಕೊಂಡು ಕೇವಲ 68 ರನ್‌ ಗಳಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ: ಅಶ್ವಿನ್ ಅಚ್ಚರಿಯ ಹೇಳಿಕೆ