ಚೇತರಿಕೆ ಕಂಡ ಇಂಗ್ಲೆಂಡ್ ತಂಡಕ್ಕೆ ಮತ್ತೆ ಆಘಾತ-7ನೇ ವಿಕೆಟ್ ಪತನ

First Published Jul 12, 2018, 8:24 PM IST
Highlights

ಭಾರತ ವಿರುದ್ಧ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದ ಇಂಗ್ಲೆಂಡ್ ತಂಡ ಮತ್ತೆ ವಿಕೆಟ್ ಕಳೆದುಕೊಂಡಿದೆ. ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ತತ್ತರಿಸಿದ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡಿದೆ.

ನಾಟಿಂಗ್‌ಹ್ಯಾಮ್(ಜು.12): ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದ ಇಂಗ್ಲೆಂಡ್ ಮತ್ತೆ ವಿಕೆಟ್ ಕಳೆದುಕೊಂಡಿದೆ.. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಸಿಡಿಸಿದ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 200 ರನ್ ಗಡಿ ದಾಟಿತು. ಆದರೆ ಕುಲದೀಪ್ ಯಾದವ್ ಸ್ಪಿನ್ ದಾಳಿಗೆ ಇಂಗ್ಲೆಂಡ್ ಉತ್ತರಿಸಲಾಗದೇ ವಿಕೆಟ್ ಕೈಚೆಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ಆದರೆ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್ ಸ್ಪಿನ್ ಮೋಡಿಯಿಂದ ಇಂಗ್ಲೆಂಡ್ ದಿಢೀರ್ 4 ವಿಕೆಟ್ ಕಳೆದುಕೊಂಡಿತ್ತು. 

ಜೇಸನ್ ರಾಯ್ 38,  ಜೋ ರೂಟ್ 3,  ಜಾನಿ ಬೈರಿಸ್ಟೋ 38  ಹಾಗೂ ನಾಯಕ ಇಯಾನ್ ಮಾರ್ಗನ್ 19 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿದರು. ಬಟ್ಲರ್ 53 ರನ್ ಸಿಡಿಸಿ ಔಟಾದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ  ಬೆನ್ ಸ್ಟೋಕ್ಸ್ ಪೆವಿಲಿಯನ್ ಸೇರಿಕೊಂಡರು.

ಡೇವಿಡ್ ವಿಲೆ ಕೇವಲ 1 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕುಲದೀಪ್ ಬರೋಬ್ಬರಿ 6 ವಿಕೆಟ್ ಕಬಳಿಸಿ ದಾಖಲೆ ಬರೆದರು.
 

click me!