RCB ಆಟಗಾರರ ಶೇಕ್ ಹ್ಯಾಂಡ್‌ ಮಾಡದೇ ತೆರಳಿದ ಧೋನಿ..! ಕೊಹ್ಲಿ ನೋಡಿ ಕಲಿಯಿರಿ ಎಂದ ಇಂಗ್ಲೆಂಡ್ ಮಾಜಿ ನಾಯಕ

Published : May 19, 2024, 04:03 PM IST
RCB ಆಟಗಾರರ ಶೇಕ್ ಹ್ಯಾಂಡ್‌ ಮಾಡದೇ ತೆರಳಿದ ಧೋನಿ..! ಕೊಹ್ಲಿ ನೋಡಿ ಕಲಿಯಿರಿ ಎಂದ ಇಂಗ್ಲೆಂಡ್ ಮಾಜಿ ನಾಯಕ

ಸಾರಾಂಶ

ಪಂದ್ಯ ಮುಗಿಯುತ್ತಿದ್ದಂತೆಯೇ ಆರ್‌ಸಿಬಿ ಆಟಗಾರರು ಡ್ರೆಸ್ಸಿಂಗ್ ರೂಂಗೆ ವಾಪಾಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರರು ಶೇಕ್ ಹ್ಯಾಂಡ್ ಮಾಡುವುದು ಸಂಪ್ರದಾಯ. ಆದರೆ ಧೋನಿ, ಸೋಲಿನ ನಿರಾಸೆಯಿಂದ ಆರ್‌ಸಿಬಿ ಆಟಗಾರರ ಕೈಕುಲಕಲು ಹಿಂದೇಟು ಹಾಕಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳ ಅಂತರದಲ್ಲಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇದು ಮಹೇಂದ್ರ ಸಿಂಗ್ ಧೋನಿ ಪಾಲಿನ ಕೊನೆಯ ಐಪಿಎಲ್ ಪಂದ್ಯ ಎನ್ನಲಾಗುತ್ತಿದೆ. ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಜಯಿಸಿರುವ ಧೋನಿ, ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

20ನೇ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲ್ಲಲು ಕೇವಲ 17 ರನ್ ಅಗತ್ಯವಿತ್ತು. ಯಶ್ ದಯಾಳ್ ಎಸೆದ ಮೊದಲ ಎಸೆತವನ್ನೇ ಧೋನಿ 110 ಮೀಟರ್ ದೂರ ಸಿಕ್ಸರ್ ಚಚ್ಚಿದರು. ಆದರೆ ಮರು ಎಸೆತದಲ್ಲೇ ಯಶ್ ದಯಾಳ್, ಧೋನಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಚೆನ್ನೈ 27 ರನ್ ಅಂತರದ ಸೋಲು ಅನುಭವಿಸುವುದರೊಂದಿಗೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತನ್ನ ಅಭಿಯಾನ ಮುಗಿಸಿತು.

ಯಾವ ತಂಡವು ಮಾಡದ ಅಪರೂಪದ IPL ರೆಕಾರ್ಡ್‌ನೊಂದಿಗೆ ಆರ್‌ಸಿಬಿ ಪ್ಲೇ ಆಫ್‌ಗೆ ಲಗ್ಗೆ..! ಏನದು?

ಇನ್ನು ಪಂದ್ಯ ಮುಗಿಯುತ್ತಿದ್ದಂತೆಯೇ ಆರ್‌ಸಿಬಿ ಆಟಗಾರರು ಡ್ರೆಸ್ಸಿಂಗ್ ರೂಂಗೆ ವಾಪಾಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರರು ಶೇಕ್ ಹ್ಯಾಂಡ್ ಮಾಡುವುದು ಸಂಪ್ರದಾಯ. ಆದರೆ ಧೋನಿ, ಸೋಲಿನ ನಿರಾಸೆಯಿಂದ ಆರ್‌ಸಿಬಿ ಆಟಗಾರರ ಕೈಕುಲಕಲು ಹಿಂದೇಟು ಹಾಕಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧೋನಿ ದೈಹಿಕವಾಗಿ ಸಂಪೂರ್ಣ ಫಿಟ್ ಆಗಿಲ್ಲ. ಈ ಕಾರಣಕ್ಕಾಗಿಯೇ ರೆಸ್ಟ್ ಮಾಡುವ ಉದ್ದೇಶದಿಂದ ಆಟಗಾರರಿಗೆ ಶೇಕ್‌ ಹ್ಯಾಂಡ್ ಮಾಡದೇ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲ ನಿಮಿಷಗಳ ಆಟಗಾರರ ಕೈಕುಲುಕಿ ಅಭಿನಂದನೆ ಸಲ್ಲಿಸಬಹುದಿತ್ತು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ

ಇನ್ನು ಧೋನಿಯ ಈ ನಡೆಯ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅಸಮಾಧಾನ ಹೊರಹಾಕಿದ್ದಾರೆ. ಸೋಲನ್ನು ಹೇಗೆ ಗೌರವಯುತವಾಗಿ ಸ್ವೀಕರಿಸಬೇಕು ಎನ್ನುವುದನ್ನು ಧೋನಿ, ವಿರಾಟ್ ಕೊಹ್ಲಿ ನೋಡಿ ಕಲಿಯಬೇಕು. ನಮ್ಮ ಕ್ರೀಡೆಯಲ್ಲಿ ಹ್ಯಾಂಡ್‌ಶೇಕ್‌ಗೆ ತನ್ನದೇ ಆದ ಗೌರವ ಇದೆ. ಇದೇ ಕೆಲಸವನ್ನು ವಿರಾಟ್ ಕೊಹ್ಲಿ ಮಾಡಿದ್ದರೇ ಅವರನ್ನು ಹಠಮಾರಿ ಎನ್ನುತ್ತಿದ್ದರು. ಧೋನಿಯವರೇ ನಾವಿದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ವಾನ್ ಹೇಳಿದ್ದಾರೆ.

ಚೆನ್ನೈ ಎದುರು ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಆನಂದ ಭಾಷ್ಪ ಸುರಿಸಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್

ಇನ್ನು ಧೋನಿಯವರು ಶೇಕ್ ಹ್ಯಾಂಡ್ ಮಾಡಲು ಸಿಗದಿದ್ದಾಗ, ವಿರಾಟ್ ಕೊಹ್ಲಿ, ಸ್ವತಃ ಚೆನ್ನೈ ಡ್ರೆಸ್ಸಿಂಗ್ ರೂಂಗೆ ತೆರಳಿ ಧೋನಿಯನ್ನು ಭೇಟಿ ಮಾಡಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!