ಆಗಸ್ಟ್ 15 ರಿಂದ ಕೆಪಿಎಲ್ ಟಿ20 ಟೂರ್ನಿ ಆರಂಭ

First Published Jul 12, 2018, 5:35 PM IST
Highlights

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಕೆಎಸ್‌ಸಿ ತಯಾರಿ ಆರಂಭಗೊಂಡಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಕೆಪಿಎಲ್ ಟೂರ್ನಿಯಲ್ಲಿ ಈ ಬಾರಿ ಎಷ್ಟು ತಂಡಗಳು ಕಣಕ್ಕಿಳಿಯುತ್ತಿದೆ. ಪಂದ್ಯ ಆಯೋಜನೆಗೊಳ್ಳುತ್ತಿರುವುದೆಲ್ಲಿ? ಇಲ್ಲಿದೆ ವಿವರ.

ಬೆಂಗಳೂರು(ಜು.12): 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಆಗಸ್ಟ್ 15 ರಿಂದ ಆರಂಭಗೊಳ್ಳಲಿದೆ. ಕರ್ನಾಟರ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮಾಜಿ ಅಧ್ಯಕ್ಷ, ದಿವಗಂತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥವಾಗಿ ನಡೆಯುತ್ತಿರುವ  ಕೆಪಿಎಲ್ ಟೂರ್ನಿಗೆ ಕೆಎಸ್‌ಸಿಎ ಸಕಲ ತಯಾರಿ ಆರಂಭಿಸಿದೆ.

ಕಳೆದ ಆವೃತ್ತಿಯಂತೆ ಈ ಬಾರಿಯೂ ಕೂಡ 7 ತಂಡಗಳು ಕಣಕ್ಕಿಳಿಯಲಿವೆ. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ 7ನೇ ಆವೃತ್ತಿ ಕೆಪಿಎಲ್ ಪಂದ್ಯಗಳು ಆಯೋಜನೆಗಳೊಳ್ಳಲಿದೆ. ಈ ಬಾರಿ ಗರಿಷ್ಠ ನಾಲ್ಕು ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಅವಕಾಶವಿದೆ.

ಕರ್ನಾಟಕ ಪ್ರೀಮಿರ್ ಲೀಗ್ ಟೂರ್ನಿಯಲ್ಲಿ ಯಾವುದೇ ಅಹಿತರ ಪ್ರಕಣಗಳು ನಡೆಯದಂತೆ ತಡೆಯಲು ಕೆಎಸ್‌ಸಿಎ ಎಚ್ಚರಿಕೆ ವಹಿಸಿದೆ. ಹೀಗಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಯು) ಮತ್ತಷ್ಟು ಬಲಪಡಿಸಿದೆ.

ಕೆಪಿಎಲ್ ಆರಂಭ: ಆಗಸ್ಟ್ 15
ಸ್ಥಳ: ಬೆಂಗಳೂರು, ಮೈಸೂರು,ಹುಬ್ಬಳ್ಳಿ

ತಂಡ: ಕಲ್ಯಾಣಿ ಬ್ಲಾಸ್ಟರ್ಸ್ ಬೆಂಗಳೂರು, ನಮ್ಮ ಶಿವಮೊಗ್ಗ, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್

 

click me!