ಕೇರಳ ಸಿಎಂ ಮನಸ್ಸು ತಟ್ಟಿತು ವಿರಾಟ್ ಕೊಹ್ಲಿ ಮಾತು!

By Web DeskFirst Published Aug 22, 2018, 11:22 PM IST
Highlights

ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯ ಗೆಲುವನ್ನ ಟೀಂ ಇಂಡಿಯಾ ಕೇರಳ ಸಂತ್ರಸ್ತರಿಗೆ ಅರ್ಪಿಸಿದೆ. ಕೊಹ್ಲಿ ಗೆಲುವನ್ನ ಕೇರಳಾಗೆ ಅರ್ಪಿಸುತ್ತಿದ್ದಂತೆ, ಕೇರಳ ಮುಖ್ಯಮಂತ್ರಿ ಹೃದಯ ಕರಗಿದೆ.  ಟೀಂ ಇಂಡಿಯಾ ಹಾಗೂ ಕೊಹ್ಲಿ ಮಾತಿಗೆ , ಕೇರಳ ಮುಖ್ಯಮಂತ್ರಿ ಹೇಳಿದ್ದೇನು? ಇಲ್ಲಿದೆ.

ತಿರುವನಂತಪುರಂ(ಆ.22): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 203 ರನ್ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಗೆಲುವನ್ನ ಕೇರಳಾ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ್ದರು.

ಕೇರಳ ಮೇಲೆ ಪ್ರೀತಿ ತೋರಿದ ಹಾಗೂ ಧರ್ಯ ತುಂಬಿದ ನಾಯಕ ವಿರಾಟ್ ಕೊಹ್ಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ಹೇಳಿದ್ದಾರೆ. ಇಂಗ್ಲೆಂಡ್‌ನಲ್ಲಿರುವ ಟೀಂ ಇಂಡಿಯಾ ಕೇರಳ ಸಮಸ್ಯೆಗೆ ಸ್ಪಂದಿಸಿದೆ. ಟೀಂ ಇಂಡಿಯಾ ಕ್ರಿಕೆಟಿಗರ ಪ್ರೀತಿ ನಮಗೆ ಸ್ಪೂರ್ತಿ ಎಂದಿದ್ದಾರೆ.

 

In 3rd test match between England & India when India won, captain V.Kohli said, this win is dedicated to the victims. Even from England they're keeping us in their thoughts. The whole world is sending us love & that strengthens us further to overcome this: Kerala CM pic.twitter.com/cUJN8mtVUz

— ANI (@ANI)

 

ಕೇರಳ ಜಲ ಪ್ರವಾಹಕ್ಕೆ ಕೇರಳದಲ್ಲಿ 350ಕ್ಕೂ ಹೆಚ್ಚು ಜನ ಸಾವೀಗೀಡಾಗಿದ್ದಾರೆ. 3.5 ಲಕ್ಷ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಹಾಕ್ಕೆ ತತ್ತರಿಸಿದ ಕೇರಳ ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.


 

Indian cricket team has dedicated their Trent Bridge test victory to the flood victims of Kerala. CM Pinarayi Vijayan expressed the gratitude of Kerala to Team India () and Virat Kohli () for this kind gesture. pic.twitter.com/0qlcngTXpf

— CMO Kerala (@CMOKerala)
click me!