ಫಲಿಸಿತು ಅಭಿಮಾನಿಗಳ ಪ್ರಾರ್ಥನೆ -ಲಾರ್ಡ್ಸ್ ಟೆಸ್ಟ್‌ಗೆ ಮಳೆ ಅಡ್ಡಿ

By Web DeskFirst Published Aug 12, 2018, 8:32 PM IST
Highlights

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ ಒಂದೇ ಮಳೆರಾಯ ಬಿಡದೇ ಸುರಿಯಲಿ ಅನ್ನೋದು. ಸದ್ಯ ಮಳೆರಾಯ ಪ್ರಾರ್ಥನೆ ಕೇಳಿಸಿಕೊಂಡಿದ್ದಾನೆ. ಆದರೆ 2 ದಿನ ತಾಳ್ಮೆಯಿಂದ ಕೇಳಿಸಿಕೊಂಡರೆ ಮಾತ್ರ ಭಾರತಕ್ಕೆ ನೆರವಾಗಲಿದೆ.
 

ಲಾರ್ಡ್ಸ್(ಆ.12):  ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ಈಗಾಗಲೇ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನತ್ತ ಮುಖಮಾಡಿದೆ.  ಅಷ್ಟರಲ್ಲೇ ಅಭಿಮಾನಿಗಳ ಪ್ರಾರ್ಥನೆ ಕೇಳಿಸಿಕೊಂಡ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿದ್ದಾನೆ. ಹೀಗಾಗಿ ತಾತ್ಕಾಲಿಕವಾಗಿ ಪಂದ್ಯ ಸ್ಥಗಿತಗೊಂಡಿದೆ.

289 ರನ್ ಹಿನ್ನಡೆಯೊಂದಿದೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಮುರಳಿ ವಿಜಯ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ 10 ರನ್‌ಗಳಿಸಿ ಔಟಾಗಿದ್ದರು.

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ತಂಡಕ್ಕೆ ಆಸರೆಯಾಗಿದ್ದರು. 33 ಎಸೆತ ಎದುರಿಸಿ ಹೋರಾಟ ನೀಡೋ ಸೂಚನೆ ನೀಡಿದ ರಹಾನೆ ಸ್ಕೋರ್ 13 ದಾಟಲಿಲ್ಲ. 35 ರನ್‌ಗಳಿಸುವಷ್ಟರಲ್ಲೇ ಭಾರತ 3ನೇ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾವನ್ನ ಕಾಪಾಡಬೇಕಾದ ಜವಾಬ್ದಾರಿ  ಚೇತೇಶ್ವರ್ ಪೂಜಾರ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. 

ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೂ 17 ರನ್ ದಾಟಲಿಲ್ಲ. ಇನ್ನು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮರೆತೇ ಬಿಟ್ಟಿದ್ದಾರೆ. ಕಾರ್ತಿಕ್ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದಾರೆ.  ಈ ಮೂಲಕ ಟೀಂ ಇಂಡಿಯಾ 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 223 ರನ್ ಹಿನ್ನಡೆಯಲ್ಲಿದೆ. ಸದ್ಯ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ನಿರಂತರವಾಗಿ 2 ದಿನ ಸುರಿದರೆ ಮಾತ್ರ ಟೀಂ ಇಂಡಿಯಾಗೆ ನೆರವಾಗಲಿದೆ.

click me!