ಭಾರತ ಹಾಗೂ ಚೀನಾ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಚೀನಾದ ಸುಜೌನಲ್ಲಿ ಆಯೋಜಿಸಲಾಗಿರುವ ಫುಟ್ಬಾಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ತಂಡ ಪ್ರಕಟಿಸಿದೆ. ಇಲ್ಲಿದೆ ಭಾರತ ತಂಡದ ಡೀಟೇಲ್ಸ್.
ನವದೆಹಲಿ(ಅ.10): ಚೀನಾ ವಿರುದ್ಧದ ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕಾಗಿ 22 ಸದಸ್ಯರ ಭಾರತ ತಂಡವನ್ನ ಮುಖ್ಯಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಪ್ರಕಟಿಸಲಾಗಿದೆ. ಅ.13 ರಂದು ಚೀನಾದ ಸುಜೌನಲ್ಲಿ ಭಾರತ ಹಾಗೂ ಆತಿಥೇಯ ಚೀನಾ ಫುಟ್ಬಾಲ್ ಪಂದ್ಯ ಆಡಲಿದೆ.
For the first time ever the Indian Senior National Team will be playing an International Friendly in China. Let's cheer loud as they face the Red Dragons on October 13. pic.twitter.com/iXMR2tqkKy
— Indian Football Team (@IndianFootball)
undefined
ಸ್ಟ್ರೈಕರ್ ಬಲ್ವಂತ್ ಸಿಂಗ್, ಪಾಸ್‌ಪೋರ್ಟ್ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಭಾರತ-ಚೀನಾ ನಡುವೆ ಈವರೆಗೂ ಒಟ್ಟು 17 ಫುಟ್ಬಾಲ್ ಪಂದ್ಯಗಳು ನಡೆದಿದ್ದು, 12ರಲ್ಲಿಚೀನಾ ಗೆಲುವು ಸಾಧಿಸಿದೆ. ಉಳಿದ 5 ಪಂದ್ಯಗಳು ಡ್ರಾ ಆಗಿವೆ.
ಕೊನೆಯ ಬಾರಿ 1997ರಲ್ಲಿ ಕೊಚ್ಚಿಯಲ್ಲಿ ನಡೆದ ನೆಹರು ಕಪ್ ಪಂದ್ಯದಲ್ಲಿ ಭಾರತ, ಚೀನಾ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಚೀನಾ, 2-1 ಗೋಲುಗಳಿಂದ ಗೆಲುವು ಸಾಧಿಸಿತ್ತು.