ಟೀಂ ಇಂಡಿಯಾ ವೇಗಿ ಖಲೀಲ್ ಅಹಮ್ಮದ್‌ಗೆ ವಾರ್ನಿಂಗ್!

By Web DeskFirst Published Oct 30, 2018, 3:35 PM IST
Highlights

ವೆಸ್ಟ್ ಇಂಡೀಸ್ ವಿರುದ್ದದ 4ನೇ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಖಲೀಲ್ ಅಹಮ್ಮದ್‌ಗೆ ವಾರ್ನಿಂಗ್ ನೀಡಲಾಗಿದೆ. ಅಷ್ಟಕ್ಕೂ ಯುವ ವೇಗಿ ಐಸಿಸಿ ಮ್ಯಾಚ್ ರೆಫ್ರಿ ಕೆಂಗಣ್ಣಿಗೆ ಗುರಿಯಾಗಿದ್ದೇಕೆ? ಇಲ್ಲಿದೆ ಉತ್ತರ.
 

ಮುಂಬೈ(ಅ.30): ವೆಸ್ಟ್ ಇಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ನಿಯಮ ಮೀರಿ ವರ್ತಿಸಿದ ಟೀಂ ಇಂಡಿಯಾ ಯುವ ವೇಗಿ ಖಲೀಲ್ ಅಹಮ್ಮದ್‌ಗೆ ಎಚ್ಚರಿಸಲಾಗಿದೆ. ಇಷ್ಟೇ ಅಲ್ಲ ಡಿಮೆರಿಟ್ ಪಾಯಿಂಟ್ ಕೂಡ ಪಡೆದಿದ್ದಾರೆ.

ಮರ್ಲಾನ್ ಸ್ಯಾಮ್ಯುಯೆಲ್ಸ್ ವಿಕೆಟ್ ಕಬಳಿಸಿದ ಖಲೀಲ್ ಅಹಮ್ಮದ್ ಸಂಭ್ರಮಾಚರಣೆ ವೇಳೆ ನಿಯಮ ಮೀರಿದ್ದಾರೆ. ಪದ ಬಳಕೆ ಹಾಗೂ ಸೆಲೆಬ್ರೇಷನ್ ಎದುರಾಳಿಯನ್ನ ಕೆಣಕುವಂತಿತ್ತು.ಈ ಮೂಲಕ ಖಲೀಲ್ ಐಸಿಸಿ ಕೋಡ್ ಲೆವೆಲ್ 1 ಉಲ್ಲಂಘಿಸಿದ್ದರು.

ನಿಯಮ ಉಲ್ಲಂಘಿಸಿದ ಖಲೀಲ್ ಅಹಮ್ಮದ್‌ಗೆ ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ವಾರ್ನಿಂಗ್ ನೀಡಿದರು. ಇಷ್ಟೇ ಅಲ್ಲ ಡಿಮೆರಿಟ್ ಪಾಯಿಂಟ್ಸ್ ನೀಡಲಾಯಿತು. 4ನೇ ಏಕದಿನದಲ್ಲಿ ಖಲೀಲ್ ಅಹಮ್ಮದ್ 5 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

click me!