ಕ್ರಿಸ್ ವೋಕ್ಸ್ ಶತಕ -ಜಾನಿ ಬೈರಿಸ್ಟೋ ಆರ್ಭಟ -ಕಂಗಾಲಾದ ಭಾರತ

By Web DeskFirst Published Aug 11, 2018, 10:09 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಆಂಗ್ಲರತ್ತ ವಾಲಿದೆ. ಟೀಂ ಇಂಡಿಯಾ ಮೇಲುಗೈ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತೃತೀಯ ದಿನದಾಟದ ಅಪ್‌ಡೇಟ್ಸ್ ಇಲ್ಲಿದೆ.

ಲಾರ್ಡ್ಸ್(ಆ.11): ಕ್ರಿಸ್ ವೋಕ್ಸ್ ಭರ್ಜರಿ ಶತಕ ಹಾಗೂ ಜಾನಿ ಬೈರಿಸ್ಟೋ ಸಿಡಿಸಿದ  93 ರನ್ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಇದರೊಂದಿಗೆ ಲಾರ್ಡ್ಸ್ ಟೆಸ್ಟ್ ಗೆಲುವಿನ ಕನಸು ಕಂಡಿದ್ದ ಟೀಂ ಇಂಡಿಯಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ತೃತೀಯ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ  ಕೆಟನ್ ಜೆನ್ನಿಂಗ್ಸ್ 11 ರನ್ ಸಿಡಿಸಿ ಔಟಾದರು. ಇನ್ನ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟ್ರೈರ್ ಕುಕ್ 21 ರನ್‌ಗೆ ನಿರ್ಮಿಸಿದರು.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ಮಲಾನ್ ಬದಲು ಅವಕಾಶ ಪಡೆದ ಯುವ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ 28 ರನ್‌ ಕಾಣಿಕೆ ನೀಡಿ ನಿರ್ಗಮಿಸಿದರು.  ಎಚ್ಚರಿಕೆಯ ಹೋರಾಟಕ್ಕೆ ಮುಂದಾಗಿದ್ದ ನಾಯಕ ಜೋ ರೂಟ್ 19 ರನ್ ಸಿಡಿಸಿ ನಿರ್ಗಮಿಸಿದರು.  2ನೇ ಸೆಶನ್ ಆರಂಭದಲ್ಲೇ ಜೋಸ್ ಬಟ್ಲರ್ 24 ರನ್ ಸಿಡಿಸಿ ಔಟಾದರರು. ಆದರೆ ಜಾನಿ ಬೈರಿಸ್ಟೋ ಹಾಗೂ ಕ್ರಿಸ್ ವೋಕ್ಸ್ ಜೊತೆಯಾಟ ಭಾರತ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು. 

ದ್ವಿತೀಯ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬದಲು ಅವಕಾಶ ಪಡೆದ ಕ್ರಿಸ್ ವೋಕ್ಸ್ ಭರ್ಜರಿ ಶತಕ ಸಿಡಿಸಿದರು.  ಇನ್ನು ಜಾನಿ ಬೈರಿಸ್ಟೋ ಅಜೇಯ 93 ರನ್ ಸಿಡಿಸಿ ಔಟಾದರು. ಸದ್ಯ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 320  ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಮುನ್ನಡೆ ಸಾಧಿಸಿದೆ.

click me!