ಟಿ20 ಲೀಗ್ ಟೂರ್ನಿಗಳಿಗೆ ಐಸಿಸಿ ಬ್ರೇಕ್! ಐಪಿಎಲ್ ಕತೆಯೇನು?

By Web DeskFirst Published Oct 11, 2018, 11:06 AM IST
Highlights

ಐಪಿಎಲ್ ಟೂರ್ನಿ ಯಶಸ್ಸಿನ ಬಳಿಕ ಇದೀಗ ಪ್ರತಿ ಕ್ರಿಕೆಟ್ ರಾಷ್ಟ್ರಗಳು ತಮ್ಮದೇ ಆದ ಲೀಗ್ ಟೂರ್ನಿ ಆಯೋಜಿಸುತ್ತಿದೆ. ಇದೀಗ ಈ ಲೀಗ್ ಟೂರ್ನಿಗಳಿಗೆ ಕಡಿವಾಣ ಹಾಕಲು ಐಸಿಸಿ ಮುಂದಾಗಿದೆ. 
 

ದುಬೈ(ಅ.11): ವರ್ಷದಿಂದ ವರ್ಷಕ್ಕೆ ಟಿ20 ಲೀಗ್ ಟೂರ್ನಿಗಳ  ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಸಮಸ್ಯೆ ಎದುರಾಗುತ್ತಿದೆ ಕಾರಣಕ್ಕೆ ಟಿ20 ಲೀಗ್ ಟೂರ್ನಿಗಳಿಗೆ ಕಡಿವಾಣ ಹಾಕಲು ಐಸಿಸಿ ಮುಂದಾಗಿದೆ.

2008ರಲ್ಲಿ ಭಾರತದ ಐಪಿಎಲ್ ಟೂರ್ನಿಯೊಂದಿಗೆ ಕ್ರಿಕೆಟ್‌ನಲ್ಲಿ ಲೀಗ್ ಸಂಸ್ಕೃತಿ ಆರಂಭಗೊಂಡಿತು. ಬಳಿಕ ಪ್ರತಿ ಕ್ರಿಕೆಟ್ ರಾಷ್ಟ್ರಗಳು ಲೀಗ್ ಟೂರ್ನಿ ಆಯೋಜಿಸುತ್ತಿದೆ. ಪ್ರತಿ ಟೂರ್ನಿಯಲ್ಲೂ ವಿದೇಶಿ ಆಟಗಾರರು ಆಡುತ್ತಿದ್ದಾರೆ. ಇದರಿಂದ ದ್ವಿಪಕ್ಷೀಯ ಸರಣಿ ಆಯೋಜನೆ ಸೇರಿದಂತೆ ಇತರ ಅಂತಾರಾಷ್ಟ್ರೀಯ ಪಂದ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಲೀಗ್ ಟೂರ್ನಿಗಳಿಗೆ ಕಡಿವಾಣ ಹಾಕಲಿದ್ದೇವೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.

ಲೀಗ್ ಟೂರ್ನಿ ಕುರಿತು ಕಟ್ಟು ನಿಟ್ಟಿನ ಕ್ರಮಗಳನ್ನ ರೂಪಿಸಲು ಐಸಿಸಿ ಸಮಿತಿ ಮುಂದಿನ ವಾರ ಸಭೆ ಸೇರಲಿದೆ. ಕೆಲ ಟಿ20 ಲೀಗ್ ಟೂರ್ನಿಗಳು ಒಂದೆರಡು ಆವೃತ್ತಿಗಳ ಬಳಿಕ  ಸ್ಥಗಿತಗೊಂಡಿವೆ. ಹೀಗಾಗಿ ಇವೆಲ್ಲವನ್ನೂ ನಿಯಂತ್ರಿಸಲು ಹೊಸ ನೀತಿಗೆ ಐಸಿಸಿಗೆ ಮುಂದಾಗಿದೆ. ಐಸಿಸಿ ನೀತಿ ಭವಿಷ್ಯದಲ್ಲಿ ಹೊಸ ಟಿ20  ಲೀಗ್ ಟೂರ್ನಿ ಆಯೋಜನೆ ಕೂಡ ಕಷ್ಟವಾಗಲಿದೆ. 

ಯಶಸ್ವಿ ಲೀಗ್ ಟೂರ್ನಿ ಐಪಿಎಲ್‌ಗೆ ಯಾವುದೇ ಸಮಸ್ಯೆ ಇಲ್ಲ. ಇಷ್ಟೇ ಅಲ್ಲ, ಐಸಿಸಿ ಮಾನ್ಯತೆ ಪಡೆದಿರುವ ಲೀಗ್ ಟೂರ್ನಿಗಳು ನಿಗಧಿತ ಸಮಯದಲ್ಲಿ ಆಯೋಜಿಸಲು ಐಸಿಸಿಯಿಂದ ಅನುಮತಿ ಇದೆ. ಆದರೆ ಹೊಸ ಟೂರ್ನಿ ಆಯೋಜನೆ ಮಾತ್ರ ಮತ್ತಷ್ಟು ಕಠಿಣವಾಗಲಿದೆ.
 

click me!