ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್!

By Suvarna NewsFirst Published Jul 12, 2018, 3:06 PM IST
Highlights

ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಅಖಾಡ ರೆಡಿಯಾಗಿದೆ. ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮೊದಲೇ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಹಾಗಾದರೆ ಆಂಗ್ಲರಿಗೆ ಎದುರಾದ ಶಾಕ್ ಏನು?ಇಲ್ಲಿದೆ ವಿವರ. 


ನಾಂಟಿಗ್‌ಹ್ಯಾಮ್(ಜು.12): ಭಾರತ ವಿರುದ್ಧದ ಟಿ20 ಸರಣಿ ಸೋತು ಇದೀಗ ಏಕದಿನಲ್ಲಿ ಶುಭಾರಂಭದ ವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

ಇಂಜುರಿಗೆ ತುತ್ತಾಗಿರೋ ಅಲೆಕ್ಸ್ ಹೇಲ್ಸ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ವೇಲ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಸ್ಪಷ್ಟಪಡಿಸಿದೆ. ಹೇಲ್ಸ್ ಬದಲು ಡೇವಿಡ್ ಮಲನ್‌ಗೆ ತಂಡ ಸೇರಿಕೊಂಡಿದ್ದಾರೆ.

 

. has injured his side, with called up as cover for today's match. pic.twitter.com/3Va3C4HN9N

— England Cricket (@englandcricket)

 

ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಹೇಲ್ಸ್ 92 ಎಸೆತದಲ್ಲಿ 147 ರನ್ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 481ರನ್ ಸಿಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ನಡುಕು ಹುಟ್ಟಿಸಿದ್ದ ಹೇಲ್ಸ್, ಟೀಂ ಇಂಡಿಯಾಗೂ ಕಂಟಕವಾಗಿದ್ದರು. ಆದರೆ ಮೊದಲ ಪಂದ್ಯಕ್ಕೆ ಹೇಲ್ಸ್ ಅಲಭ್ಯರಾಗಿರೋದು, ಟೀಂಇಂಡಿಯಾಗೆ ಮತ್ತಷ್ಟು ಅನುಕೂಲವಾಗಲಿದೆ.

ಹೆಲ್ಸ್ ಅಲಭ್ಯತೆಯಿಂದ ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿರುವ ಬೆನ್ ಸ್ಟೋಕ್ಸ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ನಿಗಧಿತ ಓವರ್ ಕ್ರಿಕೆಟ್‍‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿರುವ ಹೇಲ್ಸ್ 65 ಏಕದಿನ ಪಂದ್ಯದಿಂದ 2302 ರನ್ ದಾಖಲಿಸಿದ್ದಾರೆ. ಪಾಕಿಸ್ತಾನ ವಿರುದ್ದ ಸಿಡಿಸಿದ 171ರನ್ ಹೇಲ್ಸ್ ಬೆಸ್ಟ್ ಸ್ಕೋರ್.

 

click me!