ಇಂಡೋ-ವಿಂಡೀಸ್ ಟೆಸ್ಟ್: ಮೊದಲ ದಿನ ಸಮಬಲದ ಹೋರಾಟ

By Web DeskFirst Published Oct 12, 2018, 4:37 PM IST
Highlights

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಹೈದಾರಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡಗಳು ಅತ್ಯುತ್ತಮ ಹೋರಾಟ ನೀಡಿದೆ. ಭಾರತ 7 ವಿಕೆಟ್ ಕಬಳಿಸಿ ಮಿಂಚಿದರೆ, ವೆಸ್ಟ್ಇಂಡೀಸ್ 295 ರನ್ ಸಿಡಿಸಿತು. ಇಲ್ಲಿದೆ ಮೊದಲ ದಿನದ ಹೈಲೈಟ್ಸ್.

ಹೈದರಾಬಾದ್ (ಅ.12): ಭಾರತ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ವೆಸ್ಟ್ಇಂಡೀಸ್ ದಿಟ್ಟ ಹೋರಾಟ ನೀಡಿದೆ. ಆರಂಭದ ದಿನದಲ್ಲೇ ವೆಸ್ಟ್ಇಂಡೀಸ್ 7 ವಿಕೆಟ್ ಕಳೆದುಕೊಂಡಿದೆ. ಆದರೆ 295 ರನ್ ಸಿಡಿಸುವಲ್ಲಿ  ಯಶಸ್ವಿಯಾಗಿದೆ.

 

That's Stumps on Day 1 of the 2nd Test.

Windies bat through a day of Test cricket in India. The reason for the majestic recovery has been down to the fine batting of Roston Chase. He's closing in on another Test century

Windies 295/7 pic.twitter.com/Ob7C7AbaLz

— BCCI (@BCCI)

 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ಇಂಡೀಸ್ ಉತ್ತಮ ಆರಂಭ ಪಡೆಯಲಿಲ್ಲ. 32 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು. ಕೀರನ್ ಪೊವೆಲ್ 22 ರನ್ ಸಿಡಿಸಿ ಔಟಾದರು. ಕ್ರೈಗ್ ಬ್ರಾಥ್ವೈಟ್ ಹಾಗೂ ಶೈ ಹೋಪ್ ಜೊತೆಯಾಟದಿಂದ ವಿಂಡೀಸ್ ಚೇತರಿಸಿಕೊಂಡಿತು. ಆದರೆ ಬ್ರಾಥ್ವೈಟ್ 14 ರನ್ ಸಿಡಿಸಿ ಔಟಾದರು. ದಿಟ್ಟ ಹೋರಾಟ ನೀಡಿದ  ಶೈ ಹೋಪ್ 36 ರನ್ ಸಿಡಿಸಿ ಔಟಾದರು. 

ಶಿಮ್ರೊನ್ ಹೆಟ್ಮೆಯರ್ 12, ಸುನಿಲ್ ಅಂಬ್ರಿಸ್ 18 ರನ್ ಸಿಡಿಸಿ ಔಟಾದರು. ಆದರೆ ರೋಶ್ಟನ್ ಚೇಸ್ ತಂಡಕ್ಕೆ ಆಸರೆಯಾದರು. ಚೇಸ್‌ಗೆ ಶೇನ್ ಡೌರಿಚ್ ಹಾಗೂ ನಾಯಕ ಜಾಸನ್ ಹೋಲ್ಡರ್ ಸಾಥ್ ನೀಡಿದರು.

ಡೌರಿಚ್ 30 ಹಾಗೂ ಹೋಲ್ಡರ್ 52 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ರೋಸ್ಟನ್ ಚೇಸ್ ಅಜೇಯ 98 ರನ್ ಸಿಡಿಸಿದ್ದಾರೆ. ಇದೀಗ ಸೆಂಚುರಿಗೆ 2 ರನ್‌ಗಳ ಅವಶ್ಯಕತೆ ಇದೆ. 

ದಿನದಾಟದ ಅಂತ್ಯದಲ್ಲಿ ವೆಸ್ಟ್ಇಂಡೀಸ್ 7 ವಿಕೆಟ್ ನಷ್ಟಕ್ಕೆ 295 ರನ್ ಸಿಡಿಸಿತು. ಭಾರತದ ಪರ ಉಮೇಶ್ ಯಾದವ್ ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಕಬಳಿಸಿದರು. ಆರ್ ಅಶ್ವಿನ್ 1 ವಿಕೆಟ್ ಪಡೆದರು.

click me!