ರೈಲು ದುರಂತದ ಸಂತ್ರಸ್ತರಿಗೆ ಪದಕ ಅರ್ಪಿಸಿದ ಭಜರಂಗ್

By Web DeskFirst Published Oct 24, 2018, 10:54 AM IST
Highlights

ಅಮೃತಸರ ರೈಲು ದುರಂತ ಶೋಕದಿಂದ ಯಾರು ಹೊರಬಂದಿಲ್ಲ. ಘೋರ ದುರಂತದಲ್ಲಿ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಭಾರತದ ತಾರಾ ಕುಸ್ತಿಪುಟ ಭಜರಂಗ್ ಫೂನಿಯಾ ತಮ್ಮ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಪದಕವನ್ನ ಮೃತರಿಗೆ ಅರ್ಪಿಸಿದ್ದಾರೆ.

ನವದೆಹಲಿ(ಅ.24): ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತಾವು ಜಯಿಸಿದ ಬೆಳ್ಳಿ ಪದಕವನ್ನು ರಾವಣ
ಪ್ರತಿಕೃತಿ ದಹನ ವೇಳೆ ಅಮೃತಸರದಲ್ಲಿ ನಡೆದ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಅರ್ಪಿಸಿದ್ದಾರೆ.   

ವಿಜಯದಶಮಿಯಂದು (ಶುಕ್ರವಾರ) ಅಮೃ ತಸರದಲ್ಲಿ ರಾವಣ ಪ್ರತಿಕೃತಿ ದಹನದ ವೇಳೆ ಕಾರ್ಯಕ್ರಮ ವೀಕ್ಷಿಸಲು ನೆರದಿದ್ದವರ ಮೇಲೆ ರೈಲು ಹರಿದು 61 ಮಂದಿ ಮೃತರಾಗಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದರು. 

ಈ ದುರಂತದಲ್ಲಿ ಮೃತಪಟ್ಟವರಿಗೆ ತಮ್ಮ ಕುಸ್ತಿ ಚಾಂಪಿಯನ್‌ಶಿಪ್ ಪದಕ ಅರ್ಪಿಸೋ ಮೂಲಕ ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಮುಂದಿನ ಕುಸ್ತಿ ಟೂರ್ನಿಯಲ್ಲಿ ಚಿನ್ನಕ್ಕೆ ಗುರಿಯಿ ಇಡೋದಾಗಿ ಭಜರಂಗ್ ಹೇಳಿದರು.

click me!