ಏಷ್ಯನ್ ಗೇಮ್ಸ್ 2018: ಕಬಡ್ಡಿಯಲ್ಲಿ ಭಾರತಕ್ಕೆ ಸತತ 2ನೇ ಗೆಲುವು

By Web DeskFirst Published Aug 19, 2018, 7:12 PM IST
Highlights

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡದ ಗೆಲುವಿನ ಓಟ ಮುಂದವರಿಸಿದೆ. ಭಾರತ ಹಾಗೂ ಶ್ರೀಲಂಕಾ ನಡವಿನ ಕಬಡ್ಡಿ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಜಕರ್ತಾ(ಆ.19): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ತಂಡ ಸತತ 2ನೇ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯ ಗೆದ್ದು ಸಂಭ್ರಮಿಸಿದ ಭಾರತ ಇದೀಗ ಶ್ರೀಲಂಕಾ ತಂಡವನ್ನೂ ಮಣಿಸಿದೆ.

ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನ 50-21 ಅಂಕಗಳ ಅಂತರದಲ್ಲಿ ಸೋಲಿಸಿದ್ದ ಭಾರತ, ಇದೀಗ ಶ್ರೀಲಂಕಾ ತಂಡವನ್ನ 44-28 ಅಂಕಗಳಲ್ಲಿ ಮಣಿಸಿದೆ. ಈ ಮೂಲಕ ಭಾರತ ಅಗ್ರಸ್ಥಾನ ಕಾಪಾಡಿಕೊಂಡಿದೆ. 

ಮುಂದಿನ ಪಂದ್ಯದಲ್ಲಿ(ಆ.20) ಭಾರತ ತಂಡ, ಸೌತ್ ಕೊರಿಯಾ ತಂಡವನ್ನ ಎದುರಿಸಲಿದೆ.
ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತ ಸತತ 7 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಇದೀಗ ಈ ಬಾರಿಯೂ ಚಿನ್ನದ ಪದಕದ ನಿರೀಕ್ಷೆಯಲ್ಲಿದೆ. 

click me!