ಏಷ್ಯನ್ ಗೇಮ್ಸ್: ರೋಯಿಂಗ್’ನಲ್ಲಿ ಚಿನ್ನ ಸೇರಿ ಭಾರತ್ಕೆ 3 ಪದಕ

By Web DeskFirst Published Aug 24, 2018, 9:53 AM IST
Highlights

ದಿನದ ಆರಂಭದಲ್ಲೇ ರೋಯಿಂಗ್ ದುಶ್ಯಾಂತ್ ಚೌಹ್ಹಾನ್ ಕಂಚಿನ ಪದಕ ಗೆದ್ದು ಖಾತೆ ಆರಂಭಿಸಿದರು. ದುಶ್ಯಾಂತ್ 2014ರ ಏಷ್ಯಾನ್ ಗೇಮ್ಸ್’ನಲ್ಲೂ ಕಂಚಿನ ಪದಕ ಜಯಿಸಿದ್ದರು. ಆ ಬಳಿಕ ಲೈಟ್’ವೇಟ್ ಡಬಲ್ ಸ್ಕಲ್ಸ್’ನಲ್ಲಿ ರೋಹಿತ್ ಕುಮಾರ್, ಭಗವಾನ್ ಜೋಡಿ ಮತ್ತೊಂದು ಕಂಚಿನ ಪದಕ ಬಾಚಿಕೊಂಡರು. 

ಜಕಾರ್ತ[ಆ.24]: ಭಾರತದ ಪುರುಷರ ರೋಯಿಂಗ್ ತಂಡ 18ನೇ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ರೋಯಿಂಗ್’ನಲ್ಲಿ ಇಂದು ಬೆಳಗ್ಗೆಯೇ ಮೂರು ಪದಕಗಳು ಭಾರತದ ಪಾಲಾಗಿವೆ. ಇದೀಗ ಭಾರತ 5 ಸ್ವರ್ಣ, 4 ಬೆಳ್ಳಿ ಹಾಗೂ 12 ಕಂಚಿನೊಂದಿಗೆ ಒಟ್ಟು 21 ಪದಕಗಳೊಂದಿಗೆ 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ದಿನದ ಆರಂಭದಲ್ಲೇ ರೋಯಿಂಗ್ ದುಶ್ಯಾಂತ್ ಚೌಹ್ಹಾನ್ ಕಂಚಿನ ಪದಕ ಗೆದ್ದು ಖಾತೆ ಆರಂಭಿಸಿದರು. ದುಶ್ಯಾಂತ್ 2014ರ ಏಷ್ಯಾನ್ ಗೇಮ್ಸ್’ನಲ್ಲೂ ಕಂಚಿನ ಪದಕ ಜಯಿಸಿದ್ದರು. ಆ ಬಳಿಕ ಲೈಟ್’ವೇಟ್ ಡಬಲ್ ಸ್ಕಲ್ಸ್’ನಲ್ಲಿ ರೋಹಿತ್ ಕುಮಾರ್, ಭಗವಾನ್ ಜೋಡಿ ಮತ್ತೊಂದು ಕಂಚಿನ ಪದಕ ಬಾಚಿಕೊಂಡರು. ಇದಾದ ನಂತರ ರೋಯಿಂಗ್ ತಂಡ ವಿಭಾಗದಲ್ಲಿ ಸವರ್ಣ್ ಸಿಂಗ್, ದತ್ತು ಭೋಕ್ನಲ್, ಓಂ ಪ್ರಕಾಶ್ ಹಾಗೂ ಸುಖ್’ಮಿತ್ ಸಿಂಗ್ ಜೋಡಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾರೆ. 

ಒಟ್ಟಾರೆ ರೋಯಿಂಗ್’ನ ತಂಡ ವಿಭಾಗದಲ್ಲಿ ಚಿನ್ನ, ಪುರುಷರ ಲೈಟ್’ವೇಟ್ ಡಬಲ್ಸ್ ಹಾಘೂ ಲೈಟ್’ವೇಟ್ ಸಿಂಗಲ್ಸ್’ನಲ್ಲಿ ಕಂಚು ಗೆದ್ದುಕೊಂಡು ದಿನದ ಶುಭಾರಂಭ ಮಾಡಿದೆ.

click me!