ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಬಂತು ಮತ್ತೆರಡು ಪದಕ

By Web DeskFirst Published Aug 21, 2018, 7:30 PM IST
Highlights

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ದೇಶವೇ ಹೆಮ್ಮೆ ಪಡುವ ಪ್ರದರ್ಶನ ನೀಡುತ್ತಿದ್ದಾರೆ. 3ನೇ ದಿನದಲ್ಲಿ ಭಾರತೀಯರ ಪದಕ ಭೇಟೆ ಮುಂದುವರಿದೆ. ಇದೀಗ ಮತ್ತೆರಡು ಪದಕ ಭಾರತದ ಖಾತೆ ಸೇರಿಕೊಂಡಿದೆ.

ಜಕರ್ತಾ(ಆ.21): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 3ನೇ ದಿನ ಭಾರತೀಯರ ಪದಕ ಬೇಟೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಚಿನ್ನ ಹಾಗೂ ಬೆಳ್ಳಿ ಪದಕದೊಂದಿಗೆ ದಿನದಾಟ ಆರಂಭಿಸಿದ  ಭಾರತ ಇದೀಗ ಮತ್ತೆರೆಡು ಕಂಚಿನ ಪದಕ ಗೆದ್ದುಕೊಂಡಿದೆ.

ಸೆಪೆಕ್‌ಟಕ್ರಾ ಕ್ರೀಡೆಯಲಲ್ಲಿ ಭಾರತದ ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಥಾಯಿಲೆಂಡ್ ವಿರುದ್ಧ 0-2 ಅಂತರದಲ್ಲಿ ಸೋಲು ಕಂಡಿತು. ಈ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

 

has been created! has won a medal in Sepak Takraw for the 1st time in the Asian Games!
The team proudly brings home a🥉in the Men’s Team Regu event
Many congratulations!🎉 🇮🇳 pic.twitter.com/tCuRQFto2B

— SAIMedia (@Media_SAI)

 

ಮಹಿಳಾ ಫ್ರೀ ಸ್ಟೈಲ್ 68 ಕೆಜಿ ರೆಸ್ಲಿಂಗ್   ವಿಭಾಗದಲ್ಲಿ ಭಾರತದ ದಿವ್ಯ ಕಾಕ್ರನ್ ಕಂಚಿನ ಪದಕ ಗೆದ್ದಿದ್ದಾರೆ.  ಚೈನೀಸ್ ತೈಪೆ ವಿರುದ್ಧ 10-0 ಅಂಕಗಳಲ್ಲಿ ಗೆಲುವು ಸಾಧಿಸಿ ಕಂಚಿನ ಪದಕ್ಕೆ ಮುತ್ತಿಕ್ಕಿದ್ದಾರೆ.

 

Divya grabs a bronze medal for !
Great display of strength by the 20yr old in women’s 68kg freestyle .
Dominating the match,she defeated Chen Wenling of 10-0.
Congrats Divya! 🇮🇳🥉 pic.twitter.com/keVWP7ygFU

— SAIMedia (@Media_SAI)

 

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಓಟ್ಟು 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಓಟ್ಟು 10 ಪದಕ ಗೆದ್ದುಕೊಂಡಿದೆ. ಈ ಮೂಲಕ 7ನೇ ಸ್ಥಾನ ಉಳಿಸಿಕೊಂಡಿದೆ. ಇನ್ನು 29 ಚಿನ್ನ, 19 ಬೆಳ್ಳಿ ಹಾಗೂ 12 ಕಂಚಿನ ಪದಕದೊಂದಿಗೆ ಓಟ್ಟು 59 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿದೆ.
 

click me!