ಸನ್‌ರೈಸರ್ಸ್ ಹೈದರಾಬಾದ್ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಆದರೆ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈನ ಪ್ಲೇ-ಆಫ್ ಬಾಗಿಲು ಬಂದ್ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಹೀಗಾಗಿ ತಂಡ ಪ್ರತಿಷ್ಠೆಗಾಗಿ ಆಡಬೇಕಿದೆ.
ಮುಂಬೈ(ಮೇ.06): 2020ರ ಬಳಿಕ ಮೊದಲ ಬಾರಿ ಪ್ಲೇ-ಆಫ್‌ಗೇರುವ ನಿರೀಕ್ಷೆಯಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಹತ್ವದ ಪಂದ್ಯದಲ್ಲಿ ಸೋಮವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಮತ್ತೊಂದು ಗೆಲುವು ತಂಡವನ್ನು ಪ್ಲೇ-ಆಫ್‌ನ ಸನಿಹಕ್ಕೆ ತಂದು ನಿಲ್ಲಿಸಲಿದೆ. ಆದರೆ 11ರಲ್ಲಿ 8 ಪಂದ್ಯ ಸೋತಿರುವ ಮುಂಬೈನ ಪ್ಲೇ-ಆಫ್ ಬಾಗಿಲು ಬಂದ್ ಆಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಹೀಗಾಗಿ ತಂಡ ಪ್ರತಿಷ್ಠೆಗಾಗಿ ಆಡಬೇಕಿದೆ.
IPL 2024 ಕೆಕೆಆರ್ ಆರ್ಭಟಕ್ಕೆ ಲಖನೌ ಸೂಪರ್ ಜೈಂಟ್ಸ್ ತಬ್ಬಿಬ್ಬು..!
ಸನ್‌ರೈಸರ್ಸ್ ಹೈದರಾಬಾದ್ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತರೂ ತಂಡ ಬಲಿಷ್ಠವಾಗಿಯೇ ತೋರುತ್ತಿದ್ದು, ಮುಂಬೈ ವಿರುದ್ಧ ಈ ಬಾರಿ ಸತತ 2ನೇ ಜಯದ ಕಾತರದಲ್ಲಿದೆ.
ಅತ್ತ ಮುಂಬೈ ಒಂದಿಬ್ಬರ ವೈಯಕ್ತಿಕ ಆಟ ಹೊರತುಪಡಿಸಿ ಎಲ್ಲಾ ವಿಭಾಗದಲ್ಲೂ ವಿಫಲವಾಗಿದೆ. ಸುಧಾರಿತ ಪ್ರದರ್ಶನ ನೀಡಿ ಅಂಕಪಟ್ಟಿಯ ಕೊನೆ ಸ್ಥಾನದಿಂದ ಮೇಲೇರುವುದು ತಂಡದ ಮುಂದಿರುವ ಗುರಿ.
"ನೀನ್ಯಾಕೆ ಮಾತಾಡ್ತೀ..?': ವಿರಾಟ್ ಕೊಹ್ಲಿ ಮೇಲೆ ಕಿಡಿಕಾರಿದ ಸನ್ನಿ..!
ಒಟ್ಟು ಮುಖಾಮುಖಿ: 22
ಹೈದ್ರಾಬಾದ್: 10
ಮುಂಬೈ: 12
ಸಂಭವನೀಯರ ಪಟ್ಟಿ
ಸನ್‌ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮಾ, ಟ್ರ್ಯಾವಿಸ್ ಹೆಡ್, ಅನ್ಮೋಲ್, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಅಬ್ದುಲ್ ಸಮದ್, ಶಾಬಾಜ್ ಅಹಮದ್, ಮಾರ್ಕೊ ಯಾನ್ಸೆನ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೇಹಲ್ ವದೇರಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ಗೆರಾಲ್ಡ್ ಕೋಟ್ಜೀ, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ