ಏಷ್ಯಾಕಪ್ 2018: ಟಾಸ್ ಗೆದ್ದ ಹಾಂಕಾಂಗ್ ಫೀಲ್ಡಿಂಗ್ ಆಯ್ಕೆ-ಕನ್ನಡಿಗರಿಗಿಲ್ಲ ಸ್ಥಾನ!

By Web DeskFirst Published Sep 18, 2018, 5:02 PM IST
Highlights

ಏಷ್ಯಾಕಪ್ ಟೂರ್ನಿ 4ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಭಾರತ ವಿರುದ್ಧದ ಪಂದ್ಯದಲ್ಲಿ ಹಾಂಕಾಂಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ? ಇಲ್ಲಿದೆ ವಿವರ

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಾಕಿಸ್ತಾನ ವಿರುದ್ದ ಮೊದಲ ಪಂದ್ಯ ಸೋತಿರುವ ಹಾಂಕಾಂಗ್ ಇದೀಗ ಬಲಿಷ್ಠ ಟೀಂ ಇಂಡಿಯಾಗೆ ಸವಾಲು ಹಾಕಲು ಸಜ್ಜಾಗಿದೆ.

ಹಾಂಕಾಂಗ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಬಲಿಷ್ಠ ತಂಡವನ್ನ ಆಯ್ಕೆ ಮಾಡಿದೆ. ಯುವ ವೇಗಿ ಖಲೀಲ್ ಅಹಮ್ಮದ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ನಾಯಕ ರೋಹಿತ್ ಶರ್ಮಾ ಡೆಬ್ಯು ಕ್ಯಾಪ್ ನೀಡಿದರು.

ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರ ಬದಲಾಗಿ ಅಂಬಾಟಿ ರಾಯುಡು ಹಾಗೂ ಕೇದಾರ್ ಜಾದವ್ ಸ್ಥಾನ ಪಡೆದಿದ್ದಾರೆ.

ವೇಗಿಗಳಾಗಿ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಹಾಗೂ ಖಲೀಲ್ ಅಹಮ್ಮದ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇನ್ನು ಕುಲ್ದೀಪ್  ಯಾದವ್ ಹಾಗೂ ಯುಜುವೇಂದ್ರ ಚೆಹಾಲ್ ಸ್ಪಿನ್ ಮೋಡಿ ಮಾಡಲಿದ್ದಾರೆ.

click me!