ಏಷ್ಯಾಕಪ್ 2018: ಮುಶ್ಫಿಕರ್ ರಹೀಮ್ ಶತಕ-ಶ್ರೀಲಂಕಾಗೆ ಸಂಕಟ

By Web DeskFirst Published Sep 15, 2018, 8:40 PM IST
Highlights

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್‌ಡೇಟ್ಸ್

ದುಬೈ(ಸೆ.15): ಏಷ್ಯಾಕಪ್ ಟೂರ್ನಿ ಮೊದಲ ಪಂದ್ಯದಲ್ಲಿ ಶ್ರೀಲಂಕಾ ದಾಳಿಗೆ ತತ್ತರಿಸಿದ್ದ ಬಾಂಗ್ಲಾದೇಶ ತಂಡಕ್ಕೆ ಮುಶ್ಫಿಕರ್ ರಹೀಮ್ ಶತಕ ಸಿಡಿಸಿ ಆಸರೆಯಾಗಿದ್ದಾರೆ. ಈ ಮೂಲಕ ಬಾಂಗ್ಲಾ ತಿರುಗೇಟು ನೀಡಿದೆ.

 

100 for !

Great innings, he's helped to 209/8 off 43.3 overs.

How many more can they get?

Follow live ⬇️https://t.co/OqwHFUJT6J pic.twitter.com/hkJj9IyU9w

— ICC (@ICC)

 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ, ಲಂಕಾ ವೇಗಿ ಲಸಿತ್ ಮಲಿಂಗಾ ದಾಳಿಗೆ ತತ್ತರಿಸಿತು. ಲಿಟ್ಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಶೂನ್ಯಕ್ಕೆ ಔಟಾದರು. ಈ ಮೂಲಕ ಬಾಂಗ್ಲಾದೇಶ 1 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು.

ಆರಂಭದಲ್ಲೇ ಹಿನ್ನಡೆ ಅನುಭವಿಸಿದ ತಂಡಕ್ಕೆ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದ್ ಮಿಥುನ್ ಆಸರೆಯಾದರು. ಇಬ್ಬರು ಅರ್ಧಶತಕ ಸಿಡಿಸಿದರು. ಈ ಜೊತೆಯಾಟಕ್ಕೆ ಮಲಿಂಗ ಬ್ರೇಕ್ ನೀಡಿದರು.

ಮಿಥುನ್ 63 ರನ್ ಸಿಡಿಸಿ ಔಟಾದರು. ಇನ್ನು ಮಹಮ್ಮದುಲ್ಲಾ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಆದರೆ ರಹೀಮ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ರಹೀಮ್ ಶತಕ ಸಿಡಿಸಿ ಮಿಂಚಿದರು. ಸದ್ಯ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 210 ರನ್ ಸಿಡಿಸಿದೆ.

click me!