ಕುಸ್ತಿ ಫೆಡರೇಶನ್‌ನ ಅಥ್ಲೀಟ್ಸ್‌ ಸಮಿತಿಗೆ ನರಸಿಂಗ್‌ ಯಾದವ್‌ ಮುಖ್ಯಸ್ಥ

By Kannadaprabha News  |  First Published Apr 25, 2024, 8:57 AM IST

ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ನಿಷೇಧ ತೆರವುಗೊಳಿಸುವಾಗ, ಅಥ್ಲೀಟ್‌ಗಳ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ದೇಶದ ಕುಸ್ತಿಪಟುಗಳು ತಮ್ಮ ಸಮಸ್ಯೆಗಳನ್ನು ಅಥ್ಲೀಟ್ಸ್‌ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬಹುದು.


ವಾರಾಣಸಿ(ಏ.25): ಮಾಜಿ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ನರಸಿಂಗ್‌ ಯಾದವ್‌, ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ನ ಅಥ್ಲೀಟ್ಸ್‌ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ 7 ಸ್ಥಾನಗಳಿಗೆ 8 ಮಂದಿ ಸ್ಪರ್ಧಿಸಿದ್ದರು. ಚುನಾಯಿತ 7 ಮಂದಿಯ ಪೈಕಿ ನರಸಿಂಗ್‌ರನ್ನು ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. 

ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು) ಭಾರತೀಯ ಕುಸ್ತಿ ಫೆಡರೇಶನ್‌ ಮೇಲಿನ ನಿಷೇಧ ತೆರವುಗೊಳಿಸುವಾಗ, ಅಥ್ಲೀಟ್‌ಗಳ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ದೇಶದ ಕುಸ್ತಿಪಟುಗಳು ತಮ್ಮ ಸಮಸ್ಯೆಗಳನ್ನು ಅಥ್ಲೀಟ್ಸ್‌ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬಹುದು. ಈ ಸಮಿತಿಗೆ ದೆಹಲಿಯ ಸಾಹಿಲ್‌, ಕೇರಳದ ಸ್ಮಿತಾ ಎ.ಎಸ್‌., ಉ.ಪ್ರದೇಶದ ಭಾರತಿ, ಗುಜರಾತ್‌ನ ಖುಷ್ಬೂ ಪವಾರ್‌, ಹರ್ಯಾಣದ ನಿಕ್ಕಿ ಹಾಗೂ ಬಂಗಾಳದ ಶ್ವೇತಾ ದುಬೆ ಆಯ್ಕೆಯಾಗಿದ್ದಾರೆ.

Tap to resize

Latest Videos

undefined

ಇಂದು ಆರ್‌ಸಿಬಿಗೆ ಎದುರಾಗಲಿದೆ ಸನ್‌ರೈಸರ್ಸ್‌ ಚಾಲೆಂಜ್‌: ಮತ್ತೆ ರನ್‌ ಮಳೆ?

ಆರ್ಚರಿ ವಿಶ್ವಕಪ್‌: ಭಾರತ ಕಾಂಪೌಂಡ್‌ ತಂಡಗಳು ಫೈನಲ್‌ ಪ್ರವೇಶ

ಶಾಂಘೈ(ಚೀನಾ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ಕಾಂಪೌಂಡ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಫೈನಲ್‌ ಪ್ರವೇಶಿಸಿದ ಪದಕ ಖಚಿತಪಡಿಸಿಕೊಂಡಿವೆ.

ಅಭಿಷೇಕ್‌ ವರ್ಮಾ, ಪ್ರಥಮೇಶ್‌ ಬಾಲಚಂದ್ರ ಹಾಗೂ ಹಾಲಿ ಅಂಡರ್‌-21 ವಿಶ್ವ ಚಾಂಪಿಯನ್‌ ಪ್ರಿಯಾನ್ಶ್‌ ಅವರನ್ನೊಳಗೊಂಡ ಭಾರತ ತಂಡವು ಫಿಲಿಪ್ಪೀನ್ಸ್‌ ಹಾಗೂ ಡೆನ್ಮಾರ್ಕ್‌ ತಂಡಗಳನ್ನು ಸೋಲಿಸಿ ಸೆಮೀಸ್‌ಗೇರಿತು. ಸೆಮೀಸ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು 235-233 ಅಂಕಗಳಲ್ಲಿ ಮಣಿಸಿ ಫೈನಲ್‌ ಪ್ರವೇಶಿಸಿತು. ಚಿನ್ನದ ಪದಕದ ಪಂದ್ಯದಲ್ಲಿ ಭಾರತಕ್ಕೆ ನೆದರ್‌ಲೆಂಡ್ಸ್‌ ಎದುರಾಗಲಿದೆ.

ಎಂ ಎಸ್ ಧೋನಿಗೆ ಈ ವಯಸ್ಸಲ್ಲಿ ಇಷ್ಟೊಂದು ಪವರ್ ಎಲ್ಲಿಂದ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಇದೇ ವೇಳೆ ಅದಿತಿ ಸ್ವಾಮಿ, ಜ್ಯೋತಿ ಸುರೇಖಾ ಹಾಗೂ ಪರ್ನೀತ್‌ ಕೌರ್‌ ಅವರನ್ನೊಳಗೊಂಡ ಮಹಿಳಾ ತಂಡ, ಟರ್ಕಿ ಹಾಗೂ ಎಸ್ಟೋನಿಯಾ ತಂಡಗಳನ್ನು ಸೋಲಿಸಿತು. ಫೈನಲ್‌ನಲ್ಲಿ ಭಾರತಕ್ಕೆ ಇಟಲಿ ಎದುರಾಗಲಿದೆ.

ಧೀರಜ್‌ ರಾಷ್ಟ್ರೀಯ ದಾಖಲೆ!

ಇನ್ನು ರೀಕರ್ವ್‌ ವಿಭಾಗದಲ್ಲಿ ಭಾರತದ ಧೀರಜ್‌ ಬೊಮ್ಮದೇವರ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ಧೀರಜ್‌ ಒಟ್ಟು 693 ಅಂಕ ಕಲೆಹಾಕಿದರು. ಇದರೊಂದಿಗೆ ತರುಣ್‌ದೀಪ್‌ ರೈ ಹೆಸರಿನಲ್ಲಿದ್ದ 689 ಅಂಕಗಳ ದಾಖಲೆಯನ್ನು ಧೀರಜ್‌ ಮುರಿದರು.
 

click me!