ಏಷ್ಯಾಕಪ್ 2018: ಬಾಂಗ್ಲಾ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ

By Web DeskFirst Published Sep 15, 2018, 10:24 PM IST
Highlights

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ  ಅಪ್‌ಡೇಟ್ಸ್ ಇಲ್ಲಿದೆ.

ದುಬೈ(ಸೆ.15): ಏಷ್ಯಾಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಗೆಲುವಿಗೆ 262 ರನ್ ಟಾರ್ಗೆಟ್ ಪಡೆದಿರುವ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಬಾಂಗ್ಲಾದೇಶ ವಿರುದ್ಧ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿದ ಶ್ರೀಲಂಕಾ 22 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದಕೊಂಡಿತು. ಕುಸಾಲ್ ಮೆಂಡೀಸ್ ಶೂನ್ಯಕ್ಕೆ ಔಟಾದರು.

4 ಬೌಂಡರ್ ಹಾಗೂ 1 ಸಿಕ್ಸರ್ ಸಿಡಿಸಿದ ಉಪುಲ್ ತರಂಗಾ 27 ರನ್  ಸಿಡಿಸಿ ಔಟಾದರು. ಧನಂಜಯ್ ಡಿಸಿಲ್ವಾ ಡಕೌಟ್ ಆದರು. 11 ರನ್ ಸಿಡಿಸಿದ ಕುಸಾಲ್ ಪರೇರಾ ಕೂಡ ಪೆವಿಲಿಯನ್ ಸೇರಿಕೊಂಡರು.  ಈ ಮೂಲಕ ಶ್ರೀಲಂಕಾ 38 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 261 ರನ್‌ಗಳಿಗೆ ಆಲೌಟ್ ಆಯಿತು. ಮುಶ್ಫಿಕರ್ ರಹೀಮ್ 144 ರನ್ ಸಿಡಿಸೋ ಮೂಲಕ ಬಾಂಗ್ಲಾ ತಂಡಕ್ಕೆ ಆಸರೆಯಾದರು. 
 

click me!