ಮೊದಲ ಪಂದ್ಯದಲ್ಲಿ ಡಕೌಟ್ -ದಿಗ್ಗಜ ಕ್ರಿಕೆಟರ್ ಆಗ್ತಾರ ಅರ್ಜುನ್ ತೆಂಡೂಲ್ಕರ್?

By Suvarna NewsFirst Published Jul 19, 2018, 3:59 PM IST
Highlights

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಪ್ಪನ ಹಾದಿಯಲ್ಲೇ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಅಪ್ಪನ್ ರೀತಿಯಲ್ಲೇ ದಿಗ್ಗಜ ಕ್ರಿಕೆಟರ್ ಆಗ್ತಾರ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅರ್ಜುನ್ ಕುರಿತು ಈ ರೀತಿ ಚರ್ಚೆ ಶುರುವಾಗಿದ್ದು ಯಾಕೆ? ಇಲ್ಲಿದೆ  ವಿವರ.

ಕೊಲಂಬೋ(ಜು.19): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದಿಗ್ಗಜ ಕ್ರಿಕೆಟರ್ ಆಗ್ತಾರ? ಇಂತಹ ಚರ್ಚೆ ಇದೀಗ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ. ಇದಕ್ಕೆ ಕಾರಣವಾಗಿದ್ದು ಅರ್ಜುನ್ ತೆಂಡೂಲ್ಕರ್ ಡಕೌಟ್. ಶ್ರೀಲಂಕಾ ವಿರುದ್ದದ ಅಂಡರ್ 19 ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ ಕಬಳಿಸಿ ಸಂಭ್ರಮಿಸಿದ  ಅರ್ಜುನ್, ಬ್ಯಾಟಿಂಗ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಅಪ್ಪನ ಹಾದಿಯಲ್ಲೇ ಹೆಜ್ಜೆ ಹಾಕಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಡಿಸೆಂಬರ್ 18, 1989ರಂದು ಪಾಕಿಸ್ತಾನ ವಿರುದ್ಧದ 2 ಪಂದ್ಯದಲ್ಲಿ ಸಚಿನ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ವಕಾರ್ ಯೂನಿಸ್ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿದ್ದರು. ಇದೀಗ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

ಇದನ್ನು ಓದಿ: ಟೀಕೆಗಳಿಗೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಖಡಕ್ ಉತ್ತರ

ಸಚಿನ್ 2 ಎಸೆತದ ಎದುರಿಸಿ ಔಟಾಗಿದ್ದರೆ, ಅರ್ಜುನ್ ತೆಂಡೂಲ್ಕರ್ 11 ಎಸೆತ ಎದುರಿಸಿ ರನ್‌ಗಳಿಸದೇ ಪೆವಿಲಿಯನ್ ಸೇರಿದ್ದಾರೆ.  ಬೌಲಿಂಗ್ ವೇಳೆ ಅರ್ಜುನ್ ಕಾಮಿಲ್ ಮಿಶಾರ ವಿಕೆಟ್ ಕಬಳಿಸಿ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ್ದ ಅರ್ಜುನ್ ಭಾರಿ ಸುದ್ದಿಯಾಗಿದ್ದರು. ಇದೀಗ ಡಕೌಟ್ ಆಗೋ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

click me!