ರಸ್ತೆಯಲ್ಲಿ ಕಸ ಎಸೆದವನನ್ನ ಜಾಡಿಸಿದ ಅನುಷ್ಕಾ ಶರ್ಮಾಗೆ ಕೊಹ್ಲಿ ಅಭಿನಂದನೆ

First Published Jun 16, 2018, 7:57 PM IST
Highlights

ದಾರಿಯಲ್ಲಿ ಕಸ ಎಸೆದ ವ್ಯಕ್ತಿಗೆ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಅನುಷ್ಕಾ ನೀಡಿದ ವಾರ್ನಿಂಗ್ ಹೇಗಿದೆ? ಇಲ್ಲಿದೆ ನೋಡಿ.

ಬೆಂಗಳೂರು(ಜೂ.16): ರಸ್ತೆಯಲ್ಲಿ ಕಸದವನಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಿಗ್ಗಾ ಮುಗ್ಗಾ ಜಾಡಿಸಿದ ವಿಡೀಯೋ ಇದೀದ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಡೀಯೋ ಪೋಸ್ಟ್ ಮಾಡಿದ್ದು ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಲಕ್ಸುರಿ ಕಾರಿನಲ್ಲಿ ಬಂದ ವ್ಯಕ್ತಿ ದಾರಿಯಲ್ಲೇ ಕಸ ಎಸೆದಿದ್ದಾನೆ. ತಕ್ಷಣವೇ ಕೋಪಗೊಂಡ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ದಾರಿಯಲ್ಲಿ ಕಸ ಎಸೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ನಗರದಲ್ಲೆಡೆ ಕಸ ಎಸೆಯದಂತೆ ಎಚ್ಚರಿಸಿದ್ದಾರೆ. 

 

Saw these people throwing garbage on the road & pulled them up rightfully. Travelling in a luxury car and brains gone for a toss. These people will keep our country clean? Yeah right! If you see something wrong happening like this, do the same & spread awareness. pic.twitter.com/p8flrmcnba

— Virat Kohli (@imVkohli)

 

ಅನುಷ್ಕಾ ಶರ್ಮಾಳ ವಿಡೀಯೋವನ್ನ ಪೋಸ್ಟ್ ಮಾಡಿರುವ ಕೊಹ್ಲಿ, ಇಂತಹ ಅಕ್ಷರಸ್ಥರಿಂದಲೇ ದೇಶದ ಸ್ವಚ್ಚತೆ ಹಾಳಾಗುತ್ತಿದೆ. ಇವರಿಂದ ದೇಶ ಸ್ವಚ್ಚವಾಗಲು ಸಾಧ್ಯವೇ? ಇಂತಹ ಘಟನೆ ಕಂಡರೆ ಅನುಷ್ಕಾ ಶರ್ಮಾಳಂತೆ ವರ್ತಿಸಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಅನುಷ್ಕಾ ಕಾರ್ಯಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

click me!