ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ಈಗ ವೈರಲ್ ಆಗಿದ್ದು ನೆಟ್ಟಿಗರಲ್ಲಿ, ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ಈಗ ವೈರಲ್ ಆಗಿದ್ದು ನೆಟ್ಟಿಗರಲ್ಲಿ, ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ವಿಶ್ವ ಸುಂದರಿ ಬಾಲಿವುಡ್ ತಾರೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ವಿಚಾರ ಕೆಲ ತಿಂಗಳಿಂದ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಬಹುತೇಕರಿಗೆ ಗೊತ್ತೆ ಇದೆ. ಅವರು ತಮ್ಮ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ ಎಂದು ಬಹುತೇಕ ಸಿನಿಮಾ ಮಾಧ್ಯಮಗಳು ವರದಿ ಮಾಡಿದ್ದವು. ಇದರ ಜೊತೆ ಅಭಿಷೇಕ್ ಅವರು ಹಲವು ಕಾರ್ಯಕ್ರಮಗಳಿಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಕಾಣಿಸಿಕೊಳ್ಳದೇ ಇದ್ದಾಗ ಇವರಿಬ್ಬರು ನಿಜವಾಗಿಯೂ ದೂರವಾಗಿದ್ದಾರೆ ಎಂಬ ಈ ಗಾಸಿಪ್‌ಗಳಿಗೆ ತುಪ್ಪ ಸುರಿದಂತಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ಅವರು ತಮ್ಮ ಅತ್ತೆ ಮಾವನ ಮನೆ ಜಲ್ಸಾದಿಂದ ಹೊರಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎಂದು ವರದಿ ಆಗಿತ್ತು. ಈಗ ನೆಟ್ಟಿಗರು ಅಭಿಷೇಕ್ ಅವರು ಈ ಬಗ್ಗೆ ಮಾತನಾಡಿದ ವೀಡಿಯೋವೊಂದನ್ನು ಇಂಟರ್‌ನೆಟ್‌ನಲ್ಲಿ ಮುನ್ನೆಲೆಗೆ ತಂದಿದ್ದು, ವೈರಲ್ ಆಗುತ್ತಿದೆ.
ಐಶ್ವರ್ಯಾ ರೈಗೆ ಬೇಕೆಂದೇ ಅವಮಾನಿಸಿದ್ರಾ ಅತ್ತಿಗೆ ಶ್ವೇತಾ ಬಚ್ಚನ್
ರೆಡ್ಡಿಟ್ ಬಳಕೆದಾರರೊಬ್ಬರು ಈ ವೀಡಿಯೋವೊಂದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಹಳೆಯ ವೀಡಿಯೋ ಆಗಿದೆ. 2018ರಲ್ಲಿ ಮನಮರ್ಜಿಯನ್ ಸಿನಿಮಾದ ಪ್ರಮೋಷನ್ ವೇಳೆ ಸಂದರ್ಶನ ಮಾಡುತ್ತಿದ್ದ ವ್ಯಕ್ತಿ ಅಭಿಷೇಕ್ ಪ್ರಸ್ತುತ ಎಲ್ಲಿ ವಾಸವಿದ್ದಾರೆ ಎಂಬ ಬಗ್ಗೆ ಸಹ ನಟ ವಿಕ್ಕಿ ಕೌಶಲ್ ಅವರ ಬಳಿ ಕೇಳಿದ್ದರು. ಇದರಲ್ಲಿ ಪರೋಕ್ಷವಾಗಿ ಸಂದರ್ಶನ ನಡೆಸಿದವರು, ಹೀಗೆ ಕೇಳಿದ್ದರು. 'ಅಭಿಷೇಕ್ ಅವರ ಮನೆಯ ಹೆಸರು ಏನು' ಇದಕ್ಕೆ ವಿಕ್ಕಿ ಕೌಶಲ್ ಪ್ರತಿಕ್ರಿಯಿಸುವ ವೇಳೆ ಅಭಿಷೇಕ್ ಬಚ್ಚನ್ ಅವರು ಆತನ ಉತ್ತರಕ್ಕಾಗಿ ಬಹಳ ಉತ್ಸಾಹದಿಂದ ಕಾದಿದ್ದರು ಅಲ್ಲದೇ ಆತನಿಗೆ ಕ್ಲೂ ಕೂಡ ನೀಡಿದ್ದರು. ಆದರೆ ಕೊನೆಗೆ ವಿಕ್ಕಿ ಕೌಶಲ್ ಇದಕ್ಕೆ ಜಲ್ಸಾ ಎಂದು ಉತ್ತರ ನೀಡಿದ್ದರು. ಆದರೆ ಅಭಿಷೇಕ್ ಅವರು ಈ ಉತ್ತರ ಸತ್ಯವಲ್ಲ ಎಂಬುದನ್ನು ಹೇಳಿದ್ದರು.
ಐಶ್ವರ್ಯಾ ರೈ ಅಭಿಷೇಕ್ ವಿಚ್ಛೇದನದ ಸುದ್ದಿಯ ಜೊತೆಗೆ ಮುನ್ನೆಲೆಗೆ ಬಂತು ಐಶ್ ವಿವೇಕ್ ಒಡನಾಟ!
ಈ ಉತ್ತರ ನಿಜವಾಗಿಯೂ ತಪ್ಪು ಜಲ್ಸಾದಲ್ಲಿ ನನ್ನ ಪೋಷಕರು ವಾಸ ಮಾಡುತ್ತಿದ್ದಾರೆ. ನಾನು ವತ್ಸಾದಲ್ಲಿ ವಾಸ ಮಾಡುತ್ತಿದ್ದೇನೆ. ಇದು ಜಲ್ಸಾದ ಪಕ್ಕದಲ್ಲೇ ಇದೇ ಎಂದಿದ್ದರು ಅಭಿಷೇಕ್. ಈ ವೀಡಿಯೋ ಈಗ ಮತ್ತೆ ವೈರಲ್ ಆಗಿದ್ದು, ಹಾಗಾದರೆ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಅವರು ಅತ್ತೆ ಮಾವ ಅಮಿತಾಭ್ ಹಾಗೂ ಜಯಾ ಬಚ್ಚನ್ ಅವರಿಂದ ದೂರಾಗಿ ಬೇರೆಯದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬುದನ್ನು ಜನ ಊಹಿಸಿದ್ದಾರೆ. ನಾವು ಈ ವಿಚಾರವನ್ನು ಮೊದಲೇ ಊಹಿಸಿದ್ದೆವು ಎಂದು ಕೆಲವರು ಈ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ. ಎರಡೂ ಮನೆಯೂ ಹತ್ತಿರ ಹತ್ತಿರವೇ ಇದೆ. ಹೀಗಾಗಿಯೇ ಎಲ್ಲರೂ ಅವರನ್ನು ಜಲ್ಸಾದಲ್ಲಿ ಜೊತೆಯಾಗಿಯೇ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಪುತ್ರನನ್ನು ತಬ್ಬಿಕೊಂಡ ಆರಾಧ್ಯ ಬಚ್ಚನ್ : ಅಮ್ಮನಂತೆ ಮಗಳು ಎಂದ ನೆಟ್ಟಿಗರು
2018ರಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಅವರು 21 ಕೋಟಿ ಮೊತ್ತದ 5,500 ಚದರ ಅಡಿಯ ದೊಡ್ಡದಾದ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದರು. ಈ ಮನೆ ಖರೀದಿಸಿದ ಸಮಯದಲ್ಲೂ ಕೂಡ ಇವರಿಬ್ಬರೂ ಅಮಿತಾಭ್ ಹಾಗೂ ಜಯಾ ಬಚ್ಚನ್ ಅವರು ವಾಸವಿರುವ ಜಲ್ಸಾದಿಂದ ಹೊರ ಬಂದಿದ್ದಾರೆ ಎಂಬ ಗಾಸಿಪ್ ದೊಡ್ಡದಾಗಿ ಹಬ್ಬಿತ್ತು. ಇತ್ತ ಬಚ್ಚನ್ ಕುಟುಂಬವೂ 2 ದಶಕದಿಂದಲೂ ಇದೇ ಮನೆಯಲ್ಲಿ ವಾಸ ಮಾಡುತ್ತಿದೆ. ಆದರೂ ಇವರಿಗೆ ಆತ್ಮೀಯರಾಗಿದ್ದ ವ್ಯಕ್ತಿಯೊಬ್ಬರು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ದಂಪತಿ ಜಲ್ಸಾವನ್ನು ತೊರೆದಿದ್ದಾರೆ ಎಂದು ಹೇಳಿದ್ದರು.